Paralympics 2024: ಭಾರತಕ್ಕೆ ಸಿಕ್ಕ 8 ನೇ ಪದಕ, ಯೋಗೇಶ್‌ಗೆ ಬೆಳ್ಳಿ
ಭಾರತದ ಸ್ಟಾರ್ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರೆದಿದೆ. ಸೋಮವಾರ ಭಾರತದ ಪರ ಯೋಗೇಶ್ ಕಥುನಿಯಾ ಅವರು ಪುರುಷರ ಡಿಸ್ಕಸ್ ಥ್ರೊ F56 ಸ್ಪರ್ಧೆಯಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ.
ಯೋಗೇಶ್ ಕಥುನಿಯಾ ಫೈನಲ್‌ನಲ್ಲಿ ಅಮೋಘ ಸಾಧನೆ ಮಾಡಿದರು. ಮೊದಲ ಪ್ರಯತ್ನದಲ್ಲಿ ಯೋಗೇಶ್ ಅವರು 42.22 ಮೀಟರ್ ದೂರ ಡಿಸ್ಕಸ್ ಎಸೆದರು. ಇದಾದ ನಂತರ ಕ್ರಮವಾಗಿ 41.50 ಮೀಟರ್, 41.55 ಮೀಟರ್, 40.33 ಮೀಟರ್ ಮತ್ತು 40.89 ಮೀಟರ್ಸ್ ಕ್ರಮವಾಗಿ ಎಸೆದರು. ಸದ್ಯ ಭಾರತ ಪದಕ ಪಟ್ಟಿಯಲ್ಲಿ 30ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೆ, ಭಾರತ 1 ಚಿನ್ನದ ಪದಕ ಹೊರತುಪಡಿಸಿ, ಮೂವರು ಆಟಗಾರರು ಬೆಳ್ಳಿ ಪದಕ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಈ ವಿಭಾಗದ ಬಂಗಾರ ಬ್ರೆಜಿಲ್ ದೇಶದ ಕ್ಲೌಡಿನಿ ಬಟಿಸ್ಟಾ ಪಾಲಾಯಿತು. ಇವರು 46.86 ಮೀಟರ್ ಡಿಸ್ಕಸ್ ಎಸೆದು ಸಾಧನೆ ಮಾಡಿದರು. ಇನ್ನು ಈ ವಿಭಾಗದ ಕಂಚು ಗ್ರೀಸ್ ದೇಶದ ಕೆ. ಝೌನಿಸ್ ಪಾಲಾಯಿತು.
ಯೋಗೇಶ್ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲೀ ಯೋಗೇಶ್ ಬೆಳ್ಳು ಸಾಧನೆ ಮಾಡಿದ್ದರು ಈ ಮೂಲಕ ಸತತ ಎರಡನೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ದೊಡ್ಡ ಸ್ಥಾನ ಗಳಿಸಿದ್ದಾರೆ. ಇದೀಗ ಭಾರತದ ಪದಕಗಳ ಸಂಖ್ಯೆ 8ಕ್ಕೆ ತಲುಪಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications