Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆನಿಸ್ ತಾರೆ ಸಾನಿಯಾ ಹುಟ್ಟುಹಬ್ಬ ಸಂಭ್ರಮದಲ್ಲಿ ಸಿನಿತಾರೆಯರು

ಮುಂಬೈ, ನ.16: ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಈ ವರ್ಷ ಸಕತ್ ಯಶಸ್ಸು ತಂದುಕೊಟ್ಟಿದೆ. ಮಾರ್ಟಿನ್ ಹಿಂಗಿಸ್ ಜೊತೆಗೂಡಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡ ಸಾನಿಯಾ ಅವರು ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಸಾನಿಯಾ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ ತಾರೆಗಳ ದಂಡೇ ನೆರೆದಿತ್ತು.

ಸಲ್ಮಾನ್ ಖಾನ್ ಅಲ್ಲದೆ ಪರಿಣಿತಿ ಛೋಪ್ರಾ, ತಬು, ರಿತೇಶ್ ದೇಶ್ ಮುಖ್ ಹಾಗೂ ಅವರ ಪತ್ನಿ ಜೆನಿಲಿಯಾ ಡಿಸೋಜಾ ಅವರು ಮೊದಲಿಗೆ ಸಾನಿಯಾ ನಿವಾಸಕ್ಕೆ ಆಗಮಿಸಿ ಶುಭ ಕೋರಿದರು. [ಸಾನಿಯಾ-ಮಾರ್ಟಿನಾ ವಿಶ್ವದ ನಂ.1]

Sania Mirza's Birthday Bash

ಅಂದ ಹಾಗೆ, ಸಾನಿಯಾ ಮಿರ್ಜಾ ಬರ್ಥ್ ಡೇ ಪಾರ್ಟಿ ಆಯೋಜನೆ ಮಾಡಿದ್ದ ಬಾಲಿವುಡ್ ನೃತ್ಯ ಸಂಯೋಜಕಿ ಕಮ್ ನಿರ್ದೇಶಕಿ ಫರ್ಹಾಖಾನ್. ಫರ್ಹಾ ಹಾಗೂ ಸಾನಿಯಾ ಅವರ ಗೆಳೆತನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

ಶೀರೀಶ್ ಕುಂದರ್, ಟೆನಿಸ್ ತಾರೆ ಮಹೇಶ್ ಭೂಪತಿ, ನಟ ಸುಶಾಂತ್ ಸಿಂಗ್ ಅವರು ಕೂಡಾ ಫೋಟೊಗೆ ಪೋಸ್ ನೀಡಿದರು. ಸಾನಿಯಾ ಕೂಡಾ ಖುಷಿಯಿಂದ ಬರ್ಥ್ ಡೇ ಬಗ್ಗೆ ಟ್ವೀಟ್ ಮಾಡಿದರು.

ಪ್ರಸಕ್ತ ವರ್ಷದಲ್ಲಿ ಹಿಂಗಿಸ್ ಹಾಗೂ ಮಿರ್ಜಾ ಅವರು 10 ಫೈನಲ್ ಗಳನ್ನು ಪ್ರವೇಶಿಸಿ 9-1 ನಂತೆ ಯಶಸ್ಸು ಗಳಿಸಿದ್ದಾರೆ. ಸಾನಿಯಾ ಮಿರ್ಜಾ ಅವರ ಸಾಧನೆಯನ್ನು ಪರಿಗಣಿಸಿದ ಕ್ರೀಡಾ ಸಚಿವಾಲಯ ಅವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+