ಟ್ರಂಪ್ ನಂತರ ಯುಎಸ್ ಅಧ್ಯಕ್ಷ ಸ್ಥಾನ ಬಯಸಿದ WWE ಸ್ಟಾರ್
ವಾಷಿಂಗ್ಟನ್, ಮೇ 12: ವರ್ಲ್ಡ್ ರೆಸ್ಲಿಂಗ್ ಫೆಡರೆಷನ್(ಈಗ WWE) ನ ಹಾಲ್ ಆಫ್ ಫೇಮ್ ಸ್ಟಾರ್ ಎನಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷ ಸ್ಥಾನಕ್ಕೇರಿದ್ದು ರೋಚಕ ಕಥೆ. ಈಗ ಸ್ಟಾರ್ ಕುಸ್ತಿಪಟು, ನಟ ಡ್ವಾಯ್ನೆ ಜಾನ್ಸನ್ (ದಿ ರಾಕ್) ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಇಳಿಯುವುದಾಗಿ ಘೋಷಿಸಿದ್ದಾರೆ.
'ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ 2020ರಲ್ಲಿ ನಡೆಯುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದರೆ ಜನರು ಆಶ್ಚರ್ಯಪಡಬೇಕಿಲ್ಲ' ಎಂದು ಮಾಜಿ ಡ್ವಾಯ್ನ್ ಜಾನ್ಸನ್ ಹೇಳಿದ್ದಾರೆ.[WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್]

'ಜಿಕ್ಯೂ' ನಿಯತಕಾಲಿಕೆಗೆ ನೀಡಿ ಸಂದರ್ಶನದಲ್ಲಿ ಮಾತನಾಡಿದ ಜಾನ್ಸನ್, 'ಒಂದು ವೇಳೆ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುತ್ತೇನೆ' ಎಂದರು. ಇದೇ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳನ್ನು ಕಂಡಿಸಿದರು. 'ನನಗೆ ಸರಿ ಅನಿಸದ ವ್ಯಕ್ತಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ' ಎಂದು ಅವರು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications