ಮಹುತ್-ಹರ್ಬರ್ಟ್ ಜೋಡಿಗೆ ಫ್ರೆಂಚ್ ಓಪನ್ ಡಬಲ್ಸ್ ಗರಿ


ಪ್ಯಾರೀಸ್, ಜೂ. 11: ನಿಕೋಲಸ್ ಮಹುತ್ ಮತ್ತು ಪಿಯರ್-ಹ್ಯೂಸ್ ಹರ್ಬರ್ಟ್ ಜೋಡಿ ರೋಲ್ಯಾಂಡ್ ಗ್ಯಾರೋಸ್ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಶನಿವಾರ ನಡೆದ ಡಬಲ್ಸ್ ಫೈನಲ್ ಪಂದ್ಯದಲ್ಲಿ ಮಹುತ್-ಹರ್ಬರ್ಟ್ ಜೋಡಿ ಆಲಿವರ್ ಮರಾಚ್ ಮತ್ತು ಮೇಟ್ ಪವಿಕ್ ಅವರನ್ನು 6-2, 7-6 (4) ಅಂತರದಿಂದ ಹಿಮ್ಮೆಟ್ಟಿಸಿತು.
ಫ್ರೆಂಚ್ ಆಟಗಾರರಾದ ಮಹುತ್ ಮತ್ತು ಹರ್ಬರ್ಟ್, ಆಸ್ಟ್ರಿಯಾದ ಆಲಿವರ್ ಮತ್ತು ಕ್ರೋಷಿಯಾದ ಪವಿಕ್ ಅವರನ್ನು ಮೊದಲ ಸೆಟ್ ನಲ್ಲಿ ಸುಲಭವಾಗಿ ಸೋಲಿಸಿದರಾದರೂ ದ್ವಿತೀಯ ಸೆಟ್ ನಲ್ಲಿ ಎದುರಾಳಿಯಿಂದಲೂ ಪ್ರಬಲ ಪೈಪೋಟಿ ದೊರೆತ ಕಾರಣ ಟೈಬ್ರೇಕರ್ ಮೂಲಕ ಫ್ರೆಂಚ್ ಜೋಡಿ ಪಂದ್ಯ ಗೆಲ್ಲಬೇಕಾಯಿತು.
2015ರಲ್ಲಿ ಯೂಎಸ್ ಓಪನ್ ಮತ್ತು 2016ರಲ್ಲಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಸಾಧನೆ ಹೊಂದಿರುವ ಮಹುತ್-ಹರ್ಬರ್ಟ್ ಜೋಡಿ ಈ ಪಂದ್ಯದಲ್ಲೂ ರೋಲ್ಯಾಂಡ್ ಗ್ಯಾರೋಸ್ ಜಯಿಸುವಲ್ಲಿ ಅಂತಿಮವಾಗಿ ಯಶಸ್ವಿಯಾಯಿತು.
ರೋಲ್ಯಾಂಡ್ ಗ್ಯಾರೋಸ್ ಜಯಿಸಿದ ಮೂರನೇ ಫ್ರೆಂಚ್ ಜೋಡಿಯಾಗಿ ಮಹುತ್-ಹರ್ಬರ್ಟ್ ಗುರುತಿಸಿಕೊಂಡಿದ್ದು ವಿಶೇಷ. ಈ ಹಿಂದೆ 2014ರಲ್ಲಿ ಜೂಲಿಯನ್ ಬೆನ್ನೆಟ್ಯೂ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ಜೋಡಿ, 1984ರಲ್ಲಿ ಹೆನ್ರಿ ಲೆಕೊಂಟೆ ಮತ್ತು ಯನ್ನಿಕ್ ನೋಹ್ ಜೋಡಿ ಫ್ರೆಂಚ್ ಓಪನ್ ಜಯಿಸಿದ್ದ ಕೀರ್ತಿಗೆ ಪಾತ್ರವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications