Australian Open: ಫೈನಲ್‌ನಲ್ಲಿ ಜೋಕೊವಿಕ್, ಅಲ್ಕರಾಜ್ ಫೈಟ್
ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ದಿಗ್ಗಜ ಆಟಗಾರ ನೊವಾಕ್ ಜೋಕೊವಿಕ್ ಹಾಗೂ ಕಾರ್ಲೋಸ್ ಅಲ್ಕರಾಜ್ ಜಯ ಸಾಧಿಸಿದ್ದು, ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಪುರುಷರ ಸಿಂಗಲ್ಸ್ ಉಪಾಂತ್ಯ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ಜಾನಿಕ್ ಸಿನ್ನರ್ ನಡುವೆ ನಡೆಯಿತು. ಪ್ರಶಸ್ತಿ ಸುತ್ತು ಪ್ರವೇಶಿಸಲು ಉಭಯ ಆಟಗಾರರ ನಡುವೆ 4 ಗಂಟೆಗಳಿಗೂ ಹೆಚ್ಚು ಕಾಲ ಜಿದ್ದಾಜಿದ್ದಿನ ಕಾಳಗ ನಡೆಯಿತು. ಅಂತಿಮವಾಗಿ ಸ್ಥಿರ ಪ್ರದರ್ಶನ ನೀಡಿದ ಜೋಕೊ ಐದು ಸೆಟ್‌ಗಳ ಪಂದ್ಯವನ್ನು 3-2 ಅಂತರದಿಂದ ಗೆದ್ದು, ಫೈನಲ್‌ಗೆ ಅರ್ಹತೆ ಪಡೆದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಸೆಟ್‌ನಲ್ಲಿ ಜಾನಿಕ್ ಸಿನ್ನರ್ ಮುನ್ನಡೆ ಸಾಧಿಸಿದರು. ಈ ಸೆಟ್‌ನ್ನು ಜಾನಿಕ್ ಸಿನ್ನರ್ 6-3 ರಿಂದ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಜೋಕೊ ಪುಟಿದೆದ್ದರು. ಅಲ್ಲದೆ 6-3 ರಿಂದ ಸೆಟ್ ಗೆದ್ದರು. ಮೂರನೇ ಸೆಟ್‌ನಲ್ಲಿ ಜಾನಿಕ್ ಸಿನ್ನರ್ ಅಮೋಘ ಸರ್ವ್‌ಗಳನ್ನು ಮಾಡಿ ಅಂಕಗಳನ್ನು ಬಾಚಿಕೊಂಡು 6-3 ರಿಂದ ಸೆಟ್ ತಮ್ಮದಾಗಿಸಿಕೊಂಡರು. ಆದರೆ ನಂತರದ ಎರಡೂ ಸೆಟ್‌ಗಳಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಜೋಕೊ ಅಬ್ಬರಿಸಿದರು. ನಾಲ್ಕನೇ ಸೆಟ್ ಅನ್ನು 6-4 ರಿಂದ ಗೆದ್ದ ಸರ್ಬಿಯಾ ಆಟಗಾರ, ಐದನೇ ಸೆಟ್‌ನ್ನು ಸಹ 6-4 ರಿಂದ ಗೆದ್ದು ಕೊಂಡು ಫೈನಲ್ ಪ್ರವೇಶಿಸಿದರು.
ನೊವಾಕ್ ಜೊಕೊವಿಕ್ ಮತ್ತು ಜಾನಿಕ್ ಸಿನ್ನರ್ ನಡುವಿನ ಈ ರೋಮಾಂಚಕಾರಿ ಸೆಮಿಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ, ಸಿನ್ನರ್ ಮೊದಲ ಸೆಟ್ ಅನ್ನು 6-3 ಅಂತರದಿಂದ ಗೆದ್ದರು. ನಂತರ ನೊವಾಕ್ ಜೊಕೊವಿಕ್ ಎರಡನೇ ಸೆಟ್‌ನಲ್ಲಿ ಗಮನಾರ್ಹ ಪುನರಾಗಮನ ಮಾಡಿದರು, 6-3 ಅಂತರದಿಂದ ಗೆದ್ದರು, ಪಂದ್ಯವನ್ನು 1-1 ಡ್ರಾಕ್ಕೆ ತಂದರು. ಸಿನ್ನರ್ ಮತ್ತೊಮ್ಮೆ ಮೂರನೇ ಸೆಟ್‌ನಲ್ಲಿ ಪುನರಾಗಮನ ಮಾಡಿ 6-4 ಅಂತರದಿಂದ ಗೆದ್ದು 2-1 ಮುನ್ನಡೆ ಸಾಧಿಸಿದರು.
ಈಗಾಗಲೇ ನೊವಾಕ್ ಜೋಕೊವಿಕ್ 2008, 2011, 2012, 2013, 2015, 2016, 2019, 2020, 2021, 2023ರಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. 11ನೇ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಕನಸು ಜೋಕೊವಿಕ್ ಅವರದ್ದಾಗಿದೆ. ಒಟ್ಟಾರೆ ನೊವಾಕ್ 25ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯ ಹುಡುಕಾಟದಲ್ಲಿದ್ದಾರೆ.

ಕಾರ್ಲೋಸ್ ಅಲ್ಕರಾಜ್‌ಗೆ ಜಯ
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ 6-4, 7-6, 6-7, 6-7, 7-5 ರಿಂದ ಸ್ಪೇನ್‌ನ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಜಯ ಸಾಧಿಸಿದರು. ಈ ಇಬ್ಬರ ಹೋರಾಟ 5 ಗಂಟೆ 27 ನಿಮಿಷ ನಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications