Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಸ್ಲಿಂಗ್ Ranking: ವಿಶ್ವ ನಂ.1 ಸ್ಥಾನಕ್ಕೇರಿದ ಭಾರತದ ಬಜರಂಗ್ ಪೂನಿಯಾ

Wrestler Bajrang Punia Becomes World Number One in 65kg Category

ನವದೆಹಲಿ, ನವೆಂಬರ್ 10: ಭಾರತದ ಸ್ಟಾರ್ ರಸ್ಲರ್ ಬಜರಂಗ್ ಪೂನಿಯಾ, ರಸ್ಲಿಂಗ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಶನಿವಾರ (ನವೆಂಬರ್ 10) ಪ್ರಕಟಿಸಲಾಗಿರುವ ರ್ಯಾಂಕಿಂಗ್‌ನಲ್ಲಿ ಪುರುಷರ 65 ಕೆಜಿ ವಿಭಾಗದಲ್ಲಿ ಬಜರಂಗ್ ಅಗ್ರ ಸ್ಥಾನದಲ್ಲಿ ಮಿಂಚಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ, ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಸೇರಿ ಈ ಸೀಸನ್ ನಲ್ಲಿ ಒಟ್ಟು 5 ಪದಕಗಳನ್ನು ಗೆದ್ದಿದ್ದರಿಂದ ಭಜರಂಗ್‌ಗೆ ರ್ಯಾಂಕಿಂಗ್‌ನಲ್ಲಿ ವಿಶ್ವದಲ್ಲಿ ಮೊದಲ ಸ್ಥಾನ ಆವರಿಸಿಕೊಳ್ಳಲು ಅವಕಾಶ ಲಭಿಸಿದೆ.

ಪ್ರಸ್ತುತ ರ್ಯಾಂಕಿಂಗ್ ನಲ್ಲಿ (65 ಕೆಜಿ ವಿಭಾಗ) ಪೂನಿಯ 96 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. 66 ಪಾಯಿಂಟ್ ಗಳಿಸಿರುವ ಕ್ಯೂಬಾ ರಸ್ಲರ್ ಅಲೆಜಾಂಡ್ರೊ ಎನ್ರಿಕೆ ವಾಲ್ಡೆಸ್ ಟೋಬಿರ್ ದ್ವಿತೀಯ ಸ್ಥಾನದಲ್ಲಿ, ರಷ್ಯಾದ ಅಖ್ಮೆದ್ ಚಕೆವ್ (62 ಪಾಯಿಂಟ್ಸ್), ಜಪಾನ್‌ನ ಟಕುಟೊ ಓಟೊಗ್ರೊ (56 ಪಾಯಿಂಟ್ಸ್), ಟರ್ಕಿಯ ಸೆಲ್ಲಾಹಟ್ಟಿನ್ ಕಿಲ್ಸಿಲ್ಯಾಲೇನ್ (50 ಪಾಯಿಂಟ್ಸ್) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Saturday, November 10, 2018, 17:53 [IST]
Other articles published on Nov 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+