WPL 2024: ನಮ್ ಮನಸು ನಮ್ಗೆ ಒಳ್ಳೆದು ಮಾಡಿದ್ರೆ ದೇವ್ರು... ಟ್ರೋಫಿ ಎಲ್ಲ ಯಾಕೆ? ಏನಂತೀರಾ?
ಗುರುವಾರ, ಫೆಬ್ರವರಿ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ 7ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಡೆಲ್ಲಿ ಕ್ಯಾಪಿಟಲ್ಸ್ (ಜಿಜಿ) ತಂಡದ ವಿರುದ್ಧ 25 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಹಿಂದಿನ ತನ್ನ ಎರಡು ಪಂದ್ಯಗಳನ್ನು ಗೆದ್ದಿದ್ದ ಆರ್‌ಸಿಬಿ ತಂಡ ತವರಿನ ಅಭಿಮಾನಿಗಳ ಎದುರು ಮೊದಲು ಸೋಲು ಕಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿಯಿತು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ನಿರ್ಧಾರ ಕೈಕೊಟ್ಟಿತು. ಏಕೆಂದರೆ, ಬೌಲರ್‌ಗಳು ದುಬಾರಿಯಾದರು ಮತ್ತು ಕಳಪೆ ಫೀಲ್ಡಿಂಗ್ ಪ್ರದರ್ಶನದಿಂದ ಅಧಿಕ ರನ್ ಬಿಟ್ಟುಕೊಟ್ಟರು.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಫಾಲಿ ವರ್ಮಾ ಮತ್ತು ಆಲಿಸ್ ಕ್ಯಾಪ್ಸಿ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 194 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇನ್ನು 195 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಕೇವಲ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 169 ರನ್ ಗಳಿಸಿ 25 ರನ್‌ಗಳಿಂದ ಹಿನ್ನಡೆಗೆ ಒಳಗಾಯಿತು. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಸ್ಮೃತಿ ಮಂಧಾನ ಪಡೆ ನಿರಾಸೆ ಅನುಭವಿಸಿದೆ.

ಕೊನೆಯವರೆಗೂ ಆರ್‌ಸಿಬಿ ಅಭಿಮಾನಿಯಾಗಿರೋಣ
ಇನ್ನು ಮಂಗಳವಾರ, ಫೆಬ್ರವರಿ 27ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯಾವಳಿಯ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಿತ್ತು ಮತ್ತು ಅಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.
ಇದೇ ವೇಳೆ ಆರ್‌ಸಿಬಿ ತಂಡದ ಲಾಯಲ್ ಅಭಿಮಾನಿಯೊಬ್ಬ ಸ್ಟ್ಯಾಂಡ್‌ನಲ್ಲಿ ಹಿಡಿದು ನಿಂತಿದ್ದ ಪೋಸ್ಟರ್ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕಿನ ವಾಕ್ಯವನ್ನು ಬರೆದುಕೊಂಡು ಬಂದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶ್ವದಲ್ಲಿಯೇ ಅತ್ಯುತ್ತಮ ಹಾಗೂ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ. ಅದು ಪ್ರತಿ ವರ್ಷದ ಐಪಿಎಲ್ ವೇಳೆ ಸಾಬೀತಾಗುತ್ತಲೇ ಬಂದಿದೆ.

2008ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭವಾದಾಗಿನಿಂದ ಪ್ರಶಸ್ತಿ ಗೆಲ್ಲದ ಕೆಲವೇ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದೆ. ಆದರೂ, ತಂಡಕ್ಕೆ ಅಭಿಮಾನಿಗಳ ಕ್ರೇಜ್ ಹೆಚ್ಚುತ್ತಲೇ ಇದೆ.
ಅದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿಯೂ ಮುಂದುವರೆದಿದೆ. ಆರ್‌ಸಿಬಿ ತಂಡಕ್ಕಿರುವ ಫ್ಯಾನ್ ಬೇಸ್ ಮತ್ತು ಕ್ರೇಜ್ ನೋಡಿ ಇತರ ತಂಡಗಳನ್ನೂ ದಿಗ್ಭ್ರಮೆಗೊಳಿಸಿದೆ.
ಇದೀಗ ಮಹಿಳಾ ಪ್ರೀಮಿಯರ್ ಲೀಗ್‌ನ ಆರ್‌ಸಿಬಿ ತಂಡದ ಪಂದ್ಯದಲ್ಲಿ ಅಭಿಮಾನಿಯೊಬ್ಬ ವೈರಲ್ ವಿಡಿಯೋದ ಸಂಭಾಷಣೆಗೆ ಪರ್ಯಾಯ ಸಂಭಾಷಣೆ ಬರೆದುಕೊಂಡು ಬಂದು ಮತ್ತೊಮ್ಮೆ ವೈರಲ್ ಮಾಡಿದ್ದಾರೆ.
"ನಮ್ಮ ಮನಸ್ಸು ನಮಗೆ ಒಳ್ಳೆಯದು ಮಾಡಿದ್ರೆ ದೇವರು, ಈ ಟ್ರೋಫಿ ಎಲ್ಲ ಯಾಕೆ ಬೇಕು. ಸಾಯೋತನಕ ಆರ್‌ಸಿಬಿ ಅಭಿಮಾನಿಯಾಗಿರೋಣ. ಏನಂತೀರಾ...?" ಎನ್ನುವ ಬ್ಯಾಟರ್ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಭಾರೀ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications