Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

19 ಗ್ರ್ಯಾನ್‌ಸ್ಲ್ಯಾಮ್‌ಗಳ ಗೆದ್ದು ಇತಿಹಾಸ ಬರೆದ ನೊವಾಕ್ ಜೊಕೋವಿಕ್

French Open: Novak Djokovic makes history with 19th Grand Slam title

ಪ್ಯಾರಿಸ್: ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೋವಿಕ್ ಟೆನಿಸ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಫ್ರೆಂಚ್ ಓಪನ್ 2021ರ ಪ್ರಶಸ್ತಿಯೊಂದಿಗೆ ಒಟ್ಟಿಗೆ 19 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿರುವ ಜೊಕೋವಿಕ್ 52 ವರ್ಷಗಳಲ್ಲಿ ಎಲ್ಲಾ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಎರಡೆರಡು ಬಾರಿ ಚಾಂಪಿಯನ್‌ ಎನಿಸುವ ಮೂಲಕ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಭಾನುವಾರ (ಜೂನ್ 13) ನಡೆದ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್, ಗ್ರೀಕ್ ಬಲಿಷ್ಠ ಸ್ಟೆಫಾನೊಸ್ ಸಿಸಿಪಸ್ ವಿರುದ್ಧ ಸುದೀರ್ಘ ಕಾಳಗದೊಂದಿಗೆ 6-7 (6/8), 2-6, 6-3, 6-2, 6-4ರ ಅಂತರದಿಂದ ಗೆದ್ದರು.

34ರ ಹರೆಯದ ಜೊಕೋವಿಕ್‌ಗೆ ಇನ್ನು ಒಂದು ಗ್ರ್ಯಾನ್‌ಸ್ಲ್ಯಾಮ್‌ ಜಯಿಸಿದರೆ, 20 ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆ ನಿರ್ಮಿಸಿರುವ ಸ್ವಿಝರ್ಲ್ಯಾಂಡ್ ಆಟಗಾರ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಾಫೆಲ್ ನಡಾಲ್ ಸಾಧನೆ ಸರಿದೂಗಿಸಲಿದ್ದಾರೆ.

ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಇಬ್ಬರೂ ತಲಾ 20 ಗ್ರ್ಯಾಂಡ್‌ಸ್ಲ್ಯಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊಕೋವಿಕ್ ಗೆದ್ದಿರುವ 19 ಗ್ರ್ಯಾನ್‌ಸ್ಲ್ಯಾಮ್‌ಗಳು ಯಾವುವೆಂದರೆ
* ಆಸ್ಟ್ರೇಲಿಯಾ ಓಪನ್ (9): 2008, 2011, 2012, 2013, 2015, 2016, 2019, 2020, 2021.
* ವಿಂಬಲ್ಡನ್ (5): 2011, 2014, 2015, 2018, 2019.
* ಯುಎಸ್ ಓಪನ್ (3): 2011, 2015, 2018.
*ಫ್ರೆಂಚ್ ಓಪನ್ (2): 2016, 2021.

Story first published: Monday, June 14, 2021, 11:34 [IST]
Other articles published on Jun 14, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+