WWE ದಿವಾ ಪೇಜ್ ಖಾಸಗಿ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆ!
ಬೆಂಗಳೂರು, ಮಾರ್ಚ್ 18: ಬ್ರಿಟನ್ ಮೂಲದ WWE ದಿವಾ ಪೇಜ್ ಗಾಯದ ಸಮಸ್ಯೆಯಿಂದ ನಿವೃತ್ತಿ ಹೊಂದುವುದಾಗಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದು ಈಗ ಹಳೆ ಸುದ್ದಿ. ಸದ್ಯದ ಸೋರಿಕೆ ಸುದ್ದಿಯೆಂದರೆ, ಪೇಜ್ ಅವರ ಖಾಸಗಿ ಚಿತ್ರಗಳನ್ನು ಯಾರೋ ಕದ್ದು ಇಂಟರ್ನೆಟ್ ನಲ್ಲಿ ಹಂಚುತ್ತಿದ್ದಾರಂತೆ. ಈ ಬಗ್ಗೆ ಪೇಜ್ ಕೂಡಾ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
WWE ಆಯೋಜಕರಿಂದ ಸರಿಯಾದ ಮನ್ನಣೆ ಸಿಗದ ಕಾರಣ ಪೇಜ್ ಅವರು ಟಿಎನ್ ಎ ರೆಸ್ಲಿಂಗ್ ಸೇರಲು ಮುಂದಾಗಿದ್ದು ಗುಟ್ಟಾದ ವಿಷಯವೇನಲ್ಲ. 25ರ ಹರೆಯದ ಪೇಜ್ ಗೆ ಈಗಲೇ ತನ್ನ ರೆಸ್ಲಿಂಗ್ ವೃತ್ತಿ ಕೊನೆಗೊಳಿಸುವುದು ಬೇಕಿಲ್ಲ.

ಆಯೋಜಕರು ಮನಸ್ಸು ಮಾಡಿದರೆ ಪೇಜ್ ಮತ್ತೊಮ್ಮೆ ತಮ್ಮ ಮಾದಕ ಮೈಮಾಟದ ಜೊತೆ ರೆಸ್ಲಿಂಗ್ ಮಾಡುವುದನ್ನು ಅಭಿಮಾನಿಗಳು ನೋಡುವ ಸಾಧ್ಯತೆಯಿದೆ ಎನ್ನುವಷ್ಟರಲ್ಲಿ ಚಿತ್ರಗಳ ಸೋರಿಕೆ ಸಂಕಟ ಶುರುವಾಗಿದೆ.
ಯಾರ ಸಂಚು?: WWE ಯಲ್ಲಿ ಮುಂದುವರೆಯಬೇಕೆ? ಬೇಡವೇ? ಎಂಬ ಪೇಜ್ ಅವರ WWE ವೃತ್ತಿ ಬದುಕಿಗೆ ಈ ಚಿತ್ರಗಳ ಸೋರಿಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಇನ್ನೊಂದೆಡೆ, ಈ ರೀತಿ ಚಿತ್ರಗಳ ಸೋರಿಕೆ ಹಿಂದೆ ಯಾರದ್ದೋ ಕೈವಾಡವಿದೆ. ಪೇಜ್ ಅವರನ್ನು ಹೊರ ಹಾಕಲು ಮಾಡಿರುವ ಸಂಚು ಎಂಬ ಸುದ್ದಿಯೂ ಇದೆ. ಪೇಜ್ ಅವರೇ ಯಾಕೆ ಈ ರೀತಿ ಸಂಚು ರೂಪಿಸಿ, WWE ಡೀಲ್ ನಿಂದ ಮುಕ್ತಿ ಪಡೆಯಲು ಯತ್ನಿಸಿರಬಾರದು ಎಂಬ ಗುಮಾನಿಯೂ ಇದೆ.
ಚಿತ್ರಗಳನ್ನು ಕದ್ದವನು, ಇನ್ನಷ್ಟು ವಿಡಿಯೋಗಳನ್ನು ಇಂಟರ್ನೆಟ್ ನಲ್ಲಿ ಬಿಡುವುದಾಗಿ ಬೆದರಿಸಿದ್ದಾನಂತೆ. ಅಲ್ಬರ್ಟೋ ಡೆಲ್ ರಿಯೋ ಜತೆಗಿನ ಸಂಬಂಧ, ಸಂಸ್ಥೆ ಜತೆ ಹಳಸಿದ ಒಪ್ಪಂದ ಎಲ್ಲವೂ ಪೇಜ್ ಅವರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುವ ಸಾಧ್ಯತೆಯಿದೆ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಪೇಜ್ ಗೆ ಭರಪೂರ ಬೆಂಬಲ ವ್ಯಕ್ತವಾಗಿದೆ.
Story first published: Wednesday, January 3, 2018, 10:16 [IST]
Other articles published on Jan 3, 2018
Read in English: Paige's compromising pictures leaked
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications