Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್: ಸಾನಿಯಾ ಮಿರ್ಜಾ ಮಣಿಸಿದ ರೋಹನ್ ಬೋಪಣ್ಣ

ಪ್ಯಾರಿಸ್, ಜೂನ್ 5: ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪಂದ್ಯವೊಂದರಲ್ಲಿ ಭಾರತದ ರೋಹನ್ ಬೋಪಣ್ಣ ಜೋಡಿ, ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಜೋಡಿಯನ್ನು ಮಣಿಸಿದೆ.

ಸೋಮವಾರ ನಡೆದ ಈ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಕೆನಡಾದ ಗ್ಯಾಬ್ರಿಯೇಲಾ ಡಬ್ರೊಸ್ಕಿ ಜೋಡಿ, ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೋಡಿಗ್ ಜೋಡಿ ವಿರುದ್ಧ 6-3, 6-4 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಗೆ ಕಾಲಿಟ್ಟಿತು.

Rohan Bopanna, Sania Mirza

ಇದೇ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ನಿರ್ಗಮಿಸಿದ್ದ ಸಾನಿಯಾ ಮಿರ್ಜಾ, ಇದೀಗ ಮಿಶ್ರ ಡಬಲ್ಸ್ ನಲ್ಲೂ ತಮ್ಮ ಸವಾಲು ಅಂತ್ಯಗೊಳಿಸಿದ್ದಾರೆ.

8ರ ಘಟ್ಟದಲ್ಲಿ ಮರ್ರೆ, ನಿಶಿಕೋರಿ ಸೆಣಸು
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡು ಪ್ರತ್ಯೇಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ ನ ಕಿಯ್ ನಿಶಿಕೋರಿ ಹಾಗೂ ಬ್ರಿಟನ್ ನ ಆ್ಯಂಡಿ ಮರ್ರೆ ಜಯ ಸಾಧಿಸಿದ್ದು, ಈ ಇಬ್ಬರೂ ಜೂನ್ 6ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

ಸೋಮವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ನಿಶಿಕೋರಿ ಅವರು, ಸ್ಪೇನ್ ನ ಫರ್ನಾಂಡೊ ವಾರ್ಡೊಸ್ಕೊ ವಿರುದ್ಧ 0-6, 6-4, 6-4, 6-0 ಸೆಟ್ ಗಳ ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಗೆ ಕಾಲಿಟ್ಟರು.

ಮತ್ತೊಂದು ಪಂದ್ಯದಲ್ಲಿ ಆ್ಯಂಡಿ ಮರೆ ಅವರು, ಕೆರೆನ್ ಕಚನೊವ್ ವಿರುದ್ಧ 6-3, 6-4, 6-4 ಸೆಟ್ ಗಳ ಅಂತರದಲ್ಲಿ ಜಯಿಸಿ 8ರ ಘಟ್ಟಕ್ಕೆ ಕಾಲಿಟ್ಟರು.

ಘಟಾನುಘಟಿಗಳ ಮುಖಾಮುಖಿ

ಮಂಗಳವಾರವೇ ನಡೆಯಲಿರುವ ಇತರ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ, ಸ್ಪೇನ್ ನ ರಾಫೆಲ್ ನಡಾಲ್ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಂಥ ಘಟಾನುಘಟಿಗಳು ಸೆಣಸಲಿದ್ದಾರೆ.

ಒಂದು ಪಂದ್ಯದಲ್ಲಿ ಕ್ರೊವೇಶಿಯಾದ ಮರಿನ್ ಸಿಲಿಕ್ - ಸ್ವಿಜರ್ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕಾ ಪರಸ್ಪರ ಮುಖಾಮುಖಿಯಾದರೆ, ಮತ್ತೊಂದು ಪಂದ್ಯದಲ್ಲಿ ಸ್ಪೇನ್ ನ ರಾಫೆಲ್ ನಡಾಲ್ - ಸ್ಪೇನ್ ನ ಫಾಬ್ಲೊ ಕರೊನೊ ಬಸ್ಟಾ, ಮಗದೊಂದು ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್- ಆಸ್ಟ್ರಿಯಾದ ಡೊಮಿನಿಕ್ ಥೆಯೆಮ್ ಸಡ್ಡು ಹೊಡೆಯಲಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+