ಕೇನ್ -ಅಂದು WWE 'ರೆಸ್ಲಿಂಗ್ ಸ್ಟಾರ್' ಇಂದು ಕೌಂಟಿ ಮೇಯರ್

ನ್ಯಾಶ್ ವಿಲ್ಲೆ, ಆಗಸ್ಟ್ 06: ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ರಿಂಗ್ ನಲ್ಲಿ ಎಲ್ಲರನ್ನು ಅಪ್ಪಳಿಸುತ್ತಿದ್ದ, ಒಂದೇ ಕೈಯಲ್ಲಿ ಎಂಥಾ ಘಟನಾಘಟಿ ರೆಸ್ಲರ್ ಗಳನ್ನು ಎತ್ತಿ ಎಸೆಯುತ್ತಿದ್ದ ಕೆಂಪು ಮುಖವಾಡಧಾರಿ ಕೇನ್ ಈಗ ಅಮೆರಿಕದ ಕೌಂಟಿಯೊಂದರ ಮೇಯರ್ ಆಗಿ ಆಯ್ಕೆಯಾಗಿರುವುದು ಈಗಾಗಲೇ ಕ್ರೀಡಾಭಿಮಾನಿಗಳಿಗೆ ತಿಳಿದಿರಬಹುದು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೆಸ್ಲಿಂಗ್ ಮೇನಿಯಾದ ಹಾಲ್ ಆಫ್ ಫೇಮ್ ನಲ್ಲಿ ಕಾಣಿಸಿಕೊಂಡ ದಿಗ್ಗಜ ಎಂಬುದನ್ನು ಮರೆಯುವಂತಿಲ್ಲ.
ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ)ನ ಮಾಜಿ ಚಾಂಪಿಯನ್ ಕೇನ್ ಅವರು ಸೆಪ್ಟೆಂಬರ್ 01ರಂದು ಅಮೆರಿಕದ ಟೆನ್ನೆಸ್ಸೀ ರಾಜ್ಯದ ನಾಕ್ಸ್ (knox) ಕೌಂಟಿಯ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಬ್ಲ್ಯೂಡಬ್ಲ್ಯೂಇನ ಜೀವಂತ ದಂತಕತೆ ಅಂಡರ್ ಟೇಕರ್ ಅವರ ಸೋದರ, ಅಂಡರ್ ಟೇಕರ್ ಅವರು ಮನೆಗೆ ಬೆಂಕಿ ಹಚ್ಚಿದ್ದರು. ಕೇನ್ ಹೇಗೂ ಜೀವಂತ ಉಳಿದುಬಿಟ್ಟರು, ಕೇನ್ ಗೆ ಮ್ಯಾನೇಜರ್ ಆಗಿದ್ದ ಪಾಲ್ ಬೇರರ್ ಅವರೇ ಕೇನ್ ಅವರ ತಂದೆ, ಅಂಡರ್ ಟೇಕರ್ ಮೇಲೆ ಸೇಡು ತೀರಿಸಿಕೊಳ್ಳಲು ಕೇನ್ ಅವರು ರೆಸ್ಲಿಂಗ್ ಅಖಾಡಕ್ಕೆ ಇಳಿದರು.. ಹೀಗೆ ಕಥೆ ಕಟ್ಟಲಾಗಿದೆ... ಕೇನ್ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ...

ಅದ್ಭುತ ಕಥೆ ಒದಗಿಸಬಲ್ಲಂತ ಕಟ್ಟುಕತೆ
ಹೀಗೆ ಯಾವುದೇ ಭಾರತೀಯ ಸಿನಿಮಾಕ್ಕೆ ಅದ್ಭುತ ಕಥೆ ಒದಗಿಸಬಲ್ಲಂತ ರಸವತ್ತಾದ ಹಿನ್ನಲೆಯೊಂದಿಗೆ ಕೇನ್ ಅವರನ್ನು ರೆಸ್ಲಿಂಗ್ ಅಂಗಳಕ್ಕೆ ಪರಿಚಯಿಸಲಾಗಿದೆ. ಆದರೆ, ಇದೆಲ್ಲವೂ ಕಟ್ಟುಕಥೆ. ಅಂಡರ್ ಟೇಕರ್(ಮಾರ್ಕ್ ಕಲವೇ) ಗೂ ಕೇನ್ ಗೂ ಸಂಬಂಧವೇ ಇಲ್ಲ.
ಆದರೆ, ಕೇನ್ ಅವರ ನಿಜವಾದ ಹೆಸರು ಗ್ಲೇನ್ ಜಾಕೋಬ್ಸ್(51). ಇತ್ತೀಚೆಗೆ ನಡೆದ ನಾಕ್ಸ್ ಕೌಂಟಿ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿ, ಡೆಮಾಕ್ರೆಟಿಕ್ ಪಕ್ಷದ ಎದುರಾಳಿ ಲಿಂಡಾ ಹನ್ನೆ ಅವರ ವಿರುದ್ಧ 2-1 ಅಂತರದಿಂದ ಜಯಗಳಿಸಿದರು.
ಕೇನ್ ಅಭಿಮಾನಿಗಳು ಖುಷ್
WWE 'ರೆಸ್ಲಿಂಗ್ ಸ್ಟಾರ್' ಕೇನ್ ಅವರು ನಾಕ್ಸ್ ಕೌಂಟಿ ಮೇಯರ್ ಆಗಿ ಆಯ್ಕೆಯಾಗಿರುವುದಕ್ಕೆ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ, ವಿವಿಧ ರೀತಿಯಲ್ಲಿ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ರೆಸ್ಲಿಂಗ್ ಸ್ಟಾರ್, ಆಕ್ಷನ್ ಹೀರೋಗಳು
ಕೇನ್ ಅವರು ಈಗ ನಾಕ್ಸ್ ಕೌಂಟಿ ಮೇಯರ್ ಆಗಿದ್ದಾರೆ. ಇವರಿಗೂ ಮುನ್ನ ಡಬ್ಲ್ಯೂಡಬ್ಲ್ಯೂಇ ದಿಗ್ಗಜ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಟ ಅರ್ನಾಲ್ಡ್ ಸ್ವಾರ್ಜೆನೆಗರ್ ಕ್ಯಾಲಿಫೋರ್ನಿಯಾದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟೀವನ್ ಸೀಗಲ್ ಅವರು ರಷ್ಯಾಕ್ಕೆ ಅಮೆರಿಕದ ವಿಶೇಷ ರಾಯಭಾರಿಯಾಗಿದ್ದಾರೆ.
ಕೇನ್ ಬದುಕಿನ ಬಗ್ಗೆ ನಾನಾ ಕಥೆಗಳು
ಕೇನ್ ಹಿನ್ನೆಲೆ ಬಗ್ಗೆ ನಾನಾ ಕಥೆಗಳು ಇವೆ. ಆದರೆ, ಅದೆಲ್ಲವು ಊಹಾಪೋಹಾ ಕತೆಗಳು. ಆದರೆ, 7 ಅಡಿ ಎತ್ತರ ಅಜಾನುಬಾಹು ಗ್ಲೆನ್ ಥಾಮಸ್ ಜಾಕಬ್ಸ್ ಅವರು ರಿಪಬ್ಲಿಕನ್ ಪಕ್ಷದ ರಾಜಕಾರಣಿ, ಕ್ರಿಸ್ಟಲ್ ಗೌನ್ಸ್ ಅವರ ಪತಿ, ಇಬ್ಬರು ಹೆಣ್ಣು ಮಕ್ಕಳ ತಂದೆ. ಆದರೆ, ರಿಂಗ್ ನಲ್ಲಿ ಅಂಗಸ್ ಕಿಂಗ್, ಬ್ರೂಸಿಯರ್ ಮಾಸ್ಟಿನೋ, ಕ್ರಿಸ್ಮಸ್ ಕ್ರೀಚರ್, ಡೀಸೆಲ್, ಡೂಮ್ಸ್ ಡೇ, ಐಸಾಕ್ ಯಾಂಕೆಮ್, ಕೇನ್, ಮೈಕ್ ಉನಾಬಾಂಬ್. ಇತ್ಯಾದಿ ಹೆಸರುಗಳಿಂದ ಜನಪ್ರಿಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications