Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಸ್ ಓಪನ್: ಬೋಪಣ್ಣ-ಶಪೋವೊಲೊವ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

Rohan Bopanna-Shapovalov enter quarterfinals of US Open

ನ್ಯೂಯಾರ್ಕ್: ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಕೆನಡಿಯನ್ ಜೊತೆಗಾರ ಡೆನಿಸ್ ಶಪೋವೊಲೊವೆಂಟರ್ ಯುಎಸ್ ಓಪನ್‌ನ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸುಮಿತ್ ನಗಾಲ್ ಮತ್ತು ದಿವಿಜ್‌ ಶರಣ್ ಟೂರ್ನಿಯಿಂದ ನಿರ್ಮಿಸಿದ ಬಳಿಕ ಉಳಿದಿರುವ ಒಬ್ಬನೇ ಭಾರತೀಯ ಆಟಗಾರ ಬೋಪಣ್ಣ.

ಭಾನುವಾರ (ಸೆಪ್ಟೆಂಬರ್ 6) ನಡೆದ ಯುಎಸ್ ಓಪನ್ ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ-ಶಪೋವೊಲೊವ್ ಜೋಡಿ 6ನೇ ಶ್ರೇಯಾಂಕದ ಕೆವಿನ್ ಕ್ರಾವಿಯೆಟ್ಜ್ ಮತ್ತು ಆಂಡ್ರಿಯಾಸ್ ಮೈಸ್ ಜೋಡಿಯನ್ನು ಮಣಿಸಿ ಮುನ್ನಡೆ ಗಿಟ್ಟಿಸಿಕೊಂಡಿದೆ.

ಶ್ರೇಯಾಂಕಿತರಲ್ಲದ ಇಂಡೋ-ಕೆನಡಾ ಜೋಡಿ ಎದುರಾಳಿಯನ್ನು 4-6, 6-4, 6-3ರ ಅಂತರದಿಂದ ಸೋಲಿಸಿತು. ಎರಡೂ ಜೋಡಿಯ ಮಧ್ಯೆ 47 ನಿಮಿಷಗಳ ಕಾಳಗ ನಡೆಯಿತು. ಮುಂದಿನ ಸುತ್ತಿನಲ್ಲಿ ಬೋಪಣ್ಣ-ಶಪೋವೊಲೊವ್ ಜೋಡಿ, ಡಚ್‌-ರೊಮೇನಿಯನ್ ಜೋಡಿಯಾದ ಜೀನ್ ಜುಲಿಯನ್ ರೋಜರ್ ಮತ್ತು ಹೋರಿಯಾ ಟೆಕಾವು ಅವರನ್ನು ಎದುರಿಸಲಿದೆ.

ಬೋಪಣ್ಣ-ಶಪೋವೊಲೊವ್ ಮತ್ತು ಜೀನ್ ಜುಲಿಯನ್ ರೋಜರ್-ಹೋರಿಯಾ ಟೆಕಾವು ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಸೋಮವಾರ (ಸೆಪ್ಟೆಂಬರ್ 7) ನಡೆಯಲಿದೆ.

Story first published: Monday, September 7, 2020, 10:04 [IST]
Other articles published on Sep 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+