Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WWE ದಿವಾ ಪೇಜ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು, ಆಗಸ್ಟ್ 29: ಬ್ರಿಟನ್ ಮೂಲದ WWE ದಿವಾ ಪೇಜ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಪೇಜ್ ಅವರು ತಾಂತ್ರಿಕವಾಗಿ ಮಹಿಳಾ ವಿಭಾಗದ ಶ್ರೇಷ್ಠ ಕುಸ್ತಿಪಟುವಾಗಿ ಡಬ್ಲ್ಯೂಡಬ್ಲ್ಯೂಇನಲ್ಲಿ ಜನಪ್ರಿಯತೆ ಗಳಿಸಿದ್ದರು. ಈಗ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

ಫ್ಲೋರಿಡಾ ಚಾಂಪಿಯನ್ ಶಿಪ್ ರೆಸ್ಲಿಂಗ್(ಎಫ್ ಸಿಡಬ್ಲ್ಯೂ), ಇದು ನಂತರ ಎನ್ ಎಕ್ಸ್ ಟಿ ಬ್ರ್ಯಾಂಡ್ ಪ್ರಚಾರಕಿಯಾಗಿ ಪೇಜ್ ಮಹಿಳಾ ಚಾಂಪಿಯನ್ ಶಿಪ್ ಗಾಗಿ ಹೋರಾಟ ನಡೆಸಿದರು. [ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್]

WWE: Paige to quit wrestling due to severe neck injury?

2014 ಡಬ್ಲ್ಯೂಡಬ್ಲ್ಯೂಇ ದಿವಾಸ್ ಚಾಂಪಿಯನ್ ಆಗಿದ್ದು ಕೂಡಾ ಸಕತ್ ಫೈಟ್ ಆಗಿತ್ತು, ಎಜೆ ಲೀ ಸೋಲಿಸಿ 21 ವರ್ಷಗಳಲ್ಲಿ ಅತ್ಯಂತ ಕಿರಿಯ ದಿವಾಸ್ ಚಾಂಪಿಯನ್ ಆಗಿ ಮೆರೆದರು.

ಆದರೆ, 2016ರಲ್ಲಿ ಡಬ್ಲ್ಯೂಡಬ್ಲ್ಯೂಇನ ಕಾನೂನು ಮುರಿದ ಕಾರಣಕ್ಕೆ ಬಾಯ್ ಫ್ರೆಂಡ್ ಅಲ್ಬರ್ಟೋ ಡೆಲ್ ರಿಯೋ ಜತೆಗೆ ಪೇಜ್ ಕೂಡಾ 30 ದಿನಗಳ ಅಮಾನತು ಶಿಕ್ಷೆ ಕೂಡಾ ಅನುಭವಿಸಿದರು.

ಗಾಯದ ಸಮಸ್ಯೆ: ಚಾಂಪಿಯನ್ ಗಳಾದ ಡೇನಿಯಲ್ ಬ್ರಿಯಾನ್, ಎಡ್ಜ್, ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ ರಂತೆ ಪೇಜ್ ಕೂಡಾ ತೋಳಿನ ಸ್ನಾಯುಸೆಳೆತ, ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ರಿಂಗ್ ನಿಂದ ಹೊರಗುಳಿಯಲು ಇದೇ ಕಾರಣ ಎನ್ನಲಾಗಿದೆ. ಆದರೆ, ಇನ್ನೂ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ಬಂದಿಲ್ಲ. ಪೇಜ್ ಮತ್ತೊಮ್ಮೆ ಕಣಕ್ಕಿಳಿಯುತ್ತಾರೆ ಎಂಬ ಆಶಯ ಇನ್ನೂ ಅಭಿಮಾನಿಗಳಲ್ಲಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+