Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಮಿಕ್ಸೆಡ್ ಡಬಲ್ಸ್‌ನಲ್ಲಿ ಸೋಲು; ಸಾನಿಯಾ ಮಿರ್ಜಾ ಹೋರಾಟ ಅಂತ್ಯ

Australian Open: Sania Mirza and Rajeev Ram Knocked Out, defeated mixed doubles in quarters

ಈ ಋತುವಿನ ಮೊದಲ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್ ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೋರಾಟ ಅಂತ್ಯಗೊಂಡಿದೆ. ಅಮೆರಿಕದ ಟೆನಿಸ್ ಆಟಗಾರ ರಾಜೀವ್ ರಾಮ್ ಜತೆ ಮಿಶ್ರ ಡಬಲ್ಸ್ ನಲ್ಲಿ ಕಣಕ್ಕೆ ಇಳಿದಿದ್ದ ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಮಂಗಳವಾರ ನಡೆದ ಮಿಶ್ರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಸಾನಿಯಾ-ರಾಮ್ 4-6, 6-7 ರಲ್ಲಿ ಆಸ್ಟ್ರೇಲಿಯಾದ ಮಿಶ್ರ ಡಬಲ್ಸ್‌ನ ಜೇಸನ್ ಕುಬ್ಲರ್ ಮತ್ತು ಜೇಮಿ ಫೋರ್ಲಿಸ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಮೊದಲ ಸೆಟ್‌ನಲ್ಲಿ ದಯನೀಯ ಹಿನ್ನೆಡೆ ಅನುಭವಿಸಿದ ಸಾನಿಯಾ ಜೋಡಿ ಎರಡನೇ ಸೆಟ್‌ನಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಭಾನುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ-ರಾಜೀವ್ ಜೋಡಿ 7-6 (8/6), 6-4ರಲ್ಲಿ ನೆದರ್ಲ್ಯಾಂಡ್ಸ್‌ನ ಜೋಡಿಯಾದ ಎಲ್ಲೆನ್ ಪೆರೆಜ್-ಮಿಡಲ್‌ಕೂಪ್ ವಿರುದ್ಧ ಗೆಲುವು ಸಾಧಿಸಿದ್ದರು. 87 ನಿಮಿಷಗಳ ಪಂದ್ಯದಲ್ಲಿ ಸಾನಿಯಾ-ರಾಜೀವ್ ರಾಮ್ ಜೋಡಿ ಐದು ಏಸ್ ಗಳನ್ನು ಬಾರಿಸಿ ನಾಲ್ಕು ಬಾರಿ ಸರ್ವ್ ಮುರಿದರು.

ಡಬಲ್ಸ್‌ನಲ್ಲಿ ಸಾನಿಯಾ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ನಾಡಿಯಾ ಕಿಚ್ನೋಕ್ ವಿರುದ್ಧ ಸೋತರು. ಸಾನಿಯಾ ಜೋಡಿ 4-6, 6-7 (5) ಸೆಟ್‌ಗಳಿಂದ ಸ್ಲೊವೇನಿಯಾದ ತಮಾರಾ ಜಿಡಾನೆಸೆಕ್-ಕಾಜಾ ಜುವಾನ್ ವಿರುದ್ಧ ಸೋತರು. ಸೋಲಿನ ನಂತರ ಇದು ತಮ್ಮ ಕೊನೆಯ ಋತುವಾಗಿದ್ದು, ನಂತರ ಆಟಕ್ಕೆ ವಿದಾಯ ಹೇಳುವುದಾಗಿ ಹೈದರಾಬಾದ್ ಸ್ಟಾರ್ ಘೋಷಿಸಿದ್ದಾರೆ.

ಈ ಸೋಲಿನ ನಂತರವೇ ಸಾನಿಯಾ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಇದು ನನ್ನ ಕೊನೆಯ ಸೀಸನ್ ಎಂದು ನಾನು ನಿರ್ಧರಿಸಿದೆ. ಒಂದು ವಾರದಿಂದ ಈ ಟೂರ್ನಿಯಲ್ಲಿ ಆಡುತ್ತಿದ್ದೇನೆ. ಇಡೀ ಋತುವಿನಲ್ಲಿ ಆಡಲು ಸಾಧ್ಯವಿದೆಯೇ ಎಂದು ಖಚಿತವಿಲ್ಲ. ಆದರೆ ನಾನು ಇಡೀ ಋತುವಿನಲ್ಲಿ ಆಡುವ ಬಯಕೆ ಹೊಂದಿದ್ದೇನೆ ಎಂದು ಸಾನಿಯಾ ಹೇಳಿದ್ದರು.

Story first published: Tuesday, January 25, 2022, 15:54 [IST]
Other articles published on Jan 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+