For Quick Alerts
ALLOW NOTIFICATIONS  
For Daily Alerts

ವಿಶ್ವ ರೆಸ್ಲಿಂಗ್ ಚಾಂಪಿಯನ್‌ಶಿಪ್: ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಅಂತಿಮ್ ಪಂಘಲ್

19ರ ಹರೆಯದ ಭಾರತದ ಯುವ ರೆಸ್ಲರ್ ಆಂತಿಮ್ ಪಂಘಲ್ ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2023ರಲ್ಲಿ ಚಿನ್ನದಪದಕ ಗೆಲ್ಲುವ ಕನಸನ್ನು ಭಗ್ನಗೊಳಿಸಿದ್ದಾರೆ. 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಬೆಲಾರಸ್‌ನ ವನೇಸಾ ಕಲಾಡ್ಜಿನ್ಸ್ಕಾಯಾ ವಿರುದ್ಧ ಅಂತಿಮ್ ಪಂಘಲ್ ಸೋಲು ಕಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಕಲಾಡ್ಜಿನ್ಸ್ಕಾಯಾ ಅವರು ಪಂಗಲ್ ಅವರನ್ನು 5-4 ರಿಂದ ಮಣಿಸಿದ್ದಾರೆ. ಬೆಲಾರಸ್‌ನ 30ರ ಹರೆಯದ ರೆಸ್ಲರ್ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಭಾರತದ ವಿನೇಶ್ ಫೋಗಟ್‌ಗೆ ಸೋಲಿನ ರುಚಿ ತೋರಿಸಿದ್ದರು.

World Wrestling Championships: Indian Wrestler Antim Panghal lost match in semi-final

ಇನ್ನು ಈ ಗೆಲುವಿನೊಂದಿಗೆ ಕಲಾಡ್ಜಿನ್ಸ್ಕಾಯಾ ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೆ ಸ್ಥಾನವನ್ನು ಖಚಿತಪಡಿಸಿದ್ದಾರೆ. ಇದೀಗ ಅವರು ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ್ಕಾಗಿ ಜಪಾನ್‌ನ ಅಕಾರಿ ಫುಜಿನಾಮಿ ಅವರನ್ನು ಎದುರಿಸಲಿದ್ದಾರೆ. ಫುಜಿನಾಮಿ ಮತ್ತೊಂದು ಸೆಮಿಫೈನಲ್‌ನಲ್ಲಿ ಗ್ರೀಸ್‌ನ ಮರಿಯಾ ಪ್ರೆವೊಲರಕಿ ಅವರನ್ನು ಸೋಲಿಸಿದರು.

19 ವರ್ಷದ ಪಂಘಲ್‌ಗೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರೂ ಕಂಚಿನ ಪದಕ ಗೆಲ್ಲುವ ಅವಕಾಶ ಉಳಿಸಿಕೊಂಡಿದ್ದಾರೆ. ಸೆಪ್ಟೆಂಬರ್ 21 ಗುರುವಾರದಂದು ಕಂಚಿನ ಪದಕಕ್ಕಾಗಿ ಅಂತಿಮ ಪಂಘಲ್‌ಗೆ ಗೆಲ್ಲುವ ಅವಕಾಶವಿದೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಯುವ ಆಟಗಾರ್ತಿಯ ಭರವಸೆ ಇನ್ನೂ ಜೀವಂತವಾಗಿದ್ದು ಕಂಚಿನ ಪದಕ್ಕಾಗಿ ನಡೆಯುವ ಪಂದ್ಯದಲ್ಲಿ ಗೆದ್ದರೆ ಅರ್ಹತೆಯನ್ನು ಪಡೆದುಕೊಳ್ಳಲಿದ್ದಾರೆ.

ಇನ್ನು ಇದಕ್ಕೂ ಮುನ್ನ ಅಂತಿಮ್ ಪಂಘಲ್ ಹಾಲಿ ವಿಶ್ವ ಚಾಂಪಿಯನ್ ಒಲಿವಿಯಾ ಡೊಮಿನಿಕ್ ಪ್ಯಾರಿಶ್ ಅವರನ್ನು ಸೋಲಿಸಿ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದರು. ಯುವ ಆಟಗಾರ್ತಿ ಆರಂಭದಲ್ಲಿ 0-2 ಅಂತರದಿಂದ ಹಿನ್ನಡೆಯಲ್ಲಿದ್ದರೂ ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಅಂತಿಮವಾಗಿ ಅವರು ಪಂದ್ಯವನ್ನು 3-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

Story first published: Wednesday, September 20, 2023, 23:04 [IST]
Other articles published on Sep 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+