ಯುಎಸ್ ಓಪನ್ ಫೈನಲ್‌ನಲ್ಲಿ ಒಸಾಕಾ-ಅಜರೆಂಕಾ ಮುಖಾಮುಖಿ

ನ್ಯೂಯಾರ್ಕ್: ಎರಡು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದಿರುವ ಜಪಾನ್‌ನ ನವೋಮಿ ಒಸಾಕಾ ಯುಎಸ್ ಓಪನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕಾದ ಜೆನಿಫರ್ ಬ್ರಾಡಿ ವಿರುದ್ಧ ಒಸಾಕಾ ಮೇಲುಗೈ ಸಾಧಿಸಿದರು.
ಗುರುವಾರ (ಸೆಪ್ಟೆಂಬರ್ 10) ನಡೆದ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜೆನಿಫರ್ ಅವರನ್ನು ಒಸಾಕಾ 7-6 (1), 3-6, 6-3ರ ಅಂತರದಿಂದ ಸೋಲಿಸಿದರು. ಎರಡು ವರ್ಷಗಳಿಗೆ ಹಿಂದೆ ನ್ಯೂಯಾರ್ಕ್‌ನಲ್ಲೇ ಒಸಾಕಾ ಎರಡು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು.
ಮುಂದಿನ ಸುತ್ತಿನಲ್ಲಿ ಒಸಾಕಾ ಅವರು ವಿಕ್ಟೋರಿಯಾ ಅಜರೆಂಕಾ ಸವಾಲು ಸ್ವೀಕರಿಸಲಿದ್ದಾರೆ. ಶುಕ್ರವಾರದ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ನಂ.1 ಆಟಗಾರ್ತಿ, ಬಲಾರಸ್‌ನ ಅಜರೆಂಕಾ ಅವರು ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಅವರನ್ನು ಸೋಲಿಸಿದರು.
ಸರೆನಾಗೆ 1-6, 6-3, 6-3ರ ಸೋಲುಣಿಸಿರುವ ಅಜರೆಂಕಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications