Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜೊಕೋವಿಕ್ ಕೋಚ್ ಗೊರಾನ್ ಇವಾನಿಸೆವಿಚ್‌ಗೂ ಕೊರೊನಾ ಪಾಸಿಟಿವ್

Goran Ivanisevic tests positive for covid-19

ಬೆಲ್ಗ್ರೇಡ್, ಜೂನ್ 26: ವಿಶ್ವನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್ ಅವರ ಕೋಚ್, ದಂತಕತೆ ಇವಾನಿಸೆವಿಚ್‌‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಕೊರೊನಾ ಸೋಂಕಿಗೆ ಇತ್ತೀಚೆಗೆ ಈಡಾದವರಾಗಿ ಕ್ರೊಯೇಷಿಯಾದ ಮಾಜಿ ಆಟಗಾರ ಇವಾನಿಸೆವಿಚ್‌ ಗುರುತಿಸಿಕೊಂಡಿದ್ದಾರೆ.

ಸರ್ಬಿಯಾ ಮತ್ತು ಕೊಯೇಷಿಯಾದಲ್ಲಿ ನೊವಾಕ್ ಜೊಕೋವಿಕ್ ಆಯೋಜಿಸಿದ್ದ ಆ್ಯಂಡ್ರಿಯಾ ಟೂರ್ ಪ್ರದರ್ಶನ ಟೂರ್ನಿಯಲ್ಲಿ ಇವಾನಿಸೆವಿಚ್‌ ಕೂಡ ಭಾಗವಹಿಸಿದ್ದರು. ಆ್ಯಂಡ್ರಿಯಾ ಟೂರ್ನಿಯಲ್ಲಿ ಆಡಲು ಬಂದಿದ್ದ ಜೊಕೋವಿಕ್ ಅಲ್ಲದೆ ಗ್ರಿಗರ್ ಡಿಮಿಟ್ರೋವ್, ಬೊರ್ನಾ ಕೋರಿಕ್ ಮತ್ತು ವಿಕ್ಟರ್ ಟ್ರಾಯ್ಕಿ ಅವರಿಗೂ ಕೊರೊನಾ ಸೋಂಕು ತಗುಲಿತ್ತು.

2001ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಇವಾನಿಸೆವಿಚ್‌ ಕಳೆದ 10 ದಿನಗಳಲ್ಲಿ ಎರಡು ಬಾರಿ ಕೊರೊನಾವೈರಸ್ ಪರೀಕ್ಷೆ ನಡೆಸಿದ್ದರು. ಅವರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಈಗ ಪಾಸಿಟಿವ್ ಎಂದು ಬಂದಿದೆ ಎಂದು ಇವಾನಿಸೆವಿಚ್‌‌ ತಿಳಿಸಿದ್ದಾರೆ.

'ನನ್ನೊಂದಿಗೆ ಯಾರೆಲ್ಲಾ ಸಂಪರ್ಕದಲ್ಲಿದ್ದರೋ ಅವರೆಲ್ಲರಿಗೆ ತಿಳಿಸುತ್ತಿದ್ದೇನೆ, ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನೀವು ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚಿಗೆ ಕಾಳಜಿ ವಹಿಸಿ,' ಎಂದು ಇವಾನಿಸೆವಿಚ್‌ ಹೇಳಿದ್ದಾರೆ. ಪರೀಕ್ಷೆಗೆ ಮುನ್ನ ತನಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ, ತಾನೀಗ ಸೆಲ್ಫ್ ಐಸೋಲೇಶನ್‌ನಲ್ಲಿರುವುದಾಗಿ ಗೋರನ್ ಮಾಹಿತಿ ನೀಡಿದ್ದಾರೆ.

Story first published: Sunday, June 28, 2020, 13:48 [IST]
Other articles published on Jun 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+