ಆಸ್ಟ್ರೇಲಿಯನ್ ಓಪನ್, ದಿನ 2: ಟೂರ್ನಿಯಿಂದ ಹೊರಬಿದ್ದ ಕ್ವಿಟೋವಾ ಹಾಗೂ ಫೆರ್ನಾಂಡೆಜ್

ಆಸ್ಟ್ರೇಲಿಯನ್ ಓಪನ್‌ನ ಎರಡನೇ ದಿನ ಕೆಲ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಯುಎಸ್ ಓಪನ್ ರನ್ನರ್ ಅಪ್ ಲೇಲಾ ಫೆರ್ನಾಂಡಿಸ್ ಮತ್ತು ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಆಸ್ಟ್ರೇಲಿಯನ್ ಓಪನ್ ಕಣದಿಂದ ಅಚ್ಚರಿಯ ರೀತಿಯಲ್ಲಿ ಹೊರಬಿದ್ದಿದ್ದಾರೆ. ಇದು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಎರಡನೇ ದಿನದಾಟದ ಪ್ರಮುಖ ಹೈಲೈಟ್ಸ್ ಆಗಿದೆ.
ಲೇಲಾ ಫರ್ನಾಂಡಿಸ್ 2021 ರಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮೂಲಕ ಭಾರೀ ಭರವಸೆ ಮೂಡಿಸಿದ್ದರು. ಆದರೆ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಒಂದು ಗಂಟೆ 23 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅವರು ಮ್ಯಾಡಿಸನ್ ಇಂಗ್ಲಿಷ್ ವಿರುದ್ಧ 6-4, 6-2 ನೇರ ಸೆಟ್‌ಗಳಿಂದ ಸೋಲು ಅನುಭವಿಸಿದ್ದಾರೆ. ಇನ್ನು ಆರಂಭಿಕ ಸುತ್ತಿನಲ್ಲಿ ಸೋಲು ಕಂಡ ಪ್ರಮುಖ ಆಟಗಾರರ ಪೈಕಿ ಕೆನಡಾದ ಪೆಟ್ರಾ ಕ್ವಿಟೋವಾ ಮತ್ತು ಕೊಕೊ ಗೌಫ್ ಕೂಡ ಸೇರುತ್ತಾರೆ.
ಆರಂಭಿಕ ಸುತ್ತಿನಲ್ಲಿ ಸೋಲು ಅನುಭವಿಸಿದ ಪೆಟ್ರಾ ಕ್ವಿಟೋವಾ: ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ತನ್ನ ಎದುರಾಳಿ ಸೊರಾನಾ ಸಿರ್ಸ್ಟಿಯಾ ವಿರುದ್ಧ 2-6, 2-6 ಅಂತರದಿಂದ ಸೋಲು ಅನುಭವಿಸಿ ಮೊದಲ ಸುತ್ತಿನಲ್ಲಿ ಪರಾಭವಗೊಂಡರು. 2019ರ ಆಸ್ಟ್ರೇಲಿಯನ್ ಓಪನ್ ಫೈನಲಿಸ್ಟ್ ಆಗಿರುವ ಕ್ವಿಟೋವಾ ಅವರನ್ನು ಕೇವಲ 72 ನಿಮಿಷಗಳಲ್ಲಿ ವಿಶ್ವದ ನಂ.38 ಶ್ರೇಯಾಂಕ ಹೊಂದಿರುವ ಸಿರ್ಸ್ಟಿಯಾ ಮಣಿಸುವಲ್ಲಿ ಯಶಸ್ವಿಯಾದರು. ಈ ಗೆಲುವಿನ ಮೂಲಕ ಈ ವರ್ಷವೂ ಸಿರ್ಸ್ಟಿಯಾಗೆ ತನ್ನ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.
ಹೆನ್ರಿ ಲ್ಯಾಕ್ಸೊನೆನ್ ವಿರುದ್ಧ ಗೆದ್ದ ಡೇನಿಯಲ್ ಮೆಡ್ವೆಡೆವ್: ಇನ್ನು ಮತ್ತೊಂದು ಪಂದ್ಯದಲ್ಲಿ ವಿಶ್ವ ನಂ.2 ಆಟಗಾರ ಮತ್ತು ಯುಎಸ್ ಓಪನ್ ಚಾಂಪಿಯನ್ ಡೇನಿಯಲ್ ಮೆಡ್ವೆಡೆವ್ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಡೇನಿಯಲ್ ಮೆಡ್ವೆಡೆವ್ ಮೆಲ್ಬೋರ್ನ್‌ನಲ್ಲಿ ತಮ್ಮ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಕನಸಿಗೆ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಹೆನ್ರಿ ಲಾಕ್ಸೊನೆನ್ ಅವರನ್ನು ಮಣಿಸಿದರು. ಒಂದು ಗಂಟೆ 54 ನಿಮಿಷಗಳ ಕಾಲ ನಡೆದ ಈ ಪಂದ್ಯ 6-1, 6-4 ಮತ್ತು 7-6ರಲ್ಲಿ ಅಂತರದಿಂದ ರಷ್ಯಾ ಮೂಲದ ಆಟಗಾರ ಗೆಲುವು ಸಾಧಿಸಿದ್ದಾರೆ.
ಆಂಡಿ ಮುರ್ರೆ vs ನಿಕೊಲೊಜ್ ಬೆಸಿಲಾಶ್ವಿಲಿ ರೋಚಕ ಸೆಣೆಸಾಟ: ಈ ಮಧ್ಯೆ ಮಾಜಿ ವಿಶ್ವ ನಂ.1 ಆಟಗಾರ ಆಂಡಿ ಮರ್ರೆ ಆಸ್ಟ್ರೇಲಿಯನ್ ಓಪನ್ ಕಿರೀಟಕ್ಕಾಗಿ ಹೋರಾಟವನ್ನು ಜಾನ್ ಕೇನ್ ಅರೆನಾದಲ್ಲಿ ಮುಂದುವರಿಸಿದ್ದಾರೆ. ಇಂದು ನಡೆದ ರೋಚಕ ಸೆಣೆಸಾಟದಲ್ಲಿ ಐದು ಸೆಟ್‌ವರೆಗೆ ಪಂದ್ಯ ಸಾಗಿದ್ದು ಅಂತಿಮವಾಗಿ ಮರ್ರೆ ರೋಚಕ ಗೆಲುವು ಸಾಧಿಸಿದರು. ಮಾಜಿ ವಿಶ್ವ ನಂ.1 ಟೆನಿಸಿಗ ಆಂಡಿ ಮರ್ರೆ ಆರಂಭಿಕ ಸುತ್ತಿನಲ್ಲಿ ಸೋಲಿನಿಂದ ರೋಚಕ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಭಾರೀ ಪೈಪೋಟಿಯ ಮೊದಲ ಸುತ್ತಿನ ಈ ಪಂದ್ಯದಲ್ಲಿ 21 ನೇ ಶ್ರೇಯಾಂಕದ ಜಾರ್ಜಿಯಾ ಮೂಲದ ನಿಕೊಲೊಜ್ ಬಸಿಲಾಶ್ವಿಲಿ ಅವರನ್ನು ಸೋಲಿಸಿದರು. ಕೊನೆಯ ಕೆಲವು ನಿಮಿಷಗಳಲ್ಲಿ ಮರ್ರೆ ಅದ್ಭುತ ಪ್ರದರ್ಶನ ನೀಡುವ ಮೂಲಕ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications