For Quick Alerts
ALLOW NOTIFICATIONS  
For Daily Alerts

ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್: ಕ್ವಾ. ಫೈನಲ್‌ನಲ್ಲಿ ಬಜರಂಗ್ ಪುನಿಯಾಗೆ ಸೋಲು: ಚಿನ್ನದ ಕನಸು ಭಗ್ನ

World Wrestling Championships: Bajrang Punia defeated in quarterfinal

ಮೂರು ಬಾರಿ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಬಜರಂಗ್ ಪುನಿಯಾ ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಕ್ವಾರ್ಟರ್‌ಫೈನಲ್ ಹಂತದಲ್ಲಿ ಅಮೆರಿಕಾದ ಯಿಯಾನಿ ಡಯಾಕೋಮಿಹಾಲಿಸ್ ವಿರುದ್ಧದ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಭಾರತೀಯ ರೆಸ್ಲರ್‌ನ ಹೋರಾಟ ಅಂತ್ಯವಾಯಿತು. ಈ ಮೂಲಕ 2022ರ ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಭಗ್ನವಾಗಿದೆ.

ರವಿ ದಹಿಯಾ ಅವರ ಆಘಾತಕಾರಿ ನಿರ್ಗಮನದ ನಂತರ ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಪದಕದ ಭರವಸೆ ಬಜರಂಗ್ ಪುನಿಯಾ ಮೇಲೆ ಮಾತ್ರ ನಿಂತಿತ್ತು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕಾದ ರೆಸ್ಲರ್ ವಿರುದ್ಧ ದಿಟ್ಟ ಹೋರಾಟ ಪ್ರದರ್ಶಿಸಲು ಬಜರಂಗ್ ಪೂನಿಯಾ ವಿಫಲವಾದರು. 0-10 ಅಂತರದಲ್ಲಿ ಅಮೆರಿಖಾದ ರೆಸ್ಲರ್ ವಿರುದ್ಧ ಪುನಿಯಾ ಸೋಲು ಅನುಭವಿಸಿದ್ದಾರೆ.

ಬಜರಂಗ್ ಪುನಿಯಾಗೆ ಕಂಚಿನ ಪದಕ ಗೆಲ್ಲುವ ಅವಕಾಶ ಇನ್ನೂ ಇದ್ದು ಇದಕ್ಕಾಗಿ ಇಂದು ಬಜರಂಗ್ ಪುನಿಯಾ ಅವರನ್ನು ಮಣಿಸಿದ ಅಮೆರಿಕಾದ ಕುಸ್ತಿ ಪಟು ಯಿಯಾನಿ ಡಯಾಕೋಮಿಹಾಲಿಸ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಬೇಕಿದೆ. ಮತ್ತೊಂದೆಡೆ ಸಾಗರ್ ಜಗ್ಲಾನ್ 74 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಈ ಪಂದ್ಯಕ್ಕೂ ಮುನ್ ಭಾರತೀಯ ಆಟಗಾರ ಬಜರಂಗ್ ಪುನಿಯಾ ಪ್ರೀ-ಕ್ವಾರ್ಟರ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಮಡಿದ್ದರು. 65 ಕೆಜಿ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಕ್ಯೂಬಾದ ಅಲೆಜಾಂಡ್ರೊ ಎನ್ರಿಕ್ ಟೋಬಿಯರ್ ಅವರನ್ನು 5-4 ರಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೆ ಮುನ್ನಡೆ ಪಡೆದುಕೊಂಡಿದ್ದರು. ಈ ಪಂದ್ಯದ ಪ್ರಾರಂಭದಲ್ಲಿ, ಬಜರಂಗ್ ತನ್ನ ಎದುರಾಳಿಗೆ ಎರಡು ಅಂಕಗಳನ್ನು ಬಿಟ್ಟುಕೊಟ್ಟಿದ್ದರು ಬಳಿಕ ಅವರು ಗಾಯಕ್ಕೆ ಒಳಗಾಗಿದ್ದರು. ನಂತರ ಚಿಕಿತ್ಸೆ ಪಡೆದುಕೊಂಡು ತಲೆಗೆ ಬ್ಯಾಂಡೇಜ್ ಸುತ್ತಿಕೊಂಡು ಕಣಕ್ಕಿಳಿದಿದ್ದರು. ಇಂಥಾ ಪರುಸ್ಥಿತಿಯಲ್ಲಿಯೂ ಬಜರಂಗ್ ಪುನಿಯಾ ಅದ್ಭುತ ಪ್ರದರ್ಶನ ನೀಡಿ ಈ ಪಂದ್ಯವನ್ನು 5-4 ಅಂತರದಿಂದ ಗೆದ್ದುಕೊಂಡಿದ್ದರು.

ಕಳೆದ ವರ್ಷ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದ ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನಿಡಿದ್ದರು. ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕವನ್ನು ಗೆದ್ದು ವಿಶೇಷ ಸಾಧನೆ ಮಾಡಿದ್ದರು. ಆದರೆ ಅದೇ ಫಾರ್ಮ್‌ಅನ್ನು ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ.

Story first published: Saturday, September 17, 2022, 18:21 [IST]
Other articles published on Sep 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+