Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ.16ರಂದು ನಗರದಲ್ಲಿ WWE ಸೂಪರ್ ಸ್ಟಾರ್ ಷಾರ್ಲೆಟ್ ಫ್ಲೇರ್ ಹವಾ!

WWE Superstar Charlotte Flair to Visit Bengaluru on Nov 16

ಬೆಂಗಳೂರು, ನವೆಂಬರ್ 08: ವಿಶ್ವವಿಖ್ಯಾತ ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ ಷಾರ್ಲೆಟ್ ಫ್ಲೇರ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬರಲಿದ್ದಾರೆ.

ನಾಲ್ಕು ವರ್ಷಗಳ ನಂತರ ಭಾರತಕ್ಕೆ ಬರುತ್ತಿರುವ ಚಾರ್ಲೊಟೆ ನವೆಂಬರ್ 14 ಮತ್ತು 15 ರಂದು ಎರಡು ದಿನಗಳ ಕಾಲ ಮುಂಬೈನಲ್ಲಿರಲಿದ್ದು, ನವೆಂಬರ್ 16 ಕ್ಕೆ ಬೆಂಗಳೂರಿನ ಕಾಮಿಕ್ ಕಾನ್ ಇಂಡಿಯಾಗೆ ಭೇಟಿ ನೀಡಲಿದ್ದಾರೆ.

ಮುಂಬೈ ಮತ್ತು ಬೆಂಗಳೂರಿನ ಕಾಮಿಕ್ ಕಾನ್ ಇಂಡಿಯಾದಲ್ಲಿ ಚಾರ್ಲೊಟೆ ಹಲವಾರು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಇದಲ್ಲದೇ, ಮಕ್ಕಳ ದಿನಾಚರಣೆ ಅಂಗವಾಗಿ ಹಲವಾರು ವಿಶೇಷ ಒಲಿಂಪಿಕ್ ಕ್ರೀಡಾಪಟುಗಳನ್ನೂ ಭೇಟಿ ಮಾಡಲಿದ್ದಾರೆ. ಇದಲ್ಲದೇ, ಡಬ್ಲ್ಯೂಡಬ್ಲ್ಯೂಇನ ಕ್ವೀನ್ ಕಾರ್ಯಕ್ರಮವೂ ಇರಲಿದ್ದು, ಯಾರು ಕ್ವೀನ್ ಆಗಲಿದ್ದಾರೆ ಎಂಬುದನ್ನು ರಹಸ್ಯವಾಗಿಡಲಾಗಿದೆ.

ನಾಲ್ಕು ವರ್ಷಗಳ ಬಳಿಕ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್ ರಸ್ಲರ್ ಷಾರ್ಲೆಟ್ ಫ್ಲೇರ್ ಭಾರತಕ್ಕೆ ಮತ್ತೆ ಬರಲಿದ್ದಾರೆ. ನವೆಂಬರ್ 14ರಿಂದ 3 ದಿನಗಳ ಕಾಲ ಫ್ಲೇರ್ ಭಾರತದಲ್ಲಿರಲಿದ್ದಾರೆ. ಈ ವೇಳೆ ಭಾರತದ ಸ್ಪೆಷಲ್ ಒಲಿಂಪಿಕ್ಸ್ ಅಥ್ಲೀಟ್‌ಗಳನ್ನು ಭೇಟಿಯಾಗಲಿದ್ದಾರೆ. ನವೆಂಬರ್ 14 ಮತ್ತು 15ರಂದು ಮುಂಬೈನಲ್ಲಿರಲಿರುವ ಷಾರ್ಲೆಟ್, ವಿಶೇಷ ಮಕ್ಕಳ ಜೊತೆ ಮಕ್ಕಳ ದಿನಾಚರಣೆ ಆಚರಿಸಲಿದ್ದಾರೆ.

ರೆಸ್ಲಿಂಗ್ ದಿಗ್ಗಜ ರಿಕ್ ಫ್ಲೇರ್ ಪುತ್ರಿ ಷಾರ್ಲೆಟ್ ಅವರು ಡಬ್ಲ್ಯೂಡಬ್ಲ್ಯೂಇನಲ್ಲಿ ಒಟ್ಟು 10 ಬಾರಿ ಚಾಂಪಿಯನ್ ಎನಿಸಿಕೊಂಡ ದಾಖಲೆ ಹೊಂದಿದ್ದಾರೆ.

Story first published: Friday, November 8, 2019, 14:38 [IST]
Other articles published on Nov 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+