ಭಾರತದಲ್ಲಿ ಸದ್ಯ ಕ್ರಿಕೆಟ್ ಪಂದ್ಯವಾಳಿಗಳು ನಡೆಯುತ್ತಿವೆ. ಇನ್ನು ಆಸ್ಟ್ರೇಲಿಯಾದಲ್ಲಿ ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿ ನಡೆಯತ್ತಿದೆ. ಈ ಟೂರ್ನಿಯಲ್ಲಿ ವಿಶ್ವದ ಸ್ಟಾರ್ ಆಟಗಾರರು ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಆಟಕ್ಕೆ ಬಿಸಿಲು ಅಡ್ಡಿಪಡಿಸಿದೆ. ಶನಿವಾರ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ 36 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಹೀಗಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಆಸ್ಟ್ರೇಲಿಯನ್ ಓಪನ್ ನಡೆಯುತ್ತಿದ್ದ ಪಂದ್ಯಗಳ ಅಂಗಳದ ಮೇಲಿನ ಛಾವಣಿಗಳನ್ನು ಮುಚ್ಚಲಾಯಿತು. ಆಟಗಾರರು ಹಾಗೂ ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಮದ ಆಯೋಜಕರು ದೊಡ್ಡ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಹೆಚ್ಚಿನ ಬಿಸಲು ಇದ್ದಿದ್ದರಿಂದ ಶನಿವಾರ ಹಲವಾರು ಪಂದ್ಯಗಳನ್ನು ಮುಂದೂಡಲಾಯಿತು. ಪ್ರೇಕ್ಷಕರು ಬಿಸಿಲಿನ ಶಾಖದಿಂದ ಪಾರಾಗಲು ಟೋಫಿ ಧರಿಸಿದರು. ಅಲ್ಲದೆ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಮಿಸ್ಟಿಂಗ್ ಫ್ಯಾನ್‌ಗಳನ್ನು ಸಹ ಬಳಲಸಾಯಿತು.

ಇಟಲಿಯ ಸ್ಟಾರ್ ಆಟಗಾರ ಹಾಗೂ ಹಾಲಿ ಚಾಂಪಿಯನ್ ಜಾನಿಕ್ ಸಿನ್ನರ್ ಅವರು ಆಡುತ್ತಿದ್ದ ಪಂದ್ಯಕ್ಕೂ ಬಿಸಿಲ ಶಾಖ ಕಾಟ ನೀಡಿದೆ. ರಾಡ್ ಲೇವರ್ ಅರೆನಾದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಸಿನ್ನರ್ ಅವರು ಸ್ನಾಯು ಸೆಳೆತ ಅನುಭವಿಸಿದರು. ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿದ್ದರಿಂದ ಪಂದ್ಯವನ್ನು ಎಂಟು ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮೈದಾನಕ್ಕೆ ಮೇಲ್ಛಾವಣಿ ಅಳವಡಿಕೆ ಮಾಡಿದ ಬಳಿಕ ಆಟಗಾರರು ಸುಧಾರಿಸಿಕೊಳ್ಳಲು ಅವಕಾಶವನ್ನು ನೀಡಿ ಮತ್ತೆ ಪಂದ್ಯವನ್ನು ಆರಂಭಿಸಲಾಯಿತು.
ಆಯೋಜಕರು ಯಾವುದೇ ಹೊರಾಂಗಣ ಪಂದ್ಯಗಳನ್ನು ಆಡಲಾಗುವುದಿಲ್ಲ ಎಂದು ಪಂದ್ಯಾವಳಿಯ ರೆಫರಿ ಘೋಷಿಸಿದರು. ಸಂಘಟಕರು ಕೆಲವು ಪಂದ್ಯಗಳನ್ನು ಮರು ನಿಗದಿಪಡಿಸಲು ನಿರ್ಧರಿಸಿದರು.
ಪುರಷರ ಸಿಂಗಲ್ಸ್ ಪಂದ್ಯದಲ್ಲಿ ಸಿನ್ನರ್ ಅವರು ಅಮೋಘ ಪ್ರದರ್ಶನ ನೀಡಿದರು. ಇವರು 4-6, 6-3, 6-4, 6-4 ಸೆಟ್‌ಗಳಿಂದ ಎಲಿಯಟ್ ಸ್ಪಿಜ್ಜಿರಿ ಅವರನ್ನು ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದರು.
ಮಹಿಳಾ ವಿಭಾಗದಲ್ಲಿ, ಹಾಲಿ ಚಾಂಪಿಯನ್ ಮ್ಯಾಡಿಸನ್ ಕೀಸ್ ಕಠಿಣ ಹವಾಮಾನದ ಹೊರತಾಗಿಯೂ ಅದ್ಭುತ ಪ್ರದರ್ಶನ ನೀಡಿದರು, ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದರು. ಉಳದಂತೆ ಅಮೆರಿಕದ ಅಮಂಡಾ ಅನಿಸಿಮೊವಾ 6-1, 6-4 ರಿಂದ ತಮ್ಮದೇ ದೇಶದ ಪೇಟನ್ ಸ್ಟಿಯರ್ನ್ಸ್ ಅವರನ್ನು ಮಣಿಸಿದರು.