Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಜೊಕೊವಿಕ್ 22ನೇ ಗ್ರ್ಯಾನ್‌ಸ್ಲ್ಯಾಮ್‌ಗೆ ಅಡ್ಡಿಯಾಗಲಿದ್ದಾರಾ ಸ್ಟಿಫಾನೋಸ್?

Australian Open 2023 final: Novak Djokovic eye on 22nd Grand Slam title set to face Stefanos Tsitsipas

ಆಸ್ಟ್ರೇಲಿಯನ್ ಓಪನ್‌ನ ಪುರುಷರ ವಿಭಾಗದ ಫೈನಲ್‌ ಪಂದ್ಯಕ್ಕೆ ಟೆನಿಸ್ ಪ್ರೇಮಿಗಳು ಸಜ್ಜಾಗಿದ್ದಾರೆ. ಟೆನಿಸ್‌ನ ದಿಗ್ಗಜ ನೊವಾಕ್ ಜೊಕೊವಿಕ್ ದಾಖಲೆಯ 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆಲುವಿನ ಸನಿಹದಲ್ಲಿದ್ದು ರಾಫೆಲ್ ನಡಾಲ್ ಅವರ ವಿಶ್ವದಾಖಲೆಯ 22ನೇ ಗ್ರ್ಯಾನ್‌ಸ್ಲ್ಯಾಮ್ ಗೆಲುವು ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ. ಈ ಕನಸಿಗೆ ಗ್ರೀಕ್ ಟೆನಿಸಿಗ ಸ್ಟಿಫಾನೋಸ್ ಸಿತ್ಸಿಪಾಸ್ ಫೈನಲ್‌ನಲ್ಲಿ ಅಡ್ಡಿಯಾಗಲಿದ್ದಾರಾ ಎಂಬುದು ಈಗ ಉಳಿದಿರುವ ಕುತೂಹಲವಾಗಿದೆ.

24 ವರ್ಷ ವಯಸ್ಸಿನ ಗ್ರೀಕ್ ಆಟಗಾರ ಸಿತ್ಸಿಪಾಸ್ ಅವರಿಗೆ ಇದು ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಫೈನಲ್‌ ಸ್ಪರ್ಧೆಯಾಗಿದೆ. ಆದರೆ ಜೊಕೊವಿಕ್‌ಗೆ ಇದು 31ನೇ ಗ್ರ್ಯಾನ್‌fಸಲ್ಯಾಮ್ ಫೈನಲ್ ಸ್ಪರ್ಧೆ ಎಂಬುದು ಗಮನಾರ್ಹ. ಈ ಗ್ರ್ಯಾನ್‌ಸ್ಲ್ಯಾಮ್‌ನ ವಿಜೇತರು ಎಟಿಪಿ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೆ ಏರಲಿದ್ದಾರೆ.

ಇನ್ನು ಆಸ್ಟ್ರೇಲಿಯನ್ ಓಪನ್‌ನಲ್ಲಿ ಜೊಕೊವಿಕ್ ಅತ್ಯಂತ ಹೆಚ್ಚು ನಿತಂತರ ಗೆಲುವಿನ ದಾಖಲೆಯನ್ನು ಹೊಂದಿದ್ದು ಸತತ 27 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ 55 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಸುದೀರ್ಘ ದಾಖಲೆಯನ್ನು ಹೊಂದಿದ್ದಾರೆ. ಇದೀಗ ಫೈನಲ್‌ನಲ್ಲಿ ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಜೊಕೊವಿಕ್. ಇನ್ನು ಇವರಿಬ್ಬರ ನಡುವಿನ ಹೆಡ್ ಟು ಹೆಡ್ ಮುಖಾಮುಖಿಯಲ್ಲಿಯೂ ಜೊಕೊವಿಕ್ ಸಂಪೂರ್ಣ ಮೇಲುಗೈ ಸಾಧಿಸಿದ್ದು 10-2ರ ಅಂತರದಿಂದ ಮುಂದಿದ್ದಾರೆ. ಇದರಲ್ಲಿ ಸತತ 9 ಗೆಲುವು ಸೇರಿದೆ.

ಇನ್ನು ಶ್ರೇಷ್ಠ ಆಟಗಾರರಾದ ನಡಾಲ್ ಮತ್ತು ನಿವೃತ್ತ ದಿಗ್ಗಜ ರೋಜರ್ ಫೆಡರರ್ ಕೂಡ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಫೈನಲ್‌ನಲ್ಲಿ ಜೊಕೊವಿಕ್ ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ. ಈ ದಾಖಲೆಯನ್ನು ವಿಸ್ತರಿಸುವ ಹೆಚ್ಚಿನ ಸಾಧ್ಯತೆಗಳು ದಟ್ಟವಾಗಿದೆ.

Story first published: Saturday, January 28, 2023, 23:05 [IST]
Other articles published on Jan 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+