Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Australian Open: ಸಬಲೆಂಕಾ ಮಣಿಸಿದ ಎಲೆನಾ ಚಾಂಪಿಯನ್‌

26 ವರ್ಷದ ಯುವ ಆಟಗಾರ್ತಿ ಎಲೆನಾ ರಿಬಕಿನಾ ಅಮೋಘ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಶನಿವಾರ ನಡೆದ ಹೋರಾಟದಲ್ಲಿ ಅರಿನಾ ಸಬಲೆಂಕಾ ಅವರನ್ನು ಮಣಿಸಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದರು.

ಶನಿವಾರ ರಾಡ್ ಲೇವರ್ ಅರೇನಾದಲ್ಲಿ ಪಂದ್ಯದಲ್ಲಿ ಕಝಕ್ ಆಟಗಾರ್ತಿ ಅಮೋಘ ಆಟದ ಪ್ರದರ್ಶನ ನೀಡಿ ಅಬ್ಬರಿಸಿದರು. ಎಲೆನಾ ರಿಬಕಿನಾ ಫೈನಲ್‌ ಪಂದ್ಯದಲ್ಲಿ 6-4, 4-6, 6-4 ರಿಂದ ಅರಿನಾ ಸಬಲೆಂಕಾ ಅವರನ್ನು ಮಣಿಸಿ ಅಬ್ಬರಿಸಿದರು. ಇಬ್ಬರು ಆಟಗಾರ್ತಿಯರು ಪ್ರಶಸ್ತಿಗಾಗಿ 2 ಗಂಟೆ 18 ನಿಮಿಷ ಹೋರಾಟವನ್ನು ನಡೆಸಿದರು. ಈ ಪಂದ್ಯದಲ್ಲಿ ಎಲೆನಾ ರಿಬಕಿನಾ ಸ್ಥಿರ ಪ್ರದರ್ಶನ ನೀಡಿದರು.

Elena Rybakina

ಎಲೆನಾ ರಿಬಕಿನಾ ಮೊದಲ ಸರ್ವ್‌ನಲ್ಲಿ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಈ ವೇಳೆ ಉಭಯ ಆಟಗಾರ್ತಿಯರು ಸುಮಾರು 190 ಕಿಲೋ ಮೀಟರ್ ವೇಗದಲ್ಲಿ ಸರ್ವ ಮಾಡಿದರು. ಮೊದಲ ಪಂದ್ಯವನ್ನು ಸುಲಭಾವಗಿ ಗೆದ್ದ ಎಲೆನಾ ರಿಬಕಿನಾ, ಎರಡನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಎಲೆನಾ ರಿಬಕಿನಾ ತಮ್ಮ ಅನುಭವ ಬಳಸಿಕೊಂಡು ಆಟವಾಡಿದರು. ಅಲ್ಲದೆ ಸೆಟ್‌ಗೆದ್ದು ಇತಿಹಾಸ ನಿರ್ಮಿಸಿದರು. ಇವರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದು ಸಾಧನೆ ಮಾಡಿದರು. ಇದಕ್ಕೂ ಮೊದಲು 2022 ರಲ್ಲಿ ಇವರು ವಿಂಬಲ್ಡನ್‌ ಪ್ರಶಸ್ತಿಯನ್ನು ಗೆದ್ದು ದಾಖಲೆ ಬರೆದಿದ್ದರು.

ಬೆಲುರಸ್‌ನ ಆಟಗಾರ್ತಿ ಅರಿನಾ ಸಬಲೆಂಕಾ ಐದನೇ ಬಾರಿಗೆ ಗ್ರ್ಯಾಂಡ್‌ ಸ್ಲ್ಯಾಮ್‌ ಎತ್ತುವ ಕನಸು ವಿಫಲವಾಗಿದೆ. ಇವರು ಈ ಮೊದಲು 2023, 2024ರಲ್ಲಿ ಆಸ್ಟ್ರೇಲಿಯನ್ ಓಪನ್, 2024, 2025ರಲ್ಲಿ ಯುಎಸ್‌ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಫೈನಲ್ ಫೈಟ್

ಭಾನುವಾರ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಆಟಗಾರ ಕಾರ್ಲೋಸ್ ಅಲ್ಕರಾಜ್ ಹಾಗ ದಿಗ್ಗಜ ಟೆನಿಸ್‌ ಆಟಗಾರ ನೋವಾಕ್ ಜೋಕೊವಿಕ್ ನಡೆವೆ ಪೈಪೋಟಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವುದು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ನೋವಾಕ್‌ ಜೋಕೊವಿಕ್ ಮೊದಲ ಪ್ರಶಸ್ತಿಯ ಹುಡುಕಾಟದಲ್ಲಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಚೊಚ್ಚಲ ಆಸ್ಟ್ರೇಲಯನ್ ಓಪನ್ ಪ್ರಶಸ್ತಿ ಪಡೆಯುವ ಕನಸಿನಲಿದ್ದಾರೆ.

Story first published: Saturday, January 31, 2026, 17:30 [IST]
Other articles published on Jan 31, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+