Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್ ಡಬಲ್ ಮೆಡಲ್ ಗೆಲ್ಲುವತ್ತ ಶೂಟರ್ ಭಾಕರ್ ಕಣ್ಣು

Young Manu Bhaker takes twin aim at Tokyo

ನವದೆಹಲಿ, ಮೇ 10: ಯುವ ಶೂಟರ್ ಮನು ಭಾಕರ್ ಅವರು ಒಲಿಂಪಿಕ್ಸ ಗೇಮ್ಸ್ ನಲ್ಲಿ ಎರಡು ಪದಕ ಗೆಲ್ಲುವತ್ತ ದೃಷ್ಟಿ ನೆಟ್ಟಿದ್ದಾರೆ. ಹಾಗಾಗಿಯೇ 16ರ ಹರೆಯದ ಹರಿಯಾಣ ಕ್ರೀಡಾಪಟು ಭಾಕರ್ ಇನ್ನು ಮುಂದೆ 10ಮೀ ಏರ್ ಪಿಸ್ತೂಲ್ ವಿಭಾಗಕ್ಕೆ ನೀಡುವಷ್ಟೇ ಲಕ್ಷ್ಯವನ್ನು 25ಮೀ ಸ್ಪೋರ್ಟ್ ಪಿಸ್ತೂಲ್ ಸ್ಪರ್ಧೆಗೂ ನೀಡಲು ಯೋಚಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಭಾಕರ್, 'ವರ್ಲ್ಡ್ ಕಪ್ ಮತ್ತು ಜೆಕ್ ರಿಪಬ್ಲಿಕ್ ಟೂರ್ನಮೆಂಟ್ ಗಳಿಗೆ ನೋಂದಾವಣೆ ಕಳಿಸುವಾಗ ಮ್ಯೂನಿಕ್ (ಸೀನಿಯರ್) ಮತ್ತು ಸುಹ್ಲ್ (ಜೂನಿಯರ್) ಎರಡೂ ವಿಭಾಗದಲ್ಲೂ ನೋಂದಾವಣೆ ಮಾಡಿಕೊಳ್ಳುವತ್ತ ಯೋಚಿಸಿದ್ದೇನೆ' ಎಂದಿದ್ದಾರೆ.

Young Manu Bhaker takes twin aim at Tokyo

ಕೊರಿಯಾದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 15ರ ವರೆಗೆ ನಡೆಯಲಿರುವ ಚಾಂಗ್ವಾನ್ ವರ್ಲ್ಡ್‌ ಚಾಂಪಿಯನ್ ಶಿಪ್ ನಲ್ಲೂ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಲು ಭಾಕರ್ ನಿರ್ಧರಿಸಿದ್ದಾರೆ. ಈ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಳ್ಳುವಿಕೆ 2020ರ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ನೆರವಾಗಲಿರುವುದಾಗಿ ಭಾಕರ್ ಹೇಳಿದ್ದಾರೆ.

Young Manu Bhaker takes twin aim at Tokyo

ಕಳೆದ ತಿಂಗಳು ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನ ವನಿತಾ 10 ಮೀ. ಏರ್ ಪಿಸ್ತೂಲ್ ನಲ್ಲಿ ಭಾಕರ್ ಚಿನ್ನ ಜಯಿಸಿದ ಸಾಧನೆ ಮಾಡಿದ್ದರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಕರ್ ಒಂದು ವೇಳೆ ಎರಡೂ ವಿಭಾಗಗಳ ಶೂಟಿಂಗ್ ನಲ್ಲಿ ಸ್ಪರ್ಧಿಸುವಂತಾದರೆ ಆ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಹೆಚ್ಚಳವಾಗುವುದನ್ನು ನಿರೀಕ್ಷಿಬಹುದುದಾಗಿದೆ.

Story first published: Thursday, May 10, 2018, 17:16 [IST]
Other articles published on May 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+