ಭಾರತಕ್ಕೆ ಮತ್ತೆ ಬರಲಿದ್ದಾರೆ WWE ಸ್ಟಾರ್ ಸುಂದರಿ ಷಾರ್ಲೆಟ್ ಫ್ಲೇರ್

ಬೆಂಗಳೂರು, ನವೆಂಬರ್ 1: ನಾಲ್ಕು ವರ್ಷಗಳ ಬಳಿಕ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ರಸ್ಲರ್ ಷಾರ್ಲೆಟ್ ಫ್ಲೇರ್ ಭಾರತಕ್ಕೆ ಮತ್ತೆ ಬರಲಿದ್ದಾರೆ. ನವೆಂಬರ್ 14ರಿಂದ 3 ದಿನಗಳ ಕಾಲ ಫ್ಲೇರ್ ಭಾರತದಲ್ಲಿರಲಿದ್ದಾರೆ. ಈ ವೇಳೆ ಭಾರತದ ಸ್ಪೆಷಲ್ ಒಲಿಂಪಿಕ್ಸ್ ಅಥ್ಲೀಟ್‌ಗಳನ್ನು ಭೇಟಿಯಾಗಲಿದ್ದಾರೆ.
ನವೆಂಬರ್ 14 ಮತ್ತು 15ರಂದು ಮುಂಬೈನಲ್ಲಿರಲಿರುವ ಷಾರ್ಲೆಟ್, ನವೆಂಬರ್ 16ರಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಷಾರ್ಲೆಟ್ ಅವರು ಡಬ್ಲ್ಯೂಡಬ್ಲ್ಯೂಇ ಮಾಜಿ ಸೂಪರ್ ಸ್ಟಾರ್ ರಿಕ್ ಫ್ಲೇರ್ ಅವರ ಪುತ್ರಿ.
ಮಕ್ಕಳ ದಿನಾಚರಣೆ ದಿನ ಷಾರ್ಲೆಟ್ ಫ್ಲೇರ್ ಮುಂಬೈನಲ್ಲಿ ವಿಶೇಷ ಒಲಿಂಪಿಕ್ಸ್ ಅಥ್ಲೀಟ್‌ಗಳನ್ನು ಭೇಟಿಯಾಗಲಿದ್ದಾರೆ. ಅನಂತರ 'ಕಾಮಿಕಾನ್ ಇಂಡಿಯಾ' ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಾಮಿಕಾನ್ ಇಂಡಿಯಾ ಅನ್ನೋದು ಭಾರತದಲ್ಲಿ ನಡೆಯುವ ಅ್ಯನಿಮೇಶನ್‌ಗೆ ಸಂಬಂಧಿಸಿದ ವಾರ್ಷಿಕ ಕಾರ್ಯಕ್ರಮ.
ಎರಡನೇ ತಲೆಮಾರಿನ ವೃತ್ತಿಪರ ರಸ್ಲರ್‌ಗಳಲ್ಲಿ ಗುರುತಿಸಿಕೊಂಡಿರುವ ಷಾರ್ಲೆಟ್ ಫ್ಲೇರ್ ಸದ್ಯ 'ರಾ'ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಗೆ ಪಾದಾರ್ಪಣೆ ಮಾಡಿದ್ದ ಫ್ಲೇರ್, ರಾ ಮಹಿಳಾ ಚಾಂಪಿಯನ್‌ಷಿಪ್ ಗೆದ್ದ ಮೊದಲ ಅಥ್ಲೀಟ್ ಆಗಿ ಗಮನ ಸೆಳೆದಿದ್ದರು. ಡಬ್ಲ್ಯೂಡಬ್ಲ್ಯೂಇನಲ್ಲಿ ಷಾರ್ಲೆಟ್ ಒಟ್ಟು 10 ಬಾರಿ ಚಾಂಪಿಯನ್ ಎನಿಸಿಕೊಂಡ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications