ಏಷ್ಯನ್ ಗೇಮ್ಸ್ ಗೆ ಸಾನಿಯಾ, ಪೇಸ್, ಬೋಪಣ್ಣ ಇಲ್ಲ
ಬೆಂಗಳೂರು, ಸೆ.11: ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಈ ಬಾರಿಯ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಟಾಪ್ ಟೆನಿಸ್ ತಾರೆಯರು ಸ್ಪರ್ಧಿಸುತ್ತಿಲ್ಲ. ಲಿಯಾಂಡರ್ ಪೇಸ್, ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಅವರಿಗೆ ಏಷ್ಯನ್ ಗೇಮ್ಸ್ ತಪ್ಪಿಸಿಕೊಳ್ಳಲು ಎಐಟಿಎ ಹಾಗೂ ಡಬ್ಲ್ಯೂಟಿಎ ಅನುಮತಿ ನೀಡಿದೆ.
ಟಾಪ್ ಆಟಗಾರರು ತಮ್ಮ ಶ್ರೇಯಾಂಕ ಕಾಯ್ದುಕೊಳ್ಳಲು ಅತ್ಯಂತ ಮಹತ್ವದ ಎಟಿಪಿ ಮತ್ತು ಡಬ್ಲ್ಯೂಟಿಎ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ ಎಂದು ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್(ಎಐಟಿಎ) ಎಟಿಪಿ ಮತ್ತು ಡಬ್ಲುಟಿಎ ಪ್ರಕಟಿಸಿದೆ.

ಕೆಲವು ದಿನಗಳ ಹಿಂದೆ ಖ್ಯಾತ ಸಿಂಗಲ್ಸ್ ಆಟಗಾರ ಸೋಮದೇವ್ ದೇವವರ್ಮನ್ ಎಟಿಪಿ ಮತ್ತು ಡಬ್ಲುಟಿಎ ಇವೆಂಟ್‌ಗಳಲ್ಲಿ ಭಾಗವಹಿಸುವ ಆಸಕ್ತಿ ವಹಿಸಿ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ನಿರ್ಧಾರ ಪ್ರಕಟಿಸಿದ್ದರು. ಇದೇ ಹಾದಿಯನ್ನು ಟಾಪ್ ಆಟಗಾರರು ಅನುಸರಿಸಿದ್ದಾರೆ. ಹೀಗಾಗಿ ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಗೆಲ್ಲುವ ಆಸೆಗೆ ತಣ್ಣಿರೆರಚಿದ್ದಂತಾಗಿದೆ.[ಏಷ್ಯನ್ ಗೇಮ್ಸ್ ನಿಂದ ಕಾಲ್ತೆಗೆದ ಜ್ವಾಲಾ ಗುಟ್ಟಾ]
ಅಗ್ರ ಶ್ರೇಯಾಂಕದ ಆಟಗಾರ ಅನುಪಸ್ಥಿತಿಯಲ್ಲಿ ಏಷ್ಯನ್‌ಗೇಮ್ಸ್‌ನ ಪುರುಷರ ವಿಭಾಗದ ಟೆನಿಸ್ ಸ್ಪರ್ಧೆಯಲ್ಲಿ ಯೂಕಿ ಬಾಂಬ್ರಿ, ಸನಮ್ ಸಿಂಗ್, ಸಾಕೇತ್ ಮೈನೇನಿ ಮತ್ತು ಡಿವಿಜಿ ಶರಣ್ ಸ್ಪರ್ಧಿಸಲಿದ್ದಾರೆ. ಸೆ.19ರಿಂದ ಅ. 4ರ ತನಕ ದಕ್ಷಿಣ ಕೊರಿಯಾದಲ್ಲಿನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಸಾನಿಯಾ ಮಿರ್ಜಾ ಅನುಪಸ್ಥಿತಿಯಲ್ಲಿ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಭಾರತದ ಪರ ಪದಕ ಗೆಲ್ಲುವ ಆಸೆ ಹುಟ್ಟಿಸಿದ್ದಾರೆ.[ಸತತ 7ನೇ ಚಿನ್ನದ ಬೇಟೆಯಲ್ಲಿ ಕಬಡ್ಡಿ ಕಲಿಗಳು]
ಬುಧವಾರದಂದು ಖ್ಯಾತ ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾರತದಿಂದ ಈ ಬಾರಿ 679 ಕ್ರೀಡಾ ಪ್ರತಿನಿಧಿಗಳು ತೆರಳಲಿದ್ದು ಈ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. (ಐಎಎನ್ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications