ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಸ್ಟ್ರೇಲಿಯನ್ ಓಪನ್: ಫೆಡರರ್ ಮಣಿಸಿ ಫೈನಲ್‌ ಪ್ರವೇಶಿಸಿದ ಜಾಕೋವಿಕ್

Djokovic Beats Federer, Reaches Australian Open Final

ಆಸ್ಟ್ರೇಲಿಯನ್ ಓಪನ್‌ನಲ್ಲಿ ಟೆನಿಸ್ ದಿಗ್ಗಜ ಪೆಡರರ್ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಇಂದು ದಿಗ್ಗಜರಾದ ರೋಜರ್ ಫೆಡರರ್ ಮತ್ತು ನೋವಾಕ್ ಜಾಕೋವಿಕ್ ಮುಖಾಮುಖಿಯಾದರು. ಈ ಹಣಾಹಣಿಯಲ್ಲಿ ಫೆಡರರ್ ಜಾಕೊವಿಕ್‌ಗೆ ಶರಣಾಗಿ ಆಸ್ಟ್ರೇಲಿಯನ್ ಓಪನ್‌ನಿಂದ ಹೊರಬಿದ್ದಿದ್ದಾರೆ. ಈ ಮೂಲಕ ಫೆಡರರ್ ಅವರ ಏಳನೆ ಆಸ್ಟ್ರೇಲಿಯನ್ ಓಪನ್ ಕನಸು ಭಗ್ನ ಗೊಂಡಂತಾಗಿದೆ.

ಈ ಗೆಲುವಿನೊಂದಿಗೆ ಸರ್ಬಿಯಾದ ಆಟಗಾರ ನೋವಾಕ್ ಜಾಕೊವಿಕ್ ಎಂಟನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಆಗಿರುವ ಜಾಕೊವಿಕ್ ಈ ಬಾರಿಯೂ ಫೈನಲ್ ಪ್ರವೇಶಿಸುವ ಮೂಲಕ 8ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ ಧರಿಸಲು ಹತ್ತಿರವಾಗಿದ್ದಾರೆ.

ಬಾಲ್‌ ಗರ್ಲ್‌ಗೆ ಮುತ್ತಿಕ್ಕಿದ ವಿಶ್ವ ನಂ.1 ರಾಫೆಲ್ ನಡಾಲ್: ವೈರಲ್ ವೀಡಿಯೋಬಾಲ್‌ ಗರ್ಲ್‌ಗೆ ಮುತ್ತಿಕ್ಕಿದ ವಿಶ್ವ ನಂ.1 ರಾಫೆಲ್ ನಡಾಲ್: ವೈರಲ್ ವೀಡಿಯೋ

ಇಂದಿನ ಸೆಣೆಸಾಟದಲ್ಲಿ ಆರಂಭದಲ್ಲಿ ರೋಜರ್‌ ಫೆಡರರ್ ಮುನ್ನಡೆಯನ್ನು ಪಡೆದುಕೊಂಡಿದ್ದರು. ಆದರೆ ಬಳಿಕ ತಿರುಗಿ ಬಿದ್ದ ಜಾಕೊವಿಕ್ ಎಲ್ಲೂ ಎಡವಲಿಲ್ಲ. 7-6(7-1), 6-4, 6-3 ನೇರ ಸೆಟ್‌ಗಳಿಂದ ಜಾಕೊವಿಕ್ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಗೆಲುವು ನೋವಾಕ್ ಜಾಕೊವಿಕ್‌ಗೆ ಒಟ್ಟಾರೆಯಾಗಿ 26ನೇ ಗ್ರ್ಯಾಂಡ್‌ ಸ್ಲ್ಯಾಮ್ ಫೈನಲ್‌ಗೆ ಹಾದಿ ತೋರಿಸಿದೆ.

ಆಸ್ಟ್ರೇಲಿಯನ್ ಓಪನ್‌ನ ಸೆಮಿ ಫೈನಲ್‌ನಲ್ಲಿ ಜಾಕೊವಿಕ್ ನಾಲ್ಕನೇ ಬಾರಿಗೆ ರೋಜರ್ ಫೆಡರರ್‌ನನ್ನು ಸೋಲಿಸಿದ್ದಾರೆ. ಈ ಹಿಂದೆ 2008, 2011 ಮತ್ತು 2016ರಲ್ಲೂ ಸೆಮಿ ಫೈನಲ್‌ ಹಾದಿಯಲ್ಲೇ ಫೆಡರರ್‌ಗೆ ಜಾಕೊವಿಕ್ ಸೋಲಿನ ರುಚಿ ತೋರಿಸಿದ್ದರು.

Story first published: Thursday, January 30, 2020, 19:50 [IST]
Other articles published on Jan 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X