For Quick Alerts
ALLOW NOTIFICATIONS  
For Daily Alerts

WFI ಪ್ರತಿನಿಧಿಗಳ ವಿರುದ್ಧ ಮತ್ತೊಂದು ಗಂಭೀರ ಆರೋಪ: ದೂರು ವಾಪಾಸ್ ಪಡೆಯಲು ಬೆದರಿಕೆ: ಭಜರಂಗ್ ಪುನಿಯಾ

WFI ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ರೆಸ್ಲರ್‌ಗಳ ಪ್ರತಿಭಟನೆ ಜಂತರ್‌-ಮಂತರ್‌ನಲ್ಲಿ ಮುಂದುವರಿದಿದೆ. ಪ್ರತಿಭಟನಾ ಸ್ಥಳದಿಂದಲೇ ಸ್ಟಾರ್ ರೆಸ್ಲರ್ ಭಜರಂಗ್ ಪುನಿಯಾ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ(WFI)ದ ಪ್ರತಿನಿಧಿಗಳು ಮಹಿಳಾ ರೆಸ್ಲರ್‌ಗಳಿಗೆ ಬೆದರಿಕೆಯನ್ನು ಹಾಕಿದ್ದು ಹಣದ ಆಮಿಶವೊಡ್ಡಿದ್ದಾರೆ. ಈ ಮೂಲಕ ದೂರನ್ನು ವಾಪಾಸ್ ಪಡೆಯಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್‌ನಿಂದ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಭಜರಂಗ್ ಪುನಿಯಾ ಈ ಮಾತನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಈ ಲೈಂಗಿಕ ಕಿರಿಕುಳದ ದೂರು ನೀಡಿರುವ 7 ಮಹಿಳಾ ರೆಸ್ಲರ್‌ಗಳ ನಡುವಿನ ಒಗ್ಗಟ್ಟನ್ನು ಮುರಿಯುವ ಪ್ರಯತ್ನಗಳು ಕೂಡ ಆಗಿದೆ ಎಂದಿದ್ದಾರೆ ಭಜರಂಗ್ ಪುನಿಯಾ.

Wrestlers protest at Jantar Mantar: Bajrang Punia said WFI representatives threatening complainants

ಭಾರತದ ಸ್ಟಾರ್ ರೆಸ್ಲರ್‌ಗಳಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್ ಮತ್ತು ಸಾಕಷ್ಟು ಮಲಿಕ್ ನೇತೃತ್ವದ ರೆಸ್ಲರ್‌ಗಳ ಗುಂಪು WFI ಹಾಗೂ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನೀಡಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಮೂರು ತಿಂಗಳು ಕಳೆದರು ಕೂಡ ಎಫ್‌ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಈ ವಿಚಾರವಾಗಿ ನ್ಯಾಯ ದೊರೆಯುವವರೆಗೂ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಜನವರಿ 23ರಂದು 6 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. WFI ಮುಖ್ಯಸ್ಥರ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂರೆ ಈ ಸಮಿತಿ ತನಿಖೆ ನಡೆಸಿ ಏಪ್ರಿಲ್ 5ರಂದು ವರದಿಯನ್ನು ಸಲ್ಲಿಸಿತ್ತು. ಆದರೆ ಈ ವರದಿಯಲ್ಲಿ ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಸರ್ಕಾರ ಈವರೆಗೂಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ. ಇನ್ನು ಕೂಡ ಪರಾಮರ್ಶೆ ನಡೆಯುತ್ತಿದೆ ಎಂದಷ್ಟೇ ಸರ್ಕಾರ ಹೇಳಿಕೊಂಡಿದೆ.

ಮುಂದುವರಿದು ಮಾತನಾಡಿದ ಭಜರಂಗ್ ಪುನಿಯಾ ಬ್ರಿಜ್ ಭೂಷಣ್ ಶರಣ ಸಿಂಗ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವವರೆಗೂ ಪ್ರತಿಭಟನಾ ಸ್ಥಳ ಬಿಟ್ಟುಕದಲುವುದಿಲ್ಲ ಎಂದಿದ್ದಾರೆ. "ಎಲ್ಲರು ಕೂಡ ಈ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿ ಕೂಡ ಬೆಂಬಲಿಸಿದೆ. ಇಲ್ಲಿ ಯಾರು ಕೂಡ ಓಟು ಕೇಳಲು ಬಂದಿಲ್ಲ. ಈ ಪ್ರತಿಭಟನೆ ಚುನಾವಣೆಗೆ ಸಂಬಂದಪಟ್ಟಿರುವುದಲ್ಲ. ನಾವಿಲ್ಲಿ ಯಾರು ಕೂಡ ರಾಜಕೀಯ ಮಾಡಲು, ಎಂಪಿ ಎಂಎಲ್‌ಎ ಆಗಲು ಬಂದಿಲ್ಲ" ಎಂದಿದ್ದಾರೆ ಭಜರಂಗ್ ಪುನಿಯಾ.

"ಎಲ್ಲಾ ರೆಸ್ಲರ್‌ಗಳು ಕೂಡ ನಮ್ಮ ಜೊತೆಗಿದ್ದಾರೆ. ಯುವ ರೆಸ್ಲರ್‌ಗಳು ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಕಾಣದಿಂದಾಗಿ ಅವರನ್ನು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಬ್ರಿಜ್ ಭೂಷಣ್ ಮಾಡಿರುವ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸದ ಹೊರತು ನಾವು ಈ ಸ್ಥಳ ಬಿಟ್ಟು ಕದಲುವುದಿಲ್ಲ" ಎಂದಿದ್ದಾರೆ ಭಜರಂಗ್ ಪುನಿಯಾ.

Story first published: Tuesday, April 25, 2023, 17:04 [IST]
Other articles published on Apr 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+