For Quick Alerts
ALLOW NOTIFICATIONS  
For Daily Alerts

Wimbledon 2025: ಇಗಾ ಸ್ವಿಯೆಟೆಕ್ ಮುಡಿಗೆ ವಿಂಬಲ್ಡನ್ ಕಿರೀಟ

ಶನಿವಾರ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ಗೆ ನೂತನ ಚಾಂಪಿಯನ್ ಸಿಕ್ಕಿದ್ದಾರೆ. ಪೋಲೆಂಡ್‌ನ ಇಗಾ ಸ್ವಿಯೆಟೆಕ್ 2025 ರ ವಿಂಬಲ್ಡನ್ ಟೆನಿಸ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು. ಇವರು ಅಮೆರಿಕದ ಅಮಂಡಾ ಇಗಾ ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. ಫೈನಲ್‌ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಏಕಪ್ಷಕೀಯ ಪಂದ್ಯದಲ್ಲಿ ಇಗಾ ಸ್ವಿಯೆಟೆಕ್ ಜಯ ಸಾಧಿಸಿದರು. ಇಗಾ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಸೆಂಟ್ರಲ್‌ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಇಗಾ ಸ್ವಿಯೆಟಿಕ್ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಇವರು ಈ ಪಂದ್ಯದಲ್ಲಿ ಅಮೋಘ ಬ್ಯಾಕ್‌ ಹ್ಯಾಂಡ್ ಸ್ಟ್ರೋಕ್‌ಗಳನ್ನು ಪ್ರದರ್ಶಿಸಿ ಅಂಕಗಳನ್ನು ಬಾಚಿಕೊಂಡರು. ಈ ಮೂಲಕ ಬಹು ವರ್ಷಗಳ ಕಾಯುತ್ತಿದ್ದ ವಿಂಬಲ್ಡನ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದರು. ಭಾರೀ ಕುತೂಹಲ ಹೆಚ್ಚಿಸಿದ ಫೈನಲ್ ಪಂದ್ಯ, ಏಕಪಕ್ಷೀಯವಾಗಿತ್ತು ಎಂಬುದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.

Iga Swiatek Dominates Anisimova 6-0 6-0 to Clinch Maiden Wimbledon Title

ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕದ ಅಮಂಡಾ ವಿಶ್ವದ ನಂಬರ್-1 ಟೆನಿಸ್ ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ಸೋಲಿಸಿದರು. ಹೀಗಾಗಿ ಇವರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಇವರು ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನೀರಸ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಎರಡು ನೇರ ಸಟ್‌ಗಳಲ್ಲಿ ಪಂದ್ಯವನ್ನು ಸೋತ ಅಮೆರಿಕದಾ ಆಟಗಾರ್ತಿ ಇತಿಹಾಸ ನಿರ್ಮಿಸುವ ಅವಕಾಶವನ್ನು ಕೈಚೆಲ್ಲಿದರು.

ಇಗಾ ಸಾಧನೆ

114 ವರ್ಷಗಳ ಬಳಿಕ ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಆಟಗಾರ ಒಂದು ಪಂದ್ಯವನ್ನು ಸೋಲದೇ ಪ್ರಶಸ್ತಿಯನ್ನು ಗೆದ್ದಿರುವುದು ಇದೇ ಮೊದಲಾಗಿದೆ. ಪೋಲೆಂಡ್‌ನ ಸ್ವಿಯೆಟೆಕ್ ಕೇವಲ 57 ನಿಮಿಷಗಳಲ್ಲಿ 13 ನೇ ಶ್ರೇಯಾಂಕದ 23 ವರ್ಷದ ಅಮಂಡಾ ಅನಿಸಿಮೋವಾ ಅವರನ್ನು ಸುಲಭವಾಗಿ ಮಣಿಸಿ ಅಬ್ಬರಿಸಿದರು. ಈ ಮೂಲಕ ವಿಂಬಲ್ಡನ್‌ ಸತತ ಎಂಟನೇ ಬಾರಿಗೆ ನೂತನ ಚಾಂಪಿಯನ್‌ ಪಡೆದುಕೊಂಡಿದೆ. ಇನ್ನು ಪೊಲೆಂಡ್‌ ಆಟಗಾರ್ತಿ ಇಗಾ ಸ್ವಿಯೆಟೆಕ್ ಅವರ ವೃತ್ತಿಜೀವನದ ಆರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಪಡೆದರು ಬೀಗಿದರು. ಇದಕ್ಕೂ ಮೊದಲು ಇವರು ಫ್ರೆಂಚ್‌ ಓಪನ್‌ನಲ್ಲಿ ನಾಲ್ಕು ಬಾರಿ, ಯುಎಸ್‌ ಓಪನ್‌ ಒಂದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.

Story first published: Saturday, July 12, 2025, 23:57 [IST]
Other articles published on Jul 12, 2025
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+