ಭಾರತದಲ್ಲಿ ಇತ್ತೀಚಿಗೆ ಹೃದಾಯಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕ್ರೀಡಾ ಪಟುಗಳು ಏನು ಹರೊತಾಗಿಲ್ಲ. ಅದೆಷ್ಟೋ ಕ್ರೀಡಾ ಪಟುಗಳು ಮೈದಾನದಲ್ಲಿ ಆಡುವಾಗಲೇ ಕೊನೆಯ ಉಸಿರು ಎಳೆದಿದ್ದಾರೆ. ಇದೇ ಸಾಲಿನಲ್ಲಿ ಹಲವರ ಹೆಸರುಗಳು ಸೇರುತ್ತಿವೆ. ಈಗ ಜೈಪುರದಿಂದ ಬರುತ್ತಿರುವ ಸುದ್ದಿ ಸಹ ಇಂತದ್ದೇ ಆಗಿದ್ದು ಕ್ರೀಡಾ ಪ್ರೀಮಿಯರಿಗೆ ನೋವು ತಂದಿದೆ. ಜೈಪುರದಲ್ಲಿ ವುಶು ಕ್ರೀಡಾಪಟು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೂರು ದಿನಗಳ ಹಿಂದೆ ಅಖಿಲ ಭಾರತ ವಿಶ್ವವಿದ್ಯಾಲಯ ವುಶು ಚಾಂಪಿಯನ್‌ಶಿಪ್ ಚಂಡೀಗಡದಲ್ಲಿ ನಡೆದಿತ್ತು. 21 ವರ್ಷದ ಮೋಹಿತ್ ಶರ್ಮಾ ಅಖಾಡದಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಸುತ್ತಿದ್ದರು. ಆಗ ಇಬ್ಬರು ಆಟಗಾರರು ರಿಂಗ್ ನಿಂದ ಹೊರಗೆ ಬಿದ್ದರು. ಆಗಲೇ ಇಬ್ಬರು ಮತ್ತೆ ರಿಂಗ್‌ಗೆ ಪ್ರವೇಶ ಪಡೆದರು. ಕೆಂಪು ಬಟ್ಟೆಯನ್ನು ಹಾಕಿಕೊಂಡಿದ್ದ ಮೋಹಿತ್ ಅಂಗಳಕ್ಕೆ ಇಳಿಯುತ್ತಿದ್ದಂತೆ ರೆಡಿ ಯಾಗಲು ಹೋದಾಗಲೇ ಆಯಾ ತಪ್ಪಿ ಬಿದ್ದರು. ಅವರು ಮೈದಾನಕ್ಕೆ ಬೀಳುತ್ತಿದ್ದಂತೆ ಬ್ಲ್ಯೂ ಡ್ರೆಸ್ ಹಾಕಿಕೊಂಡಿರುವ ಕ್ರೀಡಾ ಪಟು ಅವರ ಮೇಲೆ ಬೀಳಲು ಮುಂದಾದರು. ಆಗ ಮ್ಯಾಚ್ ರೆಫ್ರಿ ಅವರನ್ನು ತಡೆದರು.

ಮೋಹಿತ್ ಮೈದಾದನಲ್ಲಿ ಬೀಳುತ್ತಲೆ, ತುರ್ತು ಸಿಂಬಂಧಿಗಳನ್ನು ಕರೆದ ಆಯೋಜಕರು ಅವರನ್ನು ಎಬ್ಬಿಸಲು ನೋಡಿದರು. ಆದರೆ ಮೋಹಿತ್ ಏಳದನ್ನು ಕಂಡು ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಲಾಯಿತು. ಆದರೆ ಮಾರ್ಗ ಮಧ್ಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಸಂಘಟಕ ದೀಪಕ್ ಕುಮಾರ್, ಹೃದಯಗಾತಕ್ಕೆ ಈಡಾದ ಮೋಹಿತ್ ಮೊದಲ ಸುತ್ತಿನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಗಳಿಸಿದ್ದರು. ಅಲ್ಲದೆ ಎರಡನೇ ಸುತ್ತಿನಲ್ಲೂ ಅವರು ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಇದೇ ವೇಳೆ ಅವರ ಆರೋಗ್ಯದಲ್ಲಿ ಏರು ಪೇರು ಆಯಿತು. ರಿಂಗ್ ಪ್ರವೇಶಿಸಿದ ಬಳಿಕ ಮೋಹಿತ್ ಆಯಾ ತಪ್ಪಿ ರಿಂಗ್ ಮೇಲೆ ಬಿದ್ದರು. ಇದೇ ವೇಳೆ ರೆಫ್ರಿ ಅವರನ್ನು ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ವಿಫಲವಾಯಿತು ಎಂದು ಅವರು ತಿಳಿಸಿದ್ದಾರೆ.
ಮೃತದೇಹವನ್ನು ಖರಾರ್‌ನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಘಟನೆಯ ಬಗ್ಗೆ ಮೋಹಿತ್ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಸಾಮಾಜಿಕ ತಾಣದಲ್ಲಿ ಈ ಘಟನೆಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.