ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಪಡೆಲ್ ಆಟ ನೋಡಿ

By Mahesh

ಬೆಂಗಳೂರು, ಮಾರ್ಚ್ 24: ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಶಿಷ್ಟ ಕ್ರೀಡೆಯೊಂದರ ಆಯೋಜನೆಯಾಗಿದೆ. ಪಡೆಲ್- ಟೆನ್ನಿಸ್ ಹಾಗೂ ಸ್ಕ್ವಾಷ್‌ನ ಸಮ್ಮಿಶ್ರಣ ಆಗಿರುವ ಈ ಕ್ರೀಡೆಯನ್ನು 5 ಖಂಡಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಜಗತ್ತಿನಾದ್ಯಂತ ಆಡುತ್ತಿದ್ದಾರೆ. ಈ ಕ್ರೀಡೆಯನ್ನು ಭಾರತದಲ್ಲಿ ಇನ್‌ಪಡೆಲ್ ಎಂದು ಪರಿಚಯಿಸಲಾಗುತ್ತಿದೆ. ನಮ್ಮ ಬೆಂಗಳೂರು ರಾಷ್ಟ್ರದಲ್ಲಿ ಪಡೆಲ್ ಸೌಲಭ್ಯ ಪಡೆದ ಮೊದಲ ನಗರವಾಗಿದೆ.

ಪಡೆಲ್ ಭಾರತದಲ್ಲಿ ಬೆಳೆಯುವುದಕ್ಕೆ ಅಗತ್ಯವಿರುವ ಪ್ರೋತ್ಸಾಹ ನೀಡುತ್ತದೆ. ಇದರಲ್ಲಿ ವಿನ್ಯಾಸ, ನಿರ್ಮಾಣ ಹಾಗೂ ಪಡೆಲ್ ಮೈದಾನ ಅಳವಡಿಕೆ, ಮೈದಾನ ನಿರ್ವಹಣೆ ಸೆರಿದೆ. ಜತೆಗೆ ಪಡೆಲ್ ಉತ್ಸಾಹಿಗಳನ್ನು ಮತ್ತು ಸ್ಪರ್ಧೆ ಹಾಗೂ ಟೂರ್ನಿ ನಡೆಸುವುದಕ್ಕೆ ಅಗತ್ಯವಿರುವ ಅರ್ಹ ತರಬೇತುದಾರರನ್ನೂ ಒದಗಿಸುತ್ತದೆ.

ಪ್ರಮುಖವಾಗಿ, ನೂತನವಾಗಿ ರಚಿಸಿರುವ ಇಂಡಿಯನ್ ಪಡೆಲ್ ಫೆಡರೇಷನ್ ಮೂಲಕ, ಇನ್‌ಪಡೆಲ್ ಮುಂದಿನ ಕೆಲ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚು ಜನರನ್ನು ಆಕರ್ಷಿಸುವ ಹಾಗೂ ಅಂತಾರಾಷ್ಟ್ರೀಯ ಪಡೆಲ್ ಟೂರ್ನಿ ಆಡುವ ಭಾರತೀಯ ತಂಡವನ್ನು ರಚಿಸುವ ಗುರಿಯನ್ನು ಅದು ಹೊಂದಿದೆ.

ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಲು ಕಾರಣಕರ್ತರಾಗಿರುವ ರೊನ್ನಿ ಸೆಹಗಲ್ ಹಾಗೂ ಭವಿಶ್ ಬಚು. ರೊನ್ನಿ ಮಾಜಿ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಆಟಗಾರ, ಈಗ ಕ್ರೀಡಾ ಎಂಟರ್‌ಪ್ರನರ್ ಆಗಿದ್ದಾರೆ ಹಾಗೂ ಬುಲ್‌ಡಾಗ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈ.ಲಿ.ನ ಸಿಇಒ ಪಡೆಲ್ ಭಾರತಕ್ಕೆ ಪರಿಚಯಿಸುತ್ತಿರುವ ಇವರು ಇನ್‌ಪಡೆಲ್‌ನ ಸಂಸ್ಥಾಪಕರೂ ಸಹ.

ಭವಿಶ್ ಬಚು, ಭಾರತೀಯ ಮೂಲದ ಪೋರ್ಚುಗೀಸ್

ಭವಿಶ್ ಬಚು, ಭಾರತೀಯ ಮೂಲದ ಪೋರ್ಚುಗೀಸ್

ಭಾರತೀಯ ಮೂಲದ ಪೋರ್ಚುಗೀಸ್ ಪ್ರಜೆ, ಪೋರ್ಚುಗಲ್ ಮತ್ತು ಮೊಜಾಂಬಿಕ್‌ನಲ್ಲಿ ವ್ಯಾಪಾರ, ವಹಿವಾಟು ಹೊಂದಿರುವ ಇವರು ಇನ್‌ಪಡೆಲ್ ಸಹ ಸಂಸ್ಥಾಪಕರು ಮತ್ತು ಸಿಇಒ. ಆಂಡ್ರೆಸ್ ಸ್ಟಮಿಲೆ ಕೆನಡಾದವರು. ಮಾಜಿ ಅಂತರಾಷ್‌ರೀಯ ಆಟಗಾರ ಮತ್ತು ಜೂನಿಯರ್ ಚಾಂಪಿಯನ್, ಪ್ರಸ್ತುತ ಅಂತರಾಷ್ಟ್ರೀಯ ಪಡೆಲ್ ತರಬೇತುದಾರ. ಭಾರತದಲ್ಲಿ ಇನ್‌ಫೆಡಲ್‌ನ ಪ್ರಧಾನ ತರಬೇತುದಾರರಾಗಿ ಕ್ರೀಡೆ ಬೆಳೆಸಲಿದ್ದಾರೆ.

ಪಡೆಲ್- ಐರೋಪ್ಯದಲ್ಲಿ ಜನಪ್ರಿಯತೆ

ಪಡೆಲ್- ಐರೋಪ್ಯದಲ್ಲಿ ಜನಪ್ರಿಯತೆ

ಪಡೆಲ್ ಕ್ರೀಡೆಯನ್ನು ಭಾರತದಲ್ಲಿ ಪರಿಚಯಿಸುತ್ತಿರುವ ಭವಿಶ್ ಬಚುಗೆ ಕನಸು ನನಸಾಗಿದೆ. ಐರೋಪ್ಯ ರಾಷ್ಟ್ರಗಳಲ್ಲ ಇದು ಸಾಕಷ್ಟು ಜನಪ್ರಿಯತೆ ಹೊಂದಿದೆ. ಭಾರತದಲ್ಲಿ ಸಹ ಇದು ಜನರನ್ನು ಸೆಳೆಯುತ್ತದೆ ಎಂಬ ಆಶಯ ಹೊಂದಿದ್ದಾರೆ. ಭಾರತದಲ್ಲಿ ಫಿಟ್ನೆಸ್ ಕುರಿತಂತೆ ಅರಿವು ಮೂಡಿದೆ. ಪಡೆಲ್ ಫಿಟ್ನೆಸ್ ಕ್ರೀಡೆ ಆಗಿರುವುರಿಂದ ಎಲ್ಲ ವಯಸ್ಸಿನವರನ್ನು ಸೆಳೆಯುತ್ತದೆ. ರಾಕೆಟ್ ಕ್ರೀಡೆಯ ಆಸಕ್ತರನ್ನು ಆಕರ್ಷಿಸುತ್ತದೆ.

ಬೆಂಗಳೂರಿನ ಮೂರು ಕಡೆ

ಬೆಂಗಳೂರಿನ ಮೂರು ಕಡೆ

ಪ್ರಾರಂಭಿಕವಾಗಿ ಪಡೆಲ್ ಕ್ರೀಡೆಯನ್ನು ಬೆಂಗಳೂರಿನ ಮೂರು ಸ್ಥಳಗಳಲ್ಲಿ-ಪ್ಲೇ ಅರೆನ್, ಸರ್ಜಾಪುರ ರಸ್ತೆ, ಬುಲ್‌ಡಾಗ್ ಸ್ಪೋರ್ಟ್ಸ್ ಅಂಡ್ ರೆಕ್ರಿಯೇಷನ್ ಸೆಂಟರ್, ಹೆಣ್ಣೂರು ರಸ್ತೆ ಹಾಗೂ ಬುಲ್‌ಹೌಸ್ ಟೆನ್ನಿಸ್ ಅಕಾಡೆಮಿ, ಕನಕಪುರ ರಸ್ತೆ ಪರಿಚಯಿಸುತ್ತಿದೆ. 24 ತಿಂಗಳೊಳಗೆ ಬೆಂಗಳೂರಿನ ಇತರ ಕಡೆ ಇನ್ನೂ 10 ಪಡೆಲ್ ಮೈದಾನ ಆರಂಭವಾಗಲಿದೆ. ಬೆಂಗಳೂರಿನ ಅನೇಕ ಕ್ಲಬ್‌ಗಳು ತಮ್ಮ ಆವರಣದಲ್ಲಿ ಪಡೆಲ್ ಮೈದಾನ ಹೊಂದಿರುವ ಆಸಕ್ತಿ ಹೊಂದಿದೆ ಎನ್ನುತ್ತಾರೆ ರೊನ್ನಿ ಸೆಹಗಲ್.

ಎಲ್ಲಿ ಯಾವಾಗ? ಪಡೆಲ್ ಆಟ

ಎಲ್ಲಿ ಯಾವಾಗ? ಪಡೆಲ್ ಆಟ

ನಮ್ಮ ಬೆಂಗಳೂರಲ್ಲಿ ಮಾರ್ಚ್ 25, 2017(ಶನಿವಾರ) ನಡೆಯಲಿರುವ ರಾಷ್ಟ್ರದ ಮೊದಲ ಪೆಡಲ್ ಟೂರ್ನಿಯ ಆತಿಥ್ಯ ವಹಿಸಿದೆ. 16 ತಂಡಗಳು ಸೆಣಸುತ್ತಿವೆ. ಟೂರ್ನಿ ಪ್ಲೇ ಅರೆನ, ಸರ್ಜಾಪುರ ರಸ್ತೆಯಲ್ಲಿ ನಡೆಯಲಿದೆ.

ಮುಂದಿನ ಐದು ವರ್ಷದಲ್ಲಿ ಕನಿಷ್ಠ ಒಂದು ಲಕ್ಷ ಆಟಗಾರರನ್ನು ಪಡೆಲ್ ಹೊಂದಿರಬೇಕು ಎಂಬುದು ಅದರ ಗುರಿ. ಇದರಲ್ಲಿ ಕ್ರೀಡೆಯನ್ನು ಗಂಭೀರವಾಗಿ ಸ್ವೀಕರಿಸಿದವರು ಹಾಗೂ ಹವ್ಯಾಸಿ ಸೇರಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, March 24, 2017, 14:00 [IST]
Other articles published on Mar 24, 2017
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X