Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್‌ನಿಂದ ಆಘಾತಕಾರಿ ಸೋಲಿನೊಂದಿಗೆ ನಿರ್ಗಮಿಸಿದ ರೋಹನ್ ಬೋಪಣ್ಣ ಜೋಡಿ

French Open: Rohan Bopanna-Matwe Middelkoop lost the match In Semi-Final Of French Open

ಫ್ರೆಂಚ್ ಓಪನ್‌ನ ಡಬಲ್ಸ್ ವಿಭಾಗದಲ್ಲಿ ಭಾರತದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ನಿರಾಸೆ ಅನುಭವಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ಅವರ ಡಚ್ ಜೊತೆಗಾರ ಮ್ಯಾಟ್ವೆ ಮಿಡೆಲ್‌ಕೂಪ್ ಜೋಡಿ ಮಾರ್ಸೆಲೊ ಅರೆವಾಲೊ ಮತ್ತು ಜೀನ್-ಜುಲಿಯನ್ ರೋಜರ್ ಜೊಡಿಯ ವಿರುದ್ಧ ಸೋಲು ಅನುಭವಿಸಿ ನಿರ್ಗಮಿಸಿದೆ. ಈ ಮೂಲಕ ಭಾರತೀಯ ಆಟಗಾರನ ಹೋರಾಟ ಅಂತ್ಯವಾಗಿದೆ.

ಪ್ಯಾರಿಸ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 16ನೇ ಶ್ರೇಯಾಂಕದ ಜೋಡಿಯಾದ ಬೋಪಣ್ಣ ಮತ್ತು ಮಿಡಲ್‌ಕೂಪ್ 6-4, 3-6 6-7 (8-10) ಸೆಟ್‌ಗಳಿಂದ 12ನೇ ಶ್ರೇಯಾಂಕದ ಎಲ್ ಸಾಲ್ವಡಾರ್ ಮತ್ತು ನೆದರ್ಲೆಂಡ್ಸ್‌ನ ಜೋಡಿ ವಿರುದ್ಧ ಪುರುಷರ ಡಬಲ್ಸ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ 2013ರ ಬಳಿಕ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಪುರುಷಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರಿದ ಮೊದಲ ಭಾರತೀಯ ಆಟಗಾರನಾಗುವ ಅವಕಾಶವನ್ನು ಬೋಪಣ್ಣ ಕಳೆದುಕೊಂಡಿದ್ದಾರೆ

2013ರ ಯುಎಸ್ ಓಪನ್‌ನಲ್ಲಿ ಲಿಯಾಂಡರ್ ಪೇಸ್ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಯಾವುದೇ ಭಾರತೀಯ ಗ್ರ್ಯಾಂಡ್ ಸ್ಲಾಮ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಆಡಿಲ್ಲ. ರೊಹನ್ ಬೋಪಣ್ಣ ಒಂಬತ್ತು ವರ್ಷಗಳ ಬಳಿಕ ಈ ಸಾಧನೆ ಮಾಡುವ ಸನಿಹದಲ್ಲಿದ್ದರು. ಆದರೆ ಮತ್ತೊಮ್ಮೆ ಅದು ನಿರಾಸೆ ಮೂಡಿಸಿದೆ.

ಇನ್ನು ರೋಹನ್ ಬೋಪಣ್ಣ ಪುರುಷರ ಡಬಲ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಫೈನಲ್ ಹಂತಕ್ಕೇರಿದ್ದು 2010ರಷ್ಟು ಹಿಂದೆ. ಅಂದು ರೋಹನ್ ಬೋಪಣ್ಣಗೆ ಪಾಕಿಸ್ತಾನದ ಆಟಗಾರ ಐಸಮ್ ಉಲ್ ಹಕ್ ಖುರೇಶಿ ಜೊತೆಗಾರನಾಗಿ ಸಾಥ್ ನೀಡಿದ್ದರು. ಅಂದಿನ ಫೈನಲ್ ಪಂದ್ಯದಲ್ಲಿ ಭಾರತ-ಪಾಕ್ ಜೋಡಿ ದಿಗ್ಗಜ ಬ್ರ್ಯಾನ್ ಸೋದರರಿಗೆ ಶರಣಾಗಿದ್ದರು.

Story first published: Friday, June 3, 2022, 0:17 [IST]
Other articles published on Jun 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+