Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೈಲಿನಲ್ಲಿ ವಿಶೇಷ ಆಹಾರ ಬೇಕೆಂದ ರಸ್ಲರ್ ಸುಶೀಲ್ ಕುಮಾರ್

Wrestler Sushil Kumar Wanted Special Diet In Jail, Delhi Court denies

ನವದೆಹಲಿ: ಕಿರಿಯ ರಸ್ಲರ್ ಸಾಗರ್ ಧನ್‌ಕಾರ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಒಲಿಂಪಿಕ್ಸ್ ಪದಕ ವಿಜೇತ ರಸ್ಲರ್ ಸುಶೀಲ್ ಕುಮಾರ್ ತನಗೆ ಜೈಲಿನಲ್ಲಿ ವಿಶೇಷ ಆಹಾರ ನೀಡಬೇಕೆಂಬ ಬೇಡಿಕೆಯಿಟ್ಟಿದ್ದಾರೆ. ಸುಶೀಲ್ ಬೇಡಿಕೆಯನ್ನು ದೆಹಲಿಯ ರೋಹಿಣಿ ಕೋರ್ಟ್ ನಿರಾಕರಿಸಿದೆ.

ದೆಹಲಿ ಸ್ಟೇಡಿಯಂನಲ್ಲಿ ರಸ್ಲರ್‌ಗಳ ನಡುವೆ ನಡೆದ ಜಗಳದಲ್ಲಿ ಸಾಗರ್ ಧನ್‌ಕಾರ್ ಎಂಬ ರಸ್ಲರ್ ಹಲ್ಲೆಗೊಳಗಾಗಿ ಅಸುನೀಗಿದ್ದ. ಈ ಸಾವಿನಲ್ಲಿ ಸುಶೀಲ್ ಕುಮಾರ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ಸುಶೀಲ್ ಕೂಡ ತಲೆ ಮರೆಸಿಕೊಂಡಿದ್ದರು. ಈಗ ಸುಶೀಲ್‌ ಅವರನ್ನು ಬಂಧಿಸಿ ವಿಚಾರಿಸಲಾಗುತ್ತಿದೆ. ಸುಶೀಲ್ ಈಗ ದೆಹಲಿಯ ಮಾಂಡೋಲಿ ಜೈಲಿನಲ್ಲಿದ್ದಾರೆ.

ಬಂಧಿಸಲ್ಪಟ್ಟ ಸುಶೀಲ್ ಅವರನ್ನು ರೋಹಿಣಿ ಕೋರ್ಟ್‌ ಸುರ್ಪದಿಗೆ ನೀಡಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿರುವ ಸುಶೀಲ್ ತನಗೆ ವಿಶೇಷ ಆಹಾರ, ಸಪ್ಲಿಮೆಂಟ್ಸ್‌, ದೈಹಿಕ ಅಭ್ಯಾಸದ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸೌಲಭ್ಯಗಳನ್ನು ಕೊಡದಿದ್ದರೆ ಆರೋಗ್ಯ ಹಾಳಾಗಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗಲಿದೆ ಎಂದಿದ್ದರು.

ಆದರೆ ಸುಶೀಲ್ ಕೋರಿಕೆಯನ್ನು ಕೋರ್ಟ್ ನಿರಾಕರಿಸಿದೆ. ನೀವು ಬೇಕೆಂದು ಕೇಳುತ್ತಿರುವುದು ಅನಿವಾರ್ಯ ವಸ್ತುಗಳೇನೂ ಅಲ್ಲ, ಬದುಕಿಗೆ ಅವು ತೀರಾ ಅಗತ್ಯ ವಸ್ತುಗಳೇನೂ ಅಲ್ಲ ಎಂದು ಕೋರ್ಟ್‌ ಹೇಳಿದೆ. ಪೊಲೀಸ್ ಮೂಲ ಹೇಳುವ ಪ್ರಕಾರ ಸಾಗರ್ ಕೊಲೆಯಲ್ಲಿ ಸುಶೀಲ್ ಪ್ರಮುಖ ಅಪರಾಧಿ ಮತ್ತು ಮಾಸ್ಟರ್ ಮೈಂಡ್.

Story first published: Wednesday, June 9, 2021, 22:38 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+