ಆಸ್ಟ್ರೇಲಿಯನ್ ಓಪನ್: 7ನೇ ದಿನ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಇಗಾ ಸ್ವೀಟೆಕ್, ಕೊಕೊ ಗಾಲ್ಫ್

ಆಸ್ಟ್ರೇಲಿಯನ್ ಓಪನ್ 2022 ರ ಏಳನೇ ದಿನವು ಒಟ್ಟು ಎಂಟು ಪಂದ್ಯಗಳಿಗೆ ಸಾಕ್ಷಿಯಾಗಲಿದ್ದು ಕೆಲ ಪಂದ್ಯಗಳು ಹೆಚ್ಚಿನ ಕುತೂಹಲ ಮೂಡಿಸಿದೆ. 7ನೇ ದಿನ ಕೊಕೊ ಗೌಫ್, ಸ್ಟೆಫಾನೋಸ್ ಸಿಟ್ಸಿಪಾಸ್ ಮತ್ತು ಎಲೆನಾ ರೈಬಾಕಿನಾ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದು ಕುತೂಹಲಕಾರಿ ಮುಖಾಮುಖಿಗಾಗಿ ಅಭಿಮಾನಿಗಳು ಸಜ್ಜಾಗಿದ್ದಾರೆ.
ಕಳೆದ ವರ್ಷ ವಿಶ್ವ ನಂ.2 ಓನ್ಸ್ ಜಬೇರ್ ಅವರನ್ನು ಸೋಲಿಸಿ ವಿಂಬಲ್ಡನ್ ಮುಡಿಗೇರಿಸಿಕೊಂಡಿದ್ದ ಕಜಕಿಸ್ತಾನ್‌ನ ಎಲೆನಾ ರೈಬಾಕಿನಾ ವಿರುದ್ಧ ಸ್ವಿಟೆಕ್ ಸೆಣಸಲಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಮುಖಾಮುಖಿಯಲ್ಲಿ21 ವರ್ಷದ ಸ್ವಿಟೆಕ್ ಇನ್ನೂ ಒಂದು ಸೆಟ್ ಅನ್ನು ಕೂಡ ಕಳೆದುಕೊಂಡಿಲ್ಲ. ಹೀಗಾಗಿ ಈ ಮುಖಾಮೂಕಿ ಸಾಕಷ್ಟು ಪೈಪೋಟಿಯಿಂದ ಕೂಡಿರುವುದರಲ್ಲಿ ಅನುಮಾನವಿಲ್ಲ.
ಮತ್ತೊಂದೆಡೆ ವಿಶ್ವದ ನಂ.3 ಜೆಸ್ಸಿಕಾ ಪೆಗುಲಾ ಅವರು 2021 ರ ಫ್ರೆಂಚ್ ಓಪನ್ ಚಾಂಪಿಯನ್ ಮತ್ತು ಪ್ರಸ್ತುತ ಡಬಲ್ಸ್‌ನ ನಂ.2 ಆಟಗಾರ್ತಿ ಬಾರ್ಬೊರಾ ಕ್ರೆಜ್ಸಿಕೋವಾ ಅವರೊಂದಿಗೆ ಜಾನ್ ಕೇನ್ ಅರೆನಾದಲ್ಲಿ ಸೆಣೆಸಾಡಲಿದ್ದಾರೆ.
ಇನ್ನು ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಗ್ರೀಸ್‌ನ ಮರಿಯಾ ಸಕ್ಕರಿ ಅವರನ್ನು ಸೋಲಿಸಿದ ಚೀನಾದ ಲಿನ್ ಝು ಅವರೊಂದಿಗೆ ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಹೋರಾಟ ನಡೆಸಲು ಸಜ್ಜಾಗಿದ್ದಾರೆ. 10ನೇ ಶ್ರೇಯಾಂಕದ ಮ್ಯಾಡಿಸನ್ ಕೀಸ್ ಅವರನ್ನು ಮೂರು ಸೆಟ್‌ಗಳಲ್ಲಿ ಸೋಲಿಸಿದ ನಂತರ ಅಜರೆಂಕಾ ಕೂಡ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದು ಕುತೂಹಲ ಕೆರಳಿಸಿದೆ.
3ನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್ ಮತ್ತು ಇಟಲಿಯ ಜಾನಿಕ್ ಸಿನ್ನರ್ ನಡುವಿನ ಪಂದ್ಯ ಕೂಡ ಅಭಿಮಾನಿಗಳಿಗೆ ಭರಪೂರ ಮರಂಜನೆ ನೀಡುವುದರಲ್ಲಿ ಅನುಮಾನವಿಲ್ಲ. ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ಯುವ ಸೆನ್ಸೇಷನಲ್ ಆಟಗಾರ್ತಿ ಕೊಕೊ ಗೌಫ್ ಅವರಿಗೆ ಜೆಲೆನಾ ಒಸ್ಟಾಪೆಂಕೊ ಎದುರಾಳಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications