2023ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಪದಕವನ್ನು ಗೆದ್ದುಕೊಂಡಿದ್ದಾರೆ ಯುವ ರೆಸ್ಲರ್ ಅಂತಿಮ್ ಪಂಘಲ್. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಈ ಯುವ ರೆಸ್ಲರ್ ಎಮ್ಮಾ ಜೊನ್ನಾ ಮಾಲ್ಮ್‌ಗ್ರೆನ್ ಅವರನ್ನು ಎದುರಿಸಿದರು. 53 ಕೆಜಿ ವಿಭಾಗದ ಈ ಸ್ಪರ್ಧೆಯಲ್ಲಿ ಭಾರತದ ರೆಸ್ಲರ್ ಅದ್ಭುತ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಿಂದಿಗೆ ಅವರು ಮುಂದಿನ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೂಡ ಅರ್ಹತೆಯನ್ನು ಸಂಪಾದಿಸಿದ್ದಾರೆ.
ಆಂಟಿಮ್ ಪಂಘಲ್ ಮತ್ತು ಎಮ್ಮಾ ಜೊನ್ನಾ ಮಾಲ್ಮ್‌ಗ್ರೆನ್ ನಡುವಿನ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿದ ಹಾಗೂ ರೋಚಕವಾದ ಸೆಣೆಸಾಟವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿಸುವ ಎಲ್ಲಾ ರೋಚಕ ಕ್ಷಣಗಳು ಕೂಡ ಈ ಮುಖಾಮುಖಿಯಲ್ಲಿತ್ತು.

ಈ ರೋಮಾಂಚಕ ಕಾದಾಟದಲ್ಲಿ ಮಾಲ್ಮ್‌ಗ್ರೆನ್‌ರನ್ನು ಮೀರಿಸುವ ಮೂಲಕ ಭಾರತದ ಪಂಗಲ್ ಮೇಲುಗೈ ಸಾಧಿಸಿದ್ದಾರೆ. ಭಾರತೀಯ ಕುಸ್ತಿಪಟು ತಾಂತ್ರಿಕ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಶ್ರೇಷ್ಠತೆಯ ಸಂಯೋಜನೆಯನ್ನು ಪ್ರದರ್ಶಿಸಿದರು. ಇದು ಅವರ ಅತ್ಯುತ್ತಮ ಅಭ್ಯಾಸ ಮತ್ತು ಉತ್ತಮ-ರಚನಾತ್ಮಕ ಆಟದ ಯೋಜನೆಗೆ ಸಾಕ್ಷಿಯಾಗಿದೆ.
ಮಾಲ್ಮ್‌ಗ್ರೆನ್‌ರ ಆಕ್ರಮಣಕಾರಿ ಕಾರ್ಯತಂತ್ರಕ್ಕೆ ಪ್ರತಿಯಾಗಿ ಸರಿಯಾದ ಚಾಣಾಕ್ಷ ರಣತಂತ್ರದ ಪ್ರತ್ಯುತ್ತರ ನೀಡಿದ ಆಂತಿಮ್ ಪಂಘಲ್ ತನ್ನ ಗೆಲುವನ್ನು ಖಚಿತಪಡಿಸಿದರು. ಸ್ವೀಡಿಷ್ ಕುಸ್ತಿಪಟುವಿನ ಪ್ರತಿ ದಾಳಿಯನ್ನು ಪಂಗಲ್ ಅವರು ಚುರುಕಾಗಿ ಎದುರಿಸಿದ್ದಾರೆ. ಅವರು ಮಾಲ್ಮ್‌ಗ್ರೆನ್‌ನನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಕಂಚಿಕ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಅಂತಿಮ್ ಪಂಘಲ್ 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ವನೇಸಾ ಕಲಾಡ್ಜಿನ್ಸ್ಕಾಯಾ ಅವರನ್ನು ಎದುರಿಸಿದ್ದರು. ಆ ಪಂದ್ಯದಲ್ಲಿ ಅಂತಿಮ್ ಪಂಘಲ್ ಸೋಲು ಕಂಡಿದ್ದರು. ಆ ಪಂದ್ಯಕ್ಕೂ ಮುನ್ನಭಾರತದ ಯುವ ಆಟಗಾರ್ತಿ ಅಂತಿಮ್ ಪಂಘಲ್ ಹಾಲಿ ವಿಶ್ವ ಚಾಂಪಿಯನ್ ಒಲಿವಿಯಾ ಡೊಮಿನಿಕ್ ಪ್ಯಾರಿಶ್ ಅವರನ್ನು ಸೋಲಿಸಿ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದರು. ಯುವ ಆಟಗಾರ್ತಿ ಆರಂಭದಲ್ಲಿ 0-2 ಅಂತರದಿಂದ ಹಿನ್ನಡೆಯಲ್ಲಿದ್ದರೂ ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಅಂತಿಮವಾಗಿ ಅವರು ಪಂದ್ಯವನ್ನು 3-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.