For Quick Alerts
ALLOW NOTIFICATIONS  
For Daily Alerts

ಸರ್ಬಿಯಾಗೆ ಬಂದಿಳಿದ ನೊವಾಕ್ ಜೊಕೊವಿಕ್: ಫ್ರೆಂಚ್ ಓಪನ್‌ನಲ್ಲಿ ಭಾಗಿಯಾಗುತ್ತಾರಾ ಟೆನಿಸ್ ತಾರೆ?

Novak Djokovic welcomed in Serbia after Australia visa cancel row French Open also doubt

ವಿಶ್ವದ ನಂಬರ್ 1 ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಕೊರೊನಾವೈರಸ್‌ಗೆ ಲಸಿಕೆ ಹಾಕಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದಿಂದ ವಾಪಾಸಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಸಿಉವ ಅವಕಾಶವನ್ನು ಜೊಕೊವಿಕ್ ಕಳೆದುಕೊಂಡಿದ್ದಾರೆ. ಹೀಗಾಗಿ ಸೋಮವಾರ ಆಸ್ಟ್ರೇಲಿಯಾದಿಂದ ದುಬೈಗೆ ತೆರಳಿದ್ದ ಜೊಕೊವಿಕ್ ಇದೀಗ ತವರಿಗೆ ವಾಪಾಸಾಗಿದ್ದಾರೆ. ಈ ಸಂದರ್ಭದಲ್ಲಿ ಜೊಕೊವಿಕ್‌ಗೆ ತವರಿನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

ಸರ್ಬಿಯಾದ ಬೆಲ್‌ಗ್ರೇಡ್ ಏರ್‌ಪೋರ್ಟ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ರಾಷ್ಟ್ರಧ್ವಜದೊಂದಿಗೆ ನೊವಾಕ್ ಜೊಕೊವಿಕ್‌ ಪರವಾಗಿ ಘೋಷಣೆಗಳನ್ನು ಹಾಕುತ್ತಾ ಸ್ವಾಗತಿಸಿದ್ದಾರೆ. "ನೀನು ನಮ್ಮ ಚಾಂಪಿಯನ್ ನೊವಾಕ್" ಎಂದು ಘೋಷಣೆ ಕೂಗಿ ಸ್ವಾಗತ ಕೋರಿದ್ದಾರೆ.

ಆಸ್ಟ್ರೇಲಿಯಾಗೆ ಬಂದಿಳಿದಿದ್ದ ನೊವಾಕ್ ಜೊಕೊವಿಕ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದ ಕಾರಣ ವಿಸಾ ರದ್ದುಗೊಳಿಸಲಾಗಿತ್ತು. ಹೀಗಾಗಿ ರದ್ದು ವಿಚಾರವಾಗಿ ಕಾನೂನು ಹೋರಾಟಕ್ಕೆ ನಡೆಸಿದ್ದ ಜೊಕೊವಿಕ್‌ಗೆ ಹಿನ್ನಡೆಯಾಗಿದ್ದು ಎರಡನೇ ಬಾರಿ ವಿಸಾ ರದ್ದಿಗೊಳಿಸಿದ ಆಸ್ಟ್ರೇಲಿಯಾ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿಯಿತು. ಹೀಗಾಗಿ ಆಸ್ಟ್ರೇಲಿಯಾ ತೊರೆದಿರುವ ಸರ್ಬಿಯಾ ಮೂಲದ ಆಟಗಾರ ನೊವಾಕ್ ಜೊಕೊವಿಕ್ 13 ಗಂಟೆಗಳ ವಿಮಾನ ಪ್ರಯಾಣದ ಬಳಿಕ ದುಬೈಗೆ ಬಂದು ಇಳಿದಿದ್ದಾರೆ. ಈ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸದೆಯೇ ನೊವಾಕ್ ತವರಿಗೆ ವಾಪಾಸಾಗಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ವಿಸಾ ರದ್ದುಗೊಳಿಸಿದ ಆದೇಶವನ್ನು ಫೆಡರಲ್ ಕೋರ್ಟ್ ಭಾನುವಾರ ಎತ್ತಿ ಹಿಡಿಯಿತು. ಹೀಗಾಗಿ ಸರ್ಬಿಯಾ ಮೂಲದ ಆಟಗಾರನಿಗೆ ಹಿನ್ನಡೆಯಾಗಿದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಜೊಕೊವಿಕ್ ಕಳೆದುಕೊಂಡಿದ್ದಾರೆ. ಕೋರ್ಟ್ ನೀಡಿದ ಈ ಆದೇಶದಿಂದ ಜೊಕೊವಿಕ್ ಆಸ್ಟ್ರೇಲಿಯಾವನ್ನು ತೊರೆಯುವುದು ಅನಿವಾರ್ಯವಾಗಿತ್ತು. ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ತಪ್ಪು ಮಾಹಿತಿ ನೀಡಿ ಆಸ್ಟ್ರೇಲಿಯಾಗೆ ಆಗಮಿಸಿದ್ದ ನೊವಾಕ್ ಜೊಕೊಇಕ್ ಅವರ ವಿಸಾವನ್ನು ಆಸ್ಟ್ರೇಲಿಯಾ ಸರ್ಕಾರ ಈ ಮೊದಲು ಒಮ್ಮೆ ರದ್ದು ಮಾಡಿತ್ತು. ಆದರೆ ಈ ಸಂದರ್ಭದಲ್ಲಿ ಕೋರ್ಟ್ ಮೊರೆ ಹೋದ ಜೊಕೊವಿಕ್ ಪರವಾಗಿ ತೀರ್ಪು ನೀಡಿತ್ತು.

ಅದಾದ ಬಳಿಕ ಆಸ್ಟ್ರೇಲಿಯಾದ ಇಮಿಗ್ರೆಶನ್ ಮಿನಿಸ್ಟರ್ ಸಾರ್ವಜನಿಕ ಹಿತಾಸಕ್ತಿಯನ್ನು ಮುಂದಿಟ್ಟು ತಮಗಿರುವ ಅಧಿಕಾರವನ್ನು ಬಳಸಿ ವಿಸಾವನ್ನು ರದ್ದುಗೊಳಿಸುವ ರೀರ್ಮಾನ ಮಾಡಿದ್ದರು. ಹೀಗಾಗಿ ಮತ್ತೊಂದು ಬಾರಿ ನಿವಾಕ್ ಜೊಕೊವಿಕ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ಬಾರಿ ನೊವಾಕ್ ಜೊಕೊವಿಕ್‌ಗೆ ಎರಡನೇ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಹೀಗಾಗಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ವಿಶ್ವ ದಾಖಲೆಯ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸು ಭಗ್ನವಾದಂತಾಗಿದೆ.

ಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳ ಆಧಾರದಲ್ಲಿ ಜೊಕೊವಿಕ್ ಲಸಿಕೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟವಾಗಿದ್ದರೂ ಕಳೆದ ತಿಂಗಳಷ್ಟೇ ಕೊರೊನಾವೈರಸ್‌ಗೆ ತುತ್ತಾಗಿದ್ದರು ಎಂಬ ದಾಖಲೆಯನ್ನು ಜೊಕೊವಿಕ್ ಹೊಂದಿದ್ದರು. ಈ ಕಾರಣದಿಂದಾಗಿ ಲಸಿಕೆಯ ಅಗತ್ಯವಿಲ್ಲ ಎಂದು ಕೋರ್ಟ್‌ನಲ್ಲಿ ಜೊಕೊವಿಕ್ ವಾದಿಸಿದ್ದರು. ಟೆನಿಸ್‌ನಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸರ್ಬಿಯಾ ಮೂಲದ ನೊವಾಕ್ ಜೊಕೊವಿಕ್ 9 ಬಾರಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಅತಿ ಹೆಚ್ಚು ಬಾರಿ ಈ ಪ್ರತಿಷ್ಠಿತ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ದಾಖಲೆ ಹೊಂದಿದ್ದಾರೆ.

ಇದೀಗ ಫ್ರಾನ್ಸ್ ಸರ್ಕಾರ ಕೊರೊನಾ ಲಸಿಕೆ ಕಡ್ಡಾಯ ಕಾನೂನನ್ನು ಜಾರಿಗೊಳಿಸಿದ್ದು ಸರ್ಬಿಯಾದ ತಾರೆ ಪ್ರೆಂಚ್ ಓಪನ್‌ನಲ್ಲಿ ಭಾಗವಹಿಸುವ ಬಗ್ಗೆಯೂ ಸ್ಪಷ್ಟತೆಯಿಲ್ಲ. ಪ್ರೆಂಚ್ ಓಪನ್‌ನಲ್ಲಿ ನೊವಾಕ್ ಜೊಕೊವಿಕ್ ಭಾಗವಹಿಸಬೇಕಿದ್ದರೆ ಕಡ್ಡಾಯವಾಗಿ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳಲೇ ಬೇಕಿದೆ. ಹೀಗಾಗಿ ನಂಬರ್ 1 ಟೆನ್ನಿಸ್ ಆಟಗಾರನ ಮುಂದಿನ ನಡೆ ಕುತೂಹಲಕಾರಿಯಾಗಿದೆ.

Story first published: Tuesday, January 18, 2022, 12:21 [IST]
Other articles published on Jan 18, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+