ಸ್ಟಾರ್ ರಸ್ಲರ್ ವಿನೇಶ್ ಫೋಗಟ್‌ಗೆ ಕೊರೊನಾವೈರಸ್ ಪಾಸಿಟಿವ್

ನವದೆಹಲಿ: ಭಾರತದ ಸ್ಟಾರ್ ರಸ್ಲರ್ ವಿನೇಶ್ ಫೋಗಟ್‌ಗೆ ಕೊರೊನಾವೈರಸ್ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಫೋಗಟ್ ಅವರೇ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ತಾನೀಗ ಮನೆಯಲ್ಲಿ ಐಸೊಲೇಶನ್‌ನಲ್ಲಿರುವುದಾಗಿ ಏಷ್ಯನ್ ಗೇಮ್ಸ್ ಬಂಗಾರದ ಪದಕ ವಿಜೇತೆ ವಿನೇಶ್ ತಿಳಿಸಿದ್ದಾರೆ.
'ನೆನ್ನೆ ಒಳಗಾದ ಪರೀಕ್ಷೆಯಲ್ಲಿ ನನಗೆ ಕೋವಿಡ್-19 ಪಾಸಿಟಿವ್ ಬಂದಿದೆ. ನನಗೆ ರೋಗದ ಯಾವುದೇ ಗುಣಲಕ್ಷಣಗಳಿಲ್ಲ, ಅದರೂ ನಾನು ಮನೆಯಲ್ಲಿ ಐಸೊಲೇಶನ್‌ನಲ್ಲಿದ್ದೇನೆ. ನನ್ನೆಲ್ಲಾ ಕುಟುಂಬದ ಸದಸ್ಯರೂ ಐಸೊಲೇಶನ್‌ನಲ್ಲಿದ್ದಾರೆ' ಎಂದು ಫೋಗಟ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಿನೇಶ್ ಮುಂದುವರೆದ ಟ್ವೀನ್‌ನಲ್ಲಿ, 'ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಕೊಳ್ಳಿ ಎಂದು ನಾನು ಎಲ್ಲರಲ್ಲೂ ವಿನಂತಿಸಿಕೊಳ್ಳುತ್ತೇನೆ. ಎಲ್ಲರೂ ಸುರಕ್ಷತೆಯಲ್ಲಿರಿ. ಧನ್ಯವಾದಗಳು' ಎಂದು ಬರೆಯಲಾಗಿದೆ. ಶುಕ್ರವಾರ (ಆಗಸ್ಟ್ 28) ವಿನೇಶ್ ಈ ಟ್ವೀಟ್ ಮಾಡಿದ್ದಾರೆ.
ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರಕ್ಕಾಗಿ ಹೆಸರಿಸಲಾದ ಐದು ಮಂದಿಯಲ್ಲಿ ವಿನೇಶ್ ಪೋಗಟ್ ಹೆಸರೂ ಇತ್ತು. ಕೊರೊನಾ ಇರುವ ಕಾರಣ ವಿನೇಶ್‌ಗೆ ಆಗಸ್ಟ್ 29ರಂದು ನಡೆಯುವ ಕ್ರೀಡಾ ಪ್ರಶಸ್ತಿಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications