Paris Olympics 2024: ಚಿನ್ನ ಗೆದ್ದು 16 ವರ್ಷಗಳ ಕನಸು ನನಸಾಗಿಸಿಕೊಂಡ ಟೆನಿಸ್ ದಿಗ್ಗಜ!
ಆಗಸ್ಟ್ 4 ಭಾನುವಾರ, ಪ್ಯಾರಿಸ್ ಒಲಿಂಪಿಕ್ಸ್ 2024ರ ಪುರುಷರ ಸಿಂಗಲ್ಸ್ ಟೆನಿಸ್ ಸ್ಪರ್ಧೆಯಲ್ಲಿ ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಕಠಿಣ ಸ್ಪರ್ಧಿಯಾದ ಕಾರ್ಲೊಸ್ ಅಲ್ಕರಾಜ್ ಅವರನ್ನು 7-6, 7-6 ರಿಂದ ಸೋಲಿಸುವ ಮೂಲಕ ಜೊಕೊವಿಕ್ 16 ವರ್ಷಗಳ ಒಲಿಂಪಿಕ್ ಇತಿಹಾಸದಲ್ಲಿ ಚೊಚ್ಚಲ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ.

ಈ ಗೆಲುವಿನ ಮೂಲಕ ಎರಡು ಬಾರಿ ವಿಂಬಲ್ಡನ್ ಸೋಲಿನ ಸೇಡನ್ನು ಜೊಕೊವಿಕ್ ತೀರಿಸಿಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಹಾಲಿ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಅಲ್ಕರಾಜ್ ವಿರುದ್ಧ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಜೊಕೊವಿಕ್ ಚಿನ್ನದ ಪದಕಕ್ಕಾಗಿ ಪ್ರಬಲ ಪೈಪೋಟಿ ನಡೆಸಿದರು. ಜಿದ್ದಾಜಿದ್ದಿನ ಕಾದಾಟದಲ್ಲಿ ಅಲ್ಕರಾಜ್ ಎದುರು ನೊವಾಕ್ ತಮ್ಮ ಅನುಭವವನ್ನು ಪ್ರದರ್ಶಿಸುವ ಮೂಲಕ ಗೆಲುವಿನ ನಗೆ ಬೀರಿದರು.
ಎರಡು ಸೆಟ್‌ಗಳಲ್ಲಿ ಇಬ್ಬರೂ ಒಂದೂ ಸರ್ವ್ ಬಿಟ್ಟುಕೊಡಲಿಲ್ಲ. ಪರಿಣಾಮ ಎರಡೂ ಸೆಟ್‌ಗಳು ಟ್ರೈಬ್ರೇಕರ್‌ನಿಂದ ಫಲಿತಾಂಶ ಕಾಣುವಂತಾಯಿತು. ಈ ಸಂದರ್ಭದಲ್ಲಿ ಮುಗ್ಗರಿಸಿದ ಅಲ್ಕರಾಜ್ ಸೋಲು ಕಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications