Australian Open: ಜೋಕೊ ಮಣಿಸಿದ ಅಲ್ಕರಾಜ್‌ಗೆ ಪ್ರಶಸ್ತಿ
ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ನೂತನ ಚಾಂಪಿಯನ್ ಆಗಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್, ವಿಶ್ವದ ಮಾಜಿ ನಂಬರ್ 1 ಆಟಗಾರ ನೋವಾಕ್ ಜೊಕೊವಿಕ್‌ಗೆ ಶಾಕ್ ನೀಡಿದರು. ಈ ಮೂಲಕ ಕಾರ್ಲೋಸ್ ಅಲ್ಕರಾಜ್ ಇತಿಹಾಸ ನಿರ್ಮಿಸಿದರು. ಇದೇ ಮೊದಲ ಬಾರಿಗೆ ಕಾರ್ಲೋಸ್ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 25ನೇ ಗ್ರ್ಯಾನ್ ಸ್ಲ್ಯಾಮ್ ಗೆಲ್ಲುವ ಕನಸು ಕಾಣುತ್ತಿದ್ದ ನೋವಾಕ್ ಜೊಕೊವಿಕ್ ಆಸೆ ಕಮರಿದೆ.
ಭಾನುವಾರ ರೆಡ್ ಲೇವರ್ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ 2-6, 6-2, 6-3, 7-5 ರಿಂದ ಸರ್ಬಿಯಾದ ಸ್ಟಾರ್ ಆಟಗಾರ ನೋವಾಕ್ ಜೊಕೊವಿಕ್ ಅವರನ್ನು ಮಣಿಸಿದರು. ಉಭಯ ಆಟಗಾರರು ಪ್ರಶಸ್ತಿಗಾಗಿ 3 ಗಂಟೆ 2 ನಿಮಿಷಗಳ ಕಾಲ ಹೋರಾಟವನ್ನು ನಡೆಸಿದರು.

ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ ಜೊಕೊವಿಕ್ ಆಡಿದ ಧಾಟಿಯನ್ನು ನೋಡಿದರೆ, 25ನೇ ಗ್ರ್ಯಾನ್ ಸ್ಲ್ಯಾಮ್ ಹತ್ತಿರದಲ್ಲೇ ಇದೆ ಅನಿಸುತ್ತಿತ್ತು. ಆದರೆ ಕಾರ್ಲೋಸ್ ಅಲ್ಕರಾಜ್ ಎರಡನೇ ಸೆಟ್‌ನಲ್ಲಿ ಪುಟಿದೆದ್ದರು. ನೋವಾಕ್ ಮೊದಲ ಸೆಟ್‌ನ್ನು ಸುಲಭವಾಗಿ ಗೆದ್ದು 1-0 ಮುನ್ನಡೆ ಸಾಧಿಸಿದ್ದರು. ಆದರೆ ನೋವಾಕ್ ಈ ಅಂತರವನ್ನು ಹೆಚ್ಚಿಸಲು ಬಿಡಲೇ ಇಲ್ಲ. ಎರಡನೇ ಸೆಟ್‌ನಲ್ಲಿ ತಮ್ಮ ನೈಜ ಆಟವನ್ನು ಆಡಿದ ಕಾರ್ಲೋಸ್, ಪದೇ ಪದೇ ನೋವಾಕ್‌ಗೆ ಸವಾಲುಗಳನ್ನು ಎಸೆಯುತ್ತಲೇ ಸಾಗಿದರು. ಅಲ್ಲದೆ ಎರಡನೇ ಸೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆದ್ದರು.
ಮೂರನೇ ಸೆಟ್‌ನ ಆರಂಭದಿಂದಲೂ ಸ್ಪೇನ್ ಆಟಗಾರ ಅಂಕಗಳಿಕೆಯಲ್ಲಿ ಮುನ್ನಡೆಯನ್ನು ಸಾಧಿಸಿದ್ದರು. ಇವರು ನೋವಾಕ್ ಅವರಿಗೆ ಗ್ಯಾಪ್ ಶಾಟ್‌ಗಳ ಮೂಲಕ ಕಾಟ ನೀಡಿ ಅಂಕಗಳನ್ನು ವೃದ್ಧಿಸುತ್ತಾ ಸಾಗಿದರು. ಅಲ್ಲದೆ ಮೂರನೇ ಸೆಟ್‌ನ್ನು ಸುಲಭವಾಗಿ ಗೆದ್ದು ಬೀಗಿದರು. ನಾಲ್ಕನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ನೋವಾಕ್ ತಮ್ಮ ಅನುಭವ ಬಳಸಿಕೊಂಡು ಆಡಿದರೂ ಸಹ ಸ್ಪೇನ್ ಆಟಗಾರನ ಉತ್ತಮ ಆಟದ ಮುಂದೆ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲರಾಗಲಿಲ್ಲ. ಅಲ್ಲದೆ ನಾಲ್ಕನೇ ಸೆಟ್‌ನ್ನು 7-5 ರಿಂದ ಗೆದ್ದು ಇತಿಹಾಸ ನಿರ್ಮಿಸಿದರು.

ಕಾರ್ಲೋಸ್ ಅಲ್ಕರಾಜ್ ಸಾಧನೆ
ಕಾರ್ಲೋಸ್ ಅಲ್ಕರಾಜ್ ಈ ಹಿಂದೆ ವಿಂಬಲ್ಡನ್ (2023, 2024), ಫ್ರೆಂಚ್ ಓಪನ್ (2024, 2025), ಯುಎಸ್ ಓಪನ್ (2022) ಮತ್ತು ಗೆದ್ದಿದ್ದರು. ಇದು ಅವರ ವೃತ್ತಿ ಜೀವನದ 6ನೇ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಈ ಗೆಲುವಿನ ಮೂಲಕ ಅಲ್ಕರಾಜ್ ಮತ್ತೊಂದು ದಾಖಲೆ ಬರೆದರು. ಇವರು ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ನಾಲ್ಕೂ ಪ್ರಮುಖ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಗೆದ್ದು ಕೆರಿಯರ್ ಸ್ಲಾಮ್ ಪೂರ್ಣಗೊಳಿಸಿದರು. ಇದಕ್ಕೂ ಮೊದಲು ಈ ಸಾಧನೆಯನ್ನು ಡಾನ್ ಬಡ್ಜ್, ರಾಡ್ ಲೇವರ್, ರಾಯ್ ಎಮರ್ಸನ್, ಆಂಡ್ರೆ ಅಗಾಸ್ಸಿ, ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications