ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಸ್ಲರ್ ಸುಮಿತ್ ಮಲಿಕ್

ಸೋಫಿಯಾ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಾಲ್ಕನೇ ಭಾರತೀಯ ಪುರುಷ ರಸ್ಲರ್ ಆಗಿ ಸುಮಿತ್ ಮಲಿಕ್ ಗುರುತಿಸಿಕೊಂಡಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವರ್ಲ್ಡ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ 125 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಸುಮಿತ್, ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದುಕೊಂಡಿದ್ದಾರೆ.
ಭಾರತೀಯ ಪುರುಷರ ಫ್ರೀ ಸ್ಟೈಲ್ ರಸ್ಲಿಂಗ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡವರೆಂದರೆ ರವಿ ದಾಹಿಯಾ (57 ಕೆಜಿ ವಿಭಾಗ), ಭಜರಂಗ್ ಪೂನಿಯಾ (65 ಕೆಜಿ), ದೀಪಕ್ ಪೂನಿಯಾ (86 ಕೆಜಿ). ಈ ಸಾಲಿಗೆ ಸುಮಿತ್ ಮಲಿಕ್ ಕೂಡ ಈಗ ಸೇರಿಕೊಂಡಿದ್ದಾರೆ.
2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆದ್ದಿದ್ದ ಸುಮಿತ್ ಮಲಿಕ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುತ್ತಿರುವುದು ಇದೇ ಮೊದಲ ಬಾರಿ. ಬಲ್ಗೇರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸುವ ಸ್ಪರ್ಧಿಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.
125 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸುಮಿತ್, ಕಿರ್ಗಿಸ್ಥಾನ್‌ನ ಐಯಾಲ್ ಲಾಜರೆವ್ ಎದುರು 2-2ರ ಸಮಬಲದ ಅಂಕ ಪಡೆದುಕೊಳ್ಳುವುದರೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications