ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಏಂಜೆಲಿಕ್ ಕೆರ್ಬರ್

ಬರ್ಲಿನ್: ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಟೆನಿಸ್ ತಾರೆಯಲ್ಲಿ ಜರ್ಮನಿಯ ಏಂಜೆಲಿಕ್ ಕೆರ್ಬರ್ ಕೂಡ ಸೇರಿಕೊಂಡಿದ್ದಾರೆ. ಕಳೆದ ಕೆಲವು ವಾರಗಳಿಂದ ಪ್ರವಾಸ ಪಂದ್ಯಗಳಿಂದ ಕೆರ್ಬರ್ ದೇಹ ದಣಿದಿರುವುದರಿಂದ ಒಲಿಂಪಿಕ್ಸ್‌ನಲ್ಲಿ ಅವರು ಆಡ್ತಿಲ್ಲ ಎಂದು ಜರ್ಮನಿ ಹೇಳಿದೆ.
ಮೂರು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಏಂಜಲಿಕ್ ಕೆರ್ಬರ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಳೆದ ವಾರಗಳಲ್ಲಿ ಕೆರ್ಬರ್ ಟೆನಿಸ್ ಟೂರ್ನಿಗಳಲ್ಲಿ ಬ್ಯುಸಿ ಆಗಿದ್ದು ನಿಜ, ಇದೇ ಕಾರಣಕ್ಕೆ ಅವರು ಜಾಗತಿಕ ಕ್ರೀಡಾಕೂಟದಿಂದ ದೂರ ಉಳಿಯುವ ನಿರ್ಧಾರ ತಾಳಿದ್ದಾರೆ ಎಂದು ತಿಳಿದು ಬಂದಿದೆ.
33ರ ಹರೆಯದ ಕೆರ್ಬರ್ ಕಳೆದ ತಿಂಗಳು ಒಟ್ಟು ಮೂರು ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಬ್ಯಾಡ್ ಹೋಂಬರ್ಗ್ ನಲ್ಲಿ ಪ್ರಶಸ್ತಿ ಗೆದ್ದಿದ್ದರೆ, ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದರು.
"2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದ್ದು ಯಾವತ್ತಿಗೂ ನನ್ನ ಬದುಕಿನ ಅತೀ ಖುಷಿಯ ಕ್ಷಣಗಳಲ್ಲಿ ಒಂದಾಗಿರತ್ತೆ," ಎಂದು ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸುವಾಗ ಕೆರ್ಬರ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications