For Quick Alerts
ALLOW NOTIFICATIONS  
For Daily Alerts

30ನೇ ಗ್ರ್ಯಾನ್‌ಸ್ಲ್ಯಾಮ್‌ ಫೈನಲ್‌ಗೆ ಪ್ರವೇಶಿಸಿದ ನೊವಾಕ್ ಜೊಕೋವಿಕ್

Novak Djokovic reached into seventh Wimbledon final, 30th at Grand Slams

ಲಂಡನ್: ಸರ್ಬಿಯಾ ಬಲಿಷ್ಠ ನೊವಾಕ್ ಜೊಕೋವಿಕ್ ತನ್ನ ವೃತ್ತಿ ಜೀವನದ 30ನೇ ಗ್ರ್ಯಾನ್‌ಸ್ಲ್ಯಾಮ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶುಕ್ರವಾರ (ಜುಲೈ 9) ನಡೆದ ವಿಂಬಲ್ಡನ್ ಸೆಮಿಫೈನಲ್‌ ಪಂದ್ಯದಲ್ಲಿ ಕೆನಡಾದ ಡೆನಿಸ್ ಶಪೋವೊಲೊವ್ ಸೋಲಿಸಿರುವ ಜೊಕೋವಿಕ್ ಈ ವಿಶೇಷ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ಅವರು ಡೆನಿಸ್ ಶಪೋವೊಲೊವ್ ವಿರುದ್ಧ 7-6 (7/3), 7-5, 7-5ರ ಜಯ ಗಳಿಸಿದ್ದಾರೆ. ವಿಶ್ವ ನಂ. 1 ಜೊಕೋವಿಕ್‌ಗೆ ಇದು 7ನೇ ವಿಂಬಲ್ಡನ್ ಫೈನಲ್‌ ಪಂದ್ಯ. ವಿಂಬಲ್ಡನ್‌ನಲ್ಲಿ ಜೊಕೋವಿಕ್ ಒಟ್ಟು ಐದು ಬಾರಿ ಚಾಂಪಿಯನ್ ಎನಿಸಿದ್ದಾರೆ.

ಫೈನಲ್‌ನಲ್ಲಿ ಜೊಕೋವಿಕ್ ಗೆದ್ದರೆ 6ನೇ ವಿಂಬಲ್ಡನ್‌, 20ನೇ ಗ್ರ್ಯಾನ್‌ಸ್ಲ್ಯಾಮ್‌ ವಿಜಯದ ದಾಖಲೆ ನಿರ್ಮಿಸಲಿದ್ದಾರೆ. 20 ಗ್ರ್ಯಾನ್‌ಸ್ಲ್ಯಾಮ್‌ ಗೆದ್ದರೆ ಈ ದಾಖಲೆ ಪಟ್ಟಿಯಲ್ಲಿರುವ ದಂತಕತೆಗಳಾದ ರೋಜರ್ ಫೆಡರರ್, ರಾಫೆಲ್ ನಡಾಲ್ ಸಾಲಿಗೆ ಜೊಕೋವಿಕ್ ಕೂಡ ಸೇರಿಕೊಳ್ಳಲಿದ್ದಾರೆ.

ಭಾನುವಾರ ನಡೆಯುವ ಫೈನಲ್‌ನಲ್ಲಿ ಜೊಕೋವಿಕ್ ಅವರು ಮ್ಯಾಟಿಯೊ ಬೆರೆಟ್ಟಿನಿ ಸವಾಲು ಸ್ವೀಕರಿಸಲಿದ್ದಾರೆ.

Story first published: Saturday, July 10, 2021, 10:33 [IST]
Other articles published on Jul 10, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+