ಸಾನಿಯಾ ಮಿರ್ಜಾ ಜೀವನ ಚರಿತ್ರೆ ಸೆಲೆಬ್ರಿಟಿಗಳಿಂದ ಅನಾವರಣ
ಮುಂಬೈ, ಜುಲೈ 13: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ 'ಏಸ್ ಅಗೇನ್ಸ್ ಆಡ್ಸ್' ಜೀವನ ಚರಿತ್ರೆ ಪುಸ್ತಕವನ್ನು ಕಿಂಗ್ ಖಾನ್ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರು ಅನಾವರಣಗೊಳಿಸುತ್ತಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ ಬಿಡುಗಡೆಗೊಳಿಸಲಿದ್ದಾರೆ. 29 ವರ್ಷದ ಸಾನಿಯಾ ಹಾಗೂ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಈ ಪುಸ್ತಕವನ್ನು ಬರೆದಿದ್ದಾರೆ.
ಅಧಿಕೃತವಾಗಿ ಒಂದು ವಾರದ ಹಿಂದೆಯೇ ಈ ಪುಸ್ತಕ ಅನಾವರಣಗೊಂಡಿದೆ. ಆದರೆ, ಸೆಲೆಬ್ರಿಟಿಗಳಿಂದ ಪುಸ್ತಕವನ್ನು ಮತ್ತೊಮ್ಮೆ ಅನಾವರಣಗೊಳಿಸಿ ಹೆಚ್ಚಿನ ಪ್ರಚಾರವನ್ನು ನೀಡಲಾಗುತ್ತಿದೆ.

ಹೈದರಾಬಾದ್ನಲ್ಲಿ ಪುಟ್ಟ ಬಾಲಕಿಯಾಗಿದ್ದ ದಿನಗಳಿಂದ, ಯೂಸುಫ್ ಗಡ್ ದ ಕಾಲೇಜಿನ ವಿದ್ಯಾರ್ಥಿ ಜೀವನ ನಂತರ ವಿಶ್ವ ನಂ. 1 ಆಟಗಾರ್ತಿಯಾಗಿ ಬೆಳೆದಿದ್ದು ಎಲ್ಲವನ್ನು ಈ ಪುಸ್ತಕ ಹೊಂದಿದೆ. ಸಾನಿಯಾರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಹಲವು ವಿಶಿಷ್ಟ, ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕ ಹೊಂದಿದೆ. ಅಪ್ಪ-ಮಗಳು ಸೇರಿ ಸುಮಾರು 5 ವರ್ಷಗಳ ನಂತರ ಪುಸ್ತಕ ಬರೆದು ಮುಗಿಸಿದ್ದಾರೆ.
ಹಾರ್ಪರ್ ಕಾಲಿನ್ಸ್ ಪುಸ್ತಕದ ಪ್ರಕಾಶಕರಾಗಿರುವ ಈ ಪುಸ್ತಕವನ್ನು ಜುಲೈ 17ರಂದು ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಲೋಕಾರ್ಪಣೆ ಮಾಡಲಿದ್ದಾರೆ. ನಂತರ
ಪರಿಣಿತಿ ಚೋಪ್ರಾ , ನಿರ್ದೇಶಕಿ ಫರ್ಹಾ ಖಾನ್ ಅವರು ಕೂಡಾ ಪುಸ್ತಕಕ್ಕೆ ಪ್ರಚಾರ ನೀಡಲಿದ್ದಾರೆ.
238 ಪುಟಗಳ ಈ ಪುಸ್ತಕದ ಬೆಲೆ 290 ರು ಇರುವ ಏಸ್ ಅಗೇನ್ಸ್ ಆಡ್ಸ್ ಸದ್ಯಕ್ಕೆ ಅನೇಕ ಪುಸ್ತಕ ಮಳಿಗೆಗಳು ಹಾಗೂ ಆನ್ಲೈನ್ ನಲ್ಲಿ ಖರೀದಿಗೆ ಲಭ್ಯವಾಗಿದೆ. (ಎಎನ್ ಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications