ರಾಫೆಲ್ ನಡಾಲ್, ನೊವಾಕ್ ಜೊಕೊವಿಚ್ ಪಂದ್ಯಗಳು ಮುಂದೂಡಿಕೆ
ಪ್ಯಾರಿಸ್, ಜೂನ್ 7: ಮಳೆಯ ಕಾರಣದಿಂದಾಗಿ, ಮಂಗಳವಾರ ನಡೆಯಬೇಕಿದ್ದ ರಾಫೆಲ್ ನಡಾಲ್ ಹಾಗೂ ಜೊಕೊವಿಚ್ ಅವರ ಪ್ರತ್ಯೇಕ ಕ್ವಾರ್ಟರ್ ಫೈನಲ್ ಪಂದ್ಯಗಳು ಗುರುವಾರಕ್ಕೆ (ಜೂನ್ 7) ಮುಂದೂಡಲ್ಪಟ್ಟಿವೆ.
ಹಾಗೆಯೇ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳೂ ಮುಂದೂಡಲ್ಪಟ್ಟಿವೆ.
ಕೋರ್ಟ್ ಫಿಲಿಪೆ ಚಾರ್ಟಿಯರ್ ಹಾಗೂ ಕೋರ್ಟ್ ಸುಝಾನ್ನೆ ಲೆಂಗ್ಲೆನ್ ಅಂಗಣದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ನಡಾಲ್ , ಜೊಕೊ, ಮರ್ರೆ ಅವರ ಪಂದ್ಯಗಳು ನಡೆಯಲಿವೆ.

ಭಾರತೀಯ ಕಾಲಮಾನ ಪ್ರಕಾರ, ಗುರುವಾರ ಮಧ್ಯಾಹ್ನ 2:30ರ ನಂತರವೇ ಎಲ್ಲಾ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭಗೊಳ್ಳಲಿವೆ.
ಮೊದಲ ಪಂದ್ಯದಲ್ಲಿ ರಾಫೆಲ್ ನಡಾಲ್, ಪಾಬ್ಲೋ ಕಾರೆನೊ ಬಸ್ಟಾ ಎದುರುಬದುರಾಗಲಿದ್ದಾರೆ. ಆನಂತರದ ಪಂದ್ಯಗಳಲ್ಲಿ ಆ್ಯಂಡಿ ಮರ್ರೆ - ಕಿಯ್ ನಿಶಿಕೋರಿ, ಸ್ಟಾನಿಸ್ಲಾಸ್ ವಾವ್ರಿಂಕಾ- ಮರಿನ್ ಸಿಲಿಕ್, ಡೊಮಿನಿಕ್ ಥೀಮ್- ನೊವಾಕ್ ಜೊಕೊವಿಚ್ ಮುಖಾಮುಖಿಯಾಗಲಿದ್ದಾರೆ.
ವೊಸ್ನಿಯಾಕಿ, ಮ್ಲಾಡೆನೊವಿಚ್ ಗೆ ಸೋಲಿನಾಘಾತ
ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಬುಧವಾರ ನಡೆಯಬೇಕಿದ್ದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳಷ್ಟೇ ತಾರ್ಕಿಕ ಅಂತ್ಯ ಕಂಡವು. ಅಲ್ಲೂ ಮಳೆಯ ಕಾಟವಾದರೂ, ಎರಡು ಪಂದ್ಯಗಳು ಫಲಿತಾಂಶ ಕಾಣುವಲ್ಲಿ ಯಶಸ್ವಿಯಾದವು.
ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ನ ವೊಸ್ನಿಯಾಕಿ (12ನೇ ಶ್ರೇಯಾಂಕ) ಅವರು, ತಮಗಿಂತಲೂ ಕಿರಿಯ ಆಟಗಾರ್ತಿಯಾದ ಲ್ಯಾಟ್ವಿಯಾದ ಜೆಲಿನಾ ಒಸ್ಟಾಪೆಂಕೋ (37ನೇ ಶ್ರೇಯಾಂಕ) ವಿರುದ್ಧ 6-4, 2-6, 2-6 ಸೆಟ್ ಗಳ ಅಂತರದಲ್ಲಿ ಆಘಾತಕಾರಿ ಸೋಲನ್ನು ಅನುಭವಿಸಿದರು.
ಮತ್ತೊಂದು ಪಂದ್ಯದಲ್ಲಿ ಮತ್ತೊಬ್ಬ ಹಿರಿಯ ಆಟಗಾರ್ತಿಯಾದ ಫ್ರಾನ್ಸ್ ನ ಕ್ರಿಶ್ಚಿನಾ ಮ್ಲಾಡೆನೊವಿಚ್ (ವಿಶ್ವ ಶ್ರೇಯಾಂಕ 14) ಅವರು, ತಮಗಿಂತಲೂ ಕಿರಿಯ ಆಟಗಾರ್ತಿಯಾದ ಸ್ವಿಜರ್ಲೆಂಡ್ ನ ಟಿಮಿಯಾ ಬ್ಯಾಕ್ಸಿನ್ಸ್ ಕಿ (ವಿಶ್ವ ಶ್ರೇಯಾಂಕ 31) ವಿರುದ್ಧ 4-6, 4-6 ಸೆಟ್ ಗಳ ಅಚ್ಚರಿಯ ಸೋಲು ಕಂಡರು.
ಇನ್ನು, ಉಕ್ರೇನ್ ನ ಎಲಿನಾ ಸ್ವಿಟೋಲಿನಾ- ರೊಮೇನಿಯಾದ ಸಿಮೊನಾ ಹ್ಯಾಲೆಪ್, ಫ್ರಾನ್ಸ್ ನ ಕೆರೊಲಿನ್ ಗಾರ್ಸಿಯಾ- ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಅವರ ಪಂದ್ಯಗಳು ಗುರುವಾರ ನಡೆಯಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications