36 ವರ್ಷಗಳ ಬಳಿಕ ಬಾಲಕರ ವಿಂಬಲ್ಡನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ Arnav Paparkar
ಭಾರತದ ಉದಯೋನ್ಮುಖ ಟೆನಿಸ್ ತಾರೆ ಅರ್ನವ್ ಪಾಪಾರ್ಕರ್ ಪ್ರಸ್ತುತ ಭಾರೀ ಸುದ್ದಿಯಲ್ಲಿದ್ದಾರೆ. 18 ವರ್ಷದ ಯುವ ಆಟಗಾರ ಲಂಡನ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೂರ್ನಿಯಲ್ಲಿ ಇತಿಹಾಸ ಬರೆದಿದ್ದಾರೆ. ಇವರು ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಭಾರತದ ಅರ್ನವ್ 6-2, 6-1 ಅಂತರದಲ್ಲಿ ಜಪಾನ್‌ನ ರಿಯೊ ಟಬಾಟಾ ಅವರನ್ನು ಕೇವಲ 52 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಹೋರಾಟದಲ್ಲಿ ಸೋಲಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಈ ಮೂಲಕ ಅರ್ನವ್ ಪ್ರತಿಷ್ಠಿತ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಜೂನಿಯರ್ ವಿಂಬಲ್ಡನ್‌ನಲ್ಲಿ ಈ ಮೊದಲು ಈ ಸಾಧನೆಯನ್ನು 1990ರಲ್ಲಿ ಲಿಯಾಂಡರ್ ಪೇಸ್ ಮಾಡಿದ್ದರು.

36 ವರ್ಷಗಳಲ್ಲಿ ಜೂನಿಯರ್ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತದ ಆಟಗಾರ ಅರ್ನವ್ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಮೊದಲು 1990ರಲ್ಲಿ ಲಿಯಾಂಡರ್ ಪೇಸ್ ಚಾಂಪಿಯನ್ ಆಗಿದ್ದರು. ಪಂದ್ಯಾವಳಿಯ 16 ರ ಸುತ್ತಿನ ಪಂದ್ಯದಲ್ಲಿ ಜೂನಿಯರ್ ಶ್ರೇಯಾಂಕದಲ್ಲಿ 19ನೇ ಸ್ಥಾನದಲ್ಲಿರುವ ಅರ್ನವ್ ಜಪಾನ್‌ನ ರಿಯೊ ಟಬಾಟಾ ಅವರನ್ನು ಎದುರಿಸಿದರು. ಈ ಪಂದ್ಯದಲ್ಲಿ ಮೊದಲಿನಿಂದಲೂ ಅಮೋಘ ಆಟದ ಪ್ರದರ್ಶನ ನೀಡಿದ ಅರ್ನವ್ ಅರ್ಹ ಗೆಲುವು ದಾಖಲಿಸಿದರು.
ಗಂಟೆಗೆ 208 ಕಿಲೋ ಮೀಟರ್ ವೇಗದ ಸರ್ವ್
ಪುಣೆಯ 6 ಅಡಿ ಉದ್ದದ ಆಟಗಾರ 16ನೇ ಸುತ್ತಿನ ಪಂದ್ಯದಲ್ಲಿ 8 ಏಸ್ ಅಂಕಗಳನ್ನು ಪಡೆದರೆ, ಒಮ್ಮೆಯೂ ಈ ಪಂದ್ಯದಲ್ಲಿ ಇವರು ಡಬಲ್ ಫಾಲ್ಟ್ ಮಾಡಲಿಲ್ಲ. ಇವರು ತಮ್ಮ ಸರ್ವ್‌ಗಳ ಮೂಲಕವೇ 92 ರಷ್ಟು ಅಂಕಗಳನ್ನು ಗೆದ್ದರು. ಈ ಪಂದ್ಯದ ವೇಳೆ ಅವರು ಗಂಟೆಗೆ ಬರೋಬ್ಬರಿ 208 ಕಿಲೋ ಮೀಟರ್ ವೇಗದಲ್ಲಿ ಸರ್ವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಇವರ ಸರಾಸರಿ ಸರ್ವ್ ವೇಗ ಗಂಟೆಗೆ 196 ಕಿಲೋ ಮೀಟರ್ ಆಗಿತ್ತು.

ಜಪಾನ್‌ನ ರಿಯೊ ಟಬಾಟಾ ಇತಿಹಾಸದಲ್ಲಿ ಎರಡು ಬಾರಿ ಅರ್ನವ್ ಅವರನ್ನು ಮಣಿಸಿದ್ದರು. ಅರ್ನವ್ ಮಹತ್ವದ ಪಂದ್ಯದಲ್ಲಿ ಜಪಾನ್ ಆಟಗಾರನನ್ನು ಮಣಿಸಿ ಸೇಡು ತಿರಿಸಿಕೊಂಡಿದ್ದಾರೆ. ಪುಣೆಯಲ್ಲಿ ಹೇಮಂತ್ ಬೇಂದ್ರೆ ಮತ್ತು ಸ್ಪೇನ್‌ನ ಸೊಟೊ ಅಕಾಡೆಮಿಯಲ್ಲಿ ನಿಗೆಲ್ ಬೀವರ್ಸ್ ನೇತೃತ್ವದಲ್ಲಿ ಅರ್ನವ್ ತರಬೇತಿ ಪಡೆಯುತ್ತಿದ್ದಾರೆ.
ಟೂರ್ನಿಯಲ್ಲಿ ಇದುವರೆಗೆ ಒಂದು ಸೆಟ್ ಅನ್ನು ಸಹ ಕಳೆದುಕೊಳ್ಳದ ಅರ್ನವ್ ಪಾಪಾರ್ಕರ್, ಈಗ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಅರ್ಹತಾ ಆಟಗಾರ ಜೋರ್ಡಾನ್ ಲೀ ಅವರನ್ನು ಎದುರಿಸಲಿದ್ದಾರೆ. ಅರ್ನವ್ ತನ್ನ ಫಾರ್ಮ್ ಅನ್ನು ಮುಂದುವರಿಸಿ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications