Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟಾರ್ ರಸ್ಲರ್‌ ವಿನೇಶ್ ಫೋಗಟ್‌ಗೆ ಡಬ್ಲ್ಯೂಎಫ್‌ಐನಿಂದ ಅಮಾನತು ಶಿಕ್ಷೆ

Wrestling Federation of India suspends Vinesh Phogat for indiscipline

ನವದೆಹಲಿ: ಅವಿಸ್ಮರಣೀಯ ಟೋಕಿಯೋ ಒಲಿಂಪಿಕ್ಸ್‌ ವೇಳೆ ಅಶಿಸ್ತು ತೋರಿಸಿದ್ದಕ್ಕಾಗಿ ಭಾರತದ ಸ್ಟಾರ್ ರಸ್ಲರ್ ವಿನೇಶ್ ಪೋಗಟ್ ಅವರನ್ನು ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಮತ್ತೊಬ್ಬ ಯುವ ರಸ್ಲರ್ ಸೋನಂ ಮಲಿಕ್‌ಗೆ ನೋಟಿಸ್ ನೀಡಿದೆ. ದುರ್ವರ್ತನೆ ಕಾರಣ ನೀಡಿ ಡಬ್ಲ್ಯೂಎಫ್‌ಐ ಮಲಿಕ್‌ಗೂ ಎಚ್ಚರಿಕೆ ನೀಡಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ 53 ಕೆಜಿ ವಿಭಾಗದ ಫ್ರೀ-ಸ್ಟೈಲ್ ರಸ್ಲಿಂಗ್‌ನಲ್ಲಿ ಪಾಲ್ಗೊಂಡಿದ್ದ ವಿನೇಶ್ ಫೋಗಟ್, ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬೆಲಾರಸ್‌ನ ವನೆಸಾ ಕಲಾಡ್ಜಿನ್ಸ್ಕಯಾ ಎದುರು ಸೋತು ಹೊರಬಿದ್ದಿದ್ದರು. 'ಫಾಲ್' ಮೂಲಕ ವಿನೇಶ್ ಪಂದ್ಯ ಸೋತು ನಿರಾಸೆ ಮೂಡಿಸಿದ್ದರು.

ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ ವಿನೇಶ್

ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ ವಿನೇಶ್

ಟೋಕಿಯೋ ಒಲಿಂಪಿಕ್ಸ್ ಸೋತಿದ್ದ ವಿನೇಶ್‌ಗೆ ಪ್ರತಿಷ್ಠಿತ ಕ್ರೀಡಾಕೂಟದ ವೇಳೆ ಅಶಿಸ್ತು ತೋರಿದ್ದಕ್ಕಾಗಿ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆಗಸ್ಟ್ 16ವರೆಗೆ ಉತ್ತರಿಸಲು ಕಾಲಾವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ. ರಸ್ಲಿಂಗ್‌ನಲ್ಲಿ ಫಾಲ್ ಮೂಲಕ ಔಟಾಗುವುದೆಂದರೆ, ಸ್ಪರ್ಧಿಯೊಬ್ಬ ತನ್ನ ಎದುರಾಳಿಯ ಎರಡೂ ಭುಜಗಳನ್ನು ಮ್ಯಾಟ್‌ಗೆ ಒತ್ತಿ ಹಿಡಿದು ಮಿಸುಕಾಡದಂತೆ ತಡೆಯುತ್ತಾನೆ. ಆಗ ಮ್ಯಾಚ್ ರೆಫರೀ ಮ್ಯಾಟ್‌ಗೆ ಕೈ ಬಡಿಯುವ ಮೂಲಕ ಲಾಕ್ ಮಾಡಿದ ಆಟಗಾರನನ್ನು ವಿಜೇತರೆಂದು ಘೋಷಿಸುತ್ತಾರೆ. ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ವಿನೇಶ್ ಕೂಡ ಫಾಲ್ ವಿಧಾನದ ಮೂಲಕ ಪಂದ್ಯ ಸೋತಿದ್ದರು.

ಎಲ್ಲೆ ಮೀರಿದ ವರ್ತನೆ ತೋರಿದ ಫೋಗಟ್

ಎಲ್ಲೆ ಮೀರಿದ ವರ್ತನೆ ತೋರಿದ ಫೋಗಟ್

ಹಂಗೆರಿಯಲ್ಲಿದ್ದ ಕೋಚ್ ವೋಲರ್ ಅಕೋಸ್ ಜೊತೆಗಿದ್ದು ಟೋಕಿಯೋ ಒಲಿಂಪಿಕ್ಸ್‌ಗೆ ಅಭ್ಯಾಸ ನಡೆಸಿದ್ದ ವಿನೇಶ್ ಫೋಗಟ್, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ನಿಲ್ಲಲು ನಿರಾಕರಿಸಿದ್ದರು. ಜೊತೆಗೆ ಬೇರೆ ಭಾರತೀಯ ತಂಡದ ಜೊತೆಗೆ ಅಭ್ಯಾಸ ನಡೆಸಿದ್ದರು. ಅಷ್ಟೇ ಅಲ್ಲ, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಾಗ ಭಾರತೀಯ ತಂಡಕ್ಕೆ ಅಧಿಕೃತ ಪ್ರಾಯೋಜಕತ್ವ ನೀಡಿದ್ದ ಶಿವ್‌ ನರೇಶ್ ದಿರಿಸು ಧರಿಸಿರಲಿಲ್ಲ, ಬದಲಿಗೆ ನೈಕ್ ಕಂಪನಿಯ ದಿರಿಸು ಧರಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ರಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವಿನೇಶ್‌ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಕೂಡ ಫೋಗಟ್ ಅವರನ್ನು ವಿಚಾರಿಸಲು ಹೇಳಿದೆ ಎಂದು ತಿಳಿದು ಬಂದಿದೆ.

ವಿನೇಶ್ ಇನ್ನು ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ

ವಿನೇಶ್ ಇನ್ನು ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ

"ಇದು ಸಂಪೂರ್ಣವಾಗಿ ಅಶಿಸ್ತು. ವಿನೇಶ್ ಫೋಗಟ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಮತ್ತು ಎಲ್ಲಾ ಕುಸ್ತಿ ಚಟುವಟಿಕೆಗಳಿಂದ ನಿರ್ಬಂಧಿಸಲಾಗಿದೆ. ಅವರು ಉತ್ತರ ನೀಡುವವರೆಗೆ, ತನ್ನ ನಡೆಗೆ ಕಾರಣ ಹೇಳುವ ವರೆಗೆ ಮತ್ತು WFI ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಅವರು ಯಾವುದೇ ರಾಷ್ಟ್ರೀಯ ಅಥವಾ ಇತರ ದೇಶೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಿಮ್ಮ ಅಥ್ಲೀಟ್‌ಗಳನ್ನು ನಿಮಗೆ ನಿಯಂತ್ರಿಸಲು ಆಗುವುದಿಲ್ಲವೆ ಎಂದು ಐಒಎ ನಮ್ಮನ್ನು ಕೇಳಿದೆ. ಈ ವಿಚಾರವಾಗಿ ಐಒಎಯು ಡಬ್ಲ್ಯೂಎಫ್‌ಐಗೆ ನೋಟಿಸ್ ನೀಡಿದೆ," ಎಂದು ಡಬ್ಲ್ಯೂಎಫ್‌ಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.

ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದರು. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸಿದ್ದರು. ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು. ಟೋಕಿಯೋದಲ್ಲಿ ಭಾರತ 1 ಬಂಗಾರ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ಗೆದ್ದಿತ್ತು.

Story first published: Tuesday, August 10, 2021, 20:40 [IST]
Other articles published on Aug 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+