For Quick Alerts
ALLOW NOTIFICATIONS  
For Daily Alerts

ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಹಾರೈಸಿ WWE ದಿಗ್ಗಜ ಜಾನ್ ಸೀನಾ ವಿಶೇಷ ಪೋಸ್ಟ್

Wwe Legend John Cena Shares A Special Post Featuring Amitabh Bachchan

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಕುಟುಂಬ ಕೊರೊನಾ ವೈರಸ್‌ಗೆ ತುತ್ತಾಗಿದೆ. ಸ್ವತಃ ಅಮಿತಾಬ್ ಬಚ್ಚನ್ ಜೊತೆಗೆ ಪುತ್ರ ಅಭಿಷೇಕ್ ಬಚ್ಚನ್ ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯ ಕೂಡ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢವಾಗಿದೆ. ಹೀಗಾಗಿ ಅಭಿಮಾನಿಗಳು ಹಾಗೂ ಆಪ್ತರು ಆತಂಕಕ್ಕೆ ಒಳಗಾಗಿದ್ದಾರೆ.

ಬಾಲಿವುಡ್​ ದಿಗ್ಗಜ ಅಮಿತಾಬ್​ ಬಚ್ಚನ್​ ಶೀಘ್ರವೇ ಗುಣಮುಖರಾಗಲೆಂದು ಹಾರೈಸಿ ಸಾಕಷ್ಟು ಮಂದಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಯುವರಾಜ್ ಸಿಂಗ್ ಮಾತ್ರವಲ್ಲದೆ ಪಾಕಿಸ್ತಾನದ ಮಾಜಿ ಕ್ರಿಕೆಟರ್‌ಗಳಾದ ಶಾಹಿದ್ ಅಫ್ರಿದಿ ಮಾಜಿ ವೇಗಿ ಶೋಯಿಬ್​ ಅಖ್ತರ್​ ಕೂಡ ಬಿಗ್​ ಬಿ ಆರೋಗ್ಯ ಶೀಘ್ರವೇ ಸುಧಾರಣೆಯಾಗಲಿ ಎಂದು ಟ್ವೀಟ್​ ಮಾಡಿದ್ದಾರೆ.

ಈ ಮಧ್ಯೆ ಡಬ್ಲ್ಯುಡಬ್ಲ್ಯುಇ ದಿಗ್ಗಜ ಜಾನ್ ಸೀನಾ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಫೋಟೋ ಹಂಚಿಕೊಳ್ಳುವ ಮೂಲಕ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಜಾನ್‌ ಸೀನಾ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲೂ ಖ್ಯಾತರಾಗಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಏನನ್ನೂ ಬರೆದುಕೊಳ್ಳದೆ ಅಮಿತಾಬ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಅವರ ಕೇವಲ ಫೋಟೋ ಹಂಚಿಕೊಂಡಿರುವ ಜಾನ್ ಸೀನಾ ಪರೋಕ್ಷವಾಗಿ ಚೇತರಿಕೆಗೆ ಹಾರೈಸಿದ್ದಾರೆ.

ಡಬ್ಲ್ಯುಡಬ್ಲ್ಯುಇ ಮೂಲಕ ಜಾನ್ ಸೀನಾ ಭಾರತದಲ್ಲಿ ಮನೆಮಾತಾಗಿದ್ದು ಕೋಟ್ಯಂತರ ಅಭಿಮಾನಿಗಳನ್ನು ಭಾರತದಲ್ಲಿ ಹೊಂದಿದ್ದಾರೆ. ಬಿಗ್‌ಬಿಗೆ ಶುಭಕೋರುವ ಮೂಲಕ ಭಾರತೀಯ ಅಭಿಮಾನಿಗಳ ಮನಸ್ಸನ್ನು ಜಾನ್‌ಸೀನಾ ಮತ್ತೊಮ್ಮೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ತಿಂಗಳಿಂದ ರಿಂಗ್​ನಿಂದ ಹೊರಗುಳಿದಿರುವ ಜಾನ್​, 2019ರ ಜನವರಿಯಲ್ಲಿ ಕಡೆ ಬಾರಿಗೆ ಸ್ಪರ್ಧಾತ್ಮಕ ಫೈಟ್​ನಲ್ಲಿ ಸ್ಪರ್ಧಿಸಿದ್ದರು.

Story first published: Monday, July 13, 2020, 15:01 [IST]
Other articles published on Jul 13, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+