For Quick Alerts
ALLOW NOTIFICATIONS  
For Daily Alerts

ಮತ್ತೆ ರದ್ದಾಯ್ತು ನೊವಾಕ್ ಜೊಕೊವಿಕ್ ವಿಸಾ: ಆಸ್ಟ್ರೇಲಿಯಾ ತೊರೆಯುವುದು ಅನಿವಾರ್ಯ?

Novak Djokovics visa cancelled again; World No 1 tennis player may be forced to leave Australia

ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ವಿಸಾವನ್ನು ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ರದ್ದುಗೊಳಿಸಿದೆ. ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿರುವ ಆಸ್ಟ್ರೇಲಿಯಾ ಲಸಿಕೆಯನ್ನು ಪಡೆಯದ ಜೊಕೊವಿಕ್ ಸಮುದಾಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂಬ ಕಾರಣವನ್ನು ನೀಡಿ ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿಗೆ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‌ ಟೂರ್ನಿಯಲ್ಲಿ ಭಾಗವಹಿಸದೆಯೇ ಜೊಕೊವಿಕ್ ಆಸ್ಟ್ರೇಲಿಯಾವನ್ನು ಬಲವಂತವಾಗಿ ತೊರೆಯುವ ಅನಿವಾರ್ಯತೆ ಉಂಟಾಗುವ ಸಾಧ್ಯತೆಯಿದೆ.

ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ತಪ್ಪು ಮಾಹಿತಿ ನೀಡಿ ಆಸ್ಟ್ರೇಲಿಯಾಗೆ ಆಗಮಿಸಿದ್ದ ನೊವಾಕ್ ಜೊಕೊಇಕ್ ಅವರ ವಿಸಾವನ್ನು ಆಸ್ಟ್ರೇಲಿಯಾ ಸರ್ಜಾರ ಈ ಮೊದಲು ಒಮ್ಮೆ ರದ್ದು ಮಾಡಿತ್ತು. ಆದರೆ ಈ ಸಂದರ್ಭದಲ್ಲಿ ಕೋರ್ಟ್ ಮೊರೆ ಹೋದ ಜೊಕೊವಿಕ್ ಪರವಾಗಿ ತೀರ್ಪು ಬಂದಿತ್ತು. ಇದೀಗ ಆಸ್ಟ್ರೇಲಿಯಾದ ಇಮಿಗ್ರೆಶನ್ ಮಿನಿಸ್ಟರ್ ಸಾರ್ವಜನಿಕ ಹಿತಾಸಕ್ತಿಯನ್ನು ಮುಂದಿಟ್ಟು ತಮಗಿರುವ ಅಧಿಕಾರವನ್ನು ಬಳಸಿ ವಿಸಾವನ್ನು ರದ್ದುಗೊಳಿಸಿದ್ದಾರೆ. ಹೀಗಾಗಿ ಈ ಬಾರಿ ಬೊನಾಕ್ ಜೊಕೊವಿಕ್ ಅವರ ವಿಶ್ವ ದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸು ಬಹುತೇಕ ಭಗ್ನವಾದಂತಾಗಿದೆ.

ಜನವರಿ 17ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದರು ಜೊಕೊವಿಕ್. ಆದ್ರೆ ಆಸ್ಟ್ರೇಲಿಯಾಗೆ ಕಾಲಿಡುತ್ತಿದ್ದಂತೆ ಶಾಕ್ ಕಾದಿತ್ತು. ಕೋವಿಡ್-19 ಲಸಿಕೆಯನ್ನ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧವಿದ್ದು, ಸಂಪೂರ್ಣ ಲಸಿಕೆ ಪಡೆಯ ನೊವಾಕ್ ಜೊಕೊವಿಕ್‌ಗೆ ನಿರ್ಬಂಧ ಹೇರಲಾಗಿತ್ತು. ಸ್ವತಃ ಪ್ರಧಾನಿಯೇ ಘೋಷಿಸಿದಂತೆ ವೀಸಾ ರದ್ದು ಮಾಡುವ ತೀರ್ಮಾನವನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿತ್ತು.

ಆಸ್ಟ್ರೇಲಿಯಾ ಸರ್ಕಾರದ ವಿಸಾ ರದ್ದತಿಯ ಆದೇಶವನ್ನು ಪ್ರಶ್ನಿಸಿ ಜೊಕೊವಿಕ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಆಸ್ಟ್ರೇಲಿಯಾ ಸರ್ಕಾರ ಜೊಕೊವಿಕ್ ವಿಸಾವನ್ನು ರದ್ದುಗೊಳಿಸಿದ್ದು 'ಅಸಮಂಜಸ' ಎಂದಿದ್ದು ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸಿತ್ತು.ಕೋವಿಡ್ -19 ಲಸಿಕೆಗೆ ವೈದ್ಯಕೀಯ ವಿನಾಯಿತಿಗಾಗಿ ಪುರಾವೆಗಳ ಹೊಂದಿರದ ಜೊಕೊವಿಕ್ ಮೆಲ್ಬೋರ್ನ್‌ನಲ್ಲಿರುವ ವಲಸೆ ಬಂಧನ ಸೌಲಭ್ಯದಲ್ಲಿ ಉಳಿದುಕೊಂಡಿದ್ದರು. ಕಳೆದ ಸೋಮವಾರ ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ಆಂಥೋನಿ ಕೆಲ್ಲಿ ಜೊಕೊವಿಕ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ. ಆದರೆ ಕೋರ್ಟ್ ತೀರ್ಪಿನ ಬಳಿಕ ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ವಿಸಾವನ್ನು ರದ್ದುಗೊಳಿಸಿ ಜೊಕೊವಿಕ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಜೊಕೊವಿಕ್ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟವಾಗಿದ್ದರೂ ಕಳೆದ ತಿಂಗಳಷ್ಟೇ ಕೊರೊನಾವೈರಸ್‌ಗೆ ತುತ್ತಾಗಿದ್ದರು ಎಂಬ ದಾಖಲೆಯನ್ನು ಜೊಕೊವಿಕ್ ಹೊಂದಿದ್ದರು. ಈ ಕಾರಣದಿಂದಾಗಿ ಲಸಿಕೆಯ ಅಗತ್ಯವಿಲ್ಲ ಎಂದು ಕೋರ್ಟ್‌ನಲ್ಲಿ ಜೊಕೊವಿಕ್ ವಾದಿಸಿದ್ದರು. ಟೆನಿಸ್‌ನಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸರ್ಬಿಯಾ ಮೂಲದ ನೊವಾಕ್ ಜೊಕೊವಿಕ್ 9 ಬಾರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಬಾರಿ ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿದ್ದಾರೆ.

Story first published: Friday, January 14, 2022, 15:48 [IST]
Other articles published on Jan 14, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+