ರಾಹುಲ್ ದ್ರಾವಿಡ್ ಮೇಲೆ ದಾಳಿ ಮಾಡಿದ್ದ ಅಭಿಮಾನಿ
ಬೆಂಗಳೂರು, ಜ. 23: ಅದು ಭಾರತದ ಮತ್ತು ದಕ್ಷಿಣ ಆಫ್ರಿಕಾ ನಡುವಿನ 1999 ರ ವಿಶ್ವಕಪ್ ಏಕದಿನ ಪಂದ್ಯ. ಟಾಸ್ ಗೆದ್ದ ಭಾರತ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತ್ತು.
ರಾಹುಲ್ ದ್ರಾವಿಡ್ ತಮ್ಮ ಮೊದಲ ವಿಶ್ವಕಪ್ ಪಂದ್ಯದಲ್ಲಿ 75 ಚೆಂಡು ಎದುರಿಸಿ 54 ರನ್ ಗಳಿಸಿದ್ದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ಆಫ್ರಿಕನ್ನರು 47.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದ್ದರು.[ವಿಶ್ವಕಪ್ ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

ಪಂದ್ಯ ಮುಗಿದ ನಂತರ ಭಾರತದ ನಾಯಕ ಮೊಹಮದ್ ಅಜರುದ್ದೀನ್ ಮತ್ತು ದ್ರಾವಿಡ್ ಫೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿದ್ದಾಗ, ಧುತ್ತೆಂದು ಎದುರಾದ ಆಕ್ರೋಶಗೊಂಡಿದ್ದ ಅಭಿಮಾನಿ ಏಕಾಏಕಿ ಇಬ್ಬರ ಮೇಲೂ ದಾಳಿ ಮಾಡಿದ.
ನಾನು ಆತನಿಂದ ದೂರ ಸರಿಯಲು ಯತ್ನಿಸಿದೆ. ಆದರೂ ಬಿಡದೇ ಮೈಮೇಲೆ ಬಂದು ಬಿದ್ದ. ಕೂಡಲೇ ಇತರ ಆಟಗಾರರನ್ನು ಮತ್ತು ರಕ್ಷಣಾ ಸಿಬ್ಬಂದಿ ಕರೆಯಲು ನಾನು ಯತ್ನಿಸಿದೆ ಎಂದು ಘಟನೆಯ ನಂತರ ಅಜರುದ್ದೀನ್ ಹೇಳಿದ್ದರು.[ಪ್ರೇರಣೆ ನೀಡುವ ಪಾಕ್ ವಿರುದ್ಧದ ಪಂದ್ಯ:ಶ್ರೀನಾಥ್]
ಇಂಥ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಅಭಿಮಾನಿಗಳು ಒರಟು ವರ್ತನೆ ತೋರಿದರೆ ಅದು ಆಟಗಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಮುಂದೆ ಇಂಥ ಘಟನಾವಳಿಗಳಿಗೆ ಆಡಳಿತ ಅವಕಾಶ ನೀಡಬಾರದು ಎಂದು ಅಜರುದ್ದೀನ್ ಮನವಿ ಮಾಡಿದ್ದರು.
ರಾಹುಲ್ ದ್ರಾವಿಡ್ ಭಾರತದ ಪರ 1999ರ ವಿಶ್ವಕಪ್ ಅತಿ ಹೆಚ್ಚು ರನ್ ಗಳಿಕೆ ಸಾಧನೆ ಮಾಡಿದರು. 8 ಇನಿಂಗ್ಸ್ ನಲ್ಲಿ 461 ರನ್ ಗಳಿಸಿದರು. ಅದರಲ್ಲಿ 2 ಶತಕ ಮತ್ತು 3 ಅರ್ಧಶತಕಗಳಿದ್ದವು. ಆದರೆ ಭಾರತ ಸೆಮಿಫೈನಲ್ ಹಂತಕ್ಕೂ ತೇರ್ಗಡೆಯಾಗದೇ ನಿರ್ಗಮಿಸಿತ್ತು.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications