ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮುಡಿಗೆ ಯುಎಸ್ ಓಪನ್ ಕಿರೀಟ

ನ್ಯೂಯಾರ್ಕ್: ಆಸ್ಟ್ರಿಯಾದ ಡೊಮಿನಿಕ್ ಥೀಮ್ ಕೊನೆಗೂ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದಾರೆ. ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ಥೀಮ್ ಮೊದಲ ಗ್ರ್ಯಾಂಡ್‌ಸ್ಲ್ಯಾಮ್ ಗೆಲುವಿನ ಸಂಭ್ರಮಾಚರಿಸಿದ್ದಾರೆ.
ಭಾನುವಾರ (ಸೆಪ್ಟೆಂಬರ್ 13) ನಡೆದ ಪುರುಷರ ಸಿಂಗಲ್ಸ್‌ನ ರೋಚಕ ಫೈನಲ್ ಪಂದ್ಯದಲ್ಲಿ ಡೊಮಿನಿಕ್ ಥೀಮ್, ಎದುರಾಳಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 2-6, 4-6, 6-4, 6-3, 7-6(6) ಅಂತರದಲ್ಲಿ ಹಿಮ್ಮೆಟ್ಟಿಸಿದರು. ಪಂದ್ಯದ ಆರಂಭದಲ್ಲಿ ಗೆಲ್ಲುವ ಫೇವರಿಟ್ ಆಗಿ ಥೀಮ್ ಕಾಣಿಸಿಕೊಂಡಿದ್ದರಾದರೂ ಆರಂಭಿಕ ಎರಡು ಸೆಟ್‌ಗಳಲ್ಲಿ ಹಿನ್ನಡೆ ಅನುಭವಿಸಿ ಸೋಲಿನ ಭೀತಿ ಅನುಭವಿಸಿದ್ದರು.
ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.3ನೇ ಶ್ರೇಯಾಂಕದಲ್ಲಿರುವ ಡೊಮಿನಿಕ್, ಈ ಹಿಂದೆ ಮೂರು ಬಾರಿ ಗ್ರ್ಯಾಂಡ್‌ಸ್ಲ್ಯಾಮ್‌ಗಳಲ್ಲಿ ಸೋತಿದ್ದರು. ಈ ಬಾರಿ ಯುಎಸ್ ಓಪನ್‌ನಲ್ಲಿ ದಿಟ್ಟ ಆಟದ ಪ್ರದರ್ಶಿಸುವ ಮೂಲಕ ಗ್ರ್ಯಾಂಡ್‌ಸ್ಲ್ಯಾಮ್ ಜಯದ ಖುಷಿ ಅನುಭವಿಸಿದ್ದಾರೆ.
ಶನಿವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ನವೋಮಿ ಒಸಾಕಾ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಒಸಾಕಾ ಅವರು ಬೈಲೋರಷ್ಯಾದ ವಿಕ್ಟೋರಿಯಾ ಅಝರೆಂಕಾ ಅವರ ವಿರುದ್ಧ ಸೆಣಸಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications